ಫಿನಾಲೆ ಮುಗಿವ ಮುಂಚೆಯೇ ಡ್ರೋನ್ ಪ್ರತಾಪ್-ವರ್ತೂರು ಸಂತುಗೆ ಸಿಕ್ತು ಹೊಸ ರಿಯಾಲಿಟಿ ಶೋಗೆ ಆಫರ್
Bigg Boss Kannada: ಬಿಗ್ಬಾಸ್ ಕನ್ನಡದ ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ಗೆ ಬಿಗ್ಬಾಸ್ ಫಿನಾಲೆ ಮುಗಿಯುವ ಮುನ್ನವೇ ಹೊಸ ರಿಯಾಲಿಟಿ ಶೋ ಇಂದ ಹೊಸ ಆಫರ್ ಬಂದಿದೆ.
ಬಿಗ್ಬಾಸ್ ಕನ್ನಡ ಸೀಸನ್ 10 (BiggBoss) ಮುಗಿಯಲು ಕೆಲವು ಗಂಟೆಗಳಷ್ಟೆ ಬಾಕಿ ಇದೆ. ಫಿನಾಲೆ ಈಗಾಗಲೇ ಆರಂಭವಾಗಿದ್ದು, ಫಿನಾಲೆಯ ಮೊದಲ ದಿನ ಶನಿವಾರದ ಎಪಿಸೋಡ್ ಆರಂಭವಾಗಿದೆ. ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಅವರುಗಳು ಮನೆಯ ಒಳಗಿದ್ದಾರೆ. ಇವರಲ್ಲಿ ಒಬ್ಬರು ಮಾತ್ರವೇ ವಿನ್ನರ್ ಆಗಲಿದ್ದಾರೆ. ಇನ್ನುಳಿದವರು ಬರಿಗೈಲಿ ಮನೆಗೆ ತೆರಳಲಿದ್ದಾರೆ (ರನ್ನರ್ ಅಪ್ ಹೊರತುಪಡಿಸಿ) ಆದರೆ ಮನೆಯ ಇಬ್ಬರು ಸ್ಪರ್ಧಿಗಳಿಗೆ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುವ ಮೊದಲೇ ಒಳ್ಳೆಯ ಅವಕಾಶವೊಂದು ದೊರೆತಿದೆ!
ಬಿಗ್ಬಾಸ್ ಮನೆಗೆ ಗಿಚ್ಚಿ-ಗಿಲಿ-ಗಿಲಿ ತಂಡ ಬಂದಿತ್ತು. ನಿರಂಜನ್ ದೇಶಪಾಂಡೆ, ತಮ್ಮ ಇಡೀ ಗಿಚ್ಚ-ಗಿಲಿಗಿಲಿ ತಂಡವನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಮನೆಯ ಸದಸ್ಯರನ್ನು ಮುಂದೆ ಕೂರಿಸಿಕೊಂಡು ತಮಾಷೆಯ ಸ್ಕಿಟ್ ಒಂದನ್ನು ಮಾಡಿದರು. ಸುದೀಪ್ ಅವರ ‘ವೀರಮದಕರಿ’ ಸಿನಿಮಾದ ಹಾಡೊಂದನ್ನು ಬಳಸಿಕೊಂಡು ಸ್ಪರ್ಧಿಗಳ ವ್ಯಕ್ತಿತ್ವವನ್ನು ತಮಾಷೆಯಾಗಿ ಹಾಡಿದರು. ನಿರಂಜನ್ರ ಹಾಡು ಕೇಳಿ ಮನೆಯ ಸದಸ್ಯರು ಬಿದ್ದು-ಬಿದ್ದು ನಕ್ಕರು.
ಈ ವೇಳೆ ನಿರಂಜನ್ ಘೋಷಣೆಯೊಂದನ್ನು ಮಾಡಿದರು. ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ತಮ್ಮ ಗಿಚ್ಚ-ಗಿಲಿಗಿಲಿ ತಂಡ ಸೇರಿಕೊಳ್ಳಲಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರು ನಮ್ಮ ತಂಡ ಸೇರಲಿದ್ದಾರೆ ಎಂದರು. ಇದು ಸ್ವತಃ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ಗೂ ಆಶ್ಚರ್ಯ ತಂದಿತು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ
ಕೊನೆಗೆ, ವರ್ತೂರು ಸಂತೋಷ್ ಅನ್ನು ವೇದಿಕೆಗೆ ಕರೆದ ನಿರಂಜನ್, ವರ್ತೂರು ಕೈಯಲ್ಲಿ ಖಾಲಿ ಪೇಪರ್ಗೆ ಸಹಿ ಹಾಕಿಸಿಕೊಂಡರು. ನೀವು ನಮ್ಮ ತಂಡ ಸೇರಲಿದ್ದೀರಿ ಮಾತ್ರವಲ್ಲದೆ, ನಮ್ಮ ಗಿಚ್ಚಿ-ಗಿಲಿಗಿಲಿ ಹೊಸ ಸೀಸನ್ ಗೆ ಸ್ಪಾನ್ಸರ್ ನೀಡುತ್ತಿದ್ದೀರಿ ಎಂದು ಈ ಒಪ್ಪಂದದಲ್ಲಿ ಬರೆದಿದೆ ಎಂದರು. ನಿರಂಜನ್ ಮಾತಿಗೆ ವರ್ತೂರು ಶಾಕ್ ಆದರು. ನಿರಂಜನ್ ಹೇಳಿದಂತೆ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ನಿಜಕ್ಕೂ ಗಿಚ್ಚಿ-ಗಿಲಿಗಿಲಿ ಸೇರುತ್ತಿಲ್ಲ. ಬದಲಿಗೆ ನಿರಂಜನ್ ದೇಶಪಾಂಡೆ ತಮಾಷೆಗೆ ಈ ಇಬ್ಬರೂ ತಮ್ಮ ತಂಡ ಸೇರುತ್ತಿರುವುದಾಗಿ ಹೇಳಿದರಷ್ಟೆ.
ಗಿಚ್ಚಿ-ಗಿಲಿಗಿಲಿ ತಂಡದವರು ಮನೆಯ ಸದಸ್ಯರ ಬಗ್ಗೆ ಹೇಳಿದ ಹಾಡುಗಳು ಮಜವಾಗಿದ್ದವು. ಪ್ರತಿ ಸದಸ್ಯರ ಬಗ್ಗೆ ಒಂದೊಂದು ಹಾಡುಗಳನ್ನು ಕಟ್ಟಿಕೊಂಡು ಬಂದಿದ್ದರು. ಸದಸ್ಯರು ಮನೆಯಲ್ಲಿ ಆಡಿದ ರೀತಿ, ಅವರ ವ್ಯಕ್ತಿತ್ವವಕ್ಕೆ ಸೂಟ್ ಆಗುವಂತೆ ತಮಾಷೆಭರಿತ ಹಾಡುಗಳನ್ನು ಕಟ್ಟಿಕೊಂಡು ಬಂದಿತ್ತು ತಂಡ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ