‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’; ವಿನಯ್ ಮಾತಿನಿಂದ ಹೆಣ್ಣುಮಕ್ಕಳಿಗೆ ಅವಮಾನ

‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದು ವಿನಯ್ ಕೂಗಾಡಿದರು. ಇದಕ್ಕೆ ಸಂಗೀತಾ ಸಿಟ್ಟಾದರು. ‘ಬಳೆ ಹಾಕ್ಕೊಂಡ್ರೆ ಏನಿವಾಗ? ಏನೋ ಇವಾಗ’ ಎಂದು ಸಂಗೀತಾ ಪ್ರಶ್ನೆ ಮಾಡಿದರು. ಇಡೀ ಮನೆ ರಣರಂಗವಾಗಿ ಬದಲಾಯಿತು.

‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’; ವಿನಯ್ ಮಾತಿನಿಂದ ಹೆಣ್ಣುಮಕ್ಕಳಿಗೆ ಅವಮಾನ
ವಿನಯ್ ಗೌಡ

Updated on: Nov 02, 2023 | 7:41 AM

ನಟ ವಿನಯ್ ಗೌಡ (Vinay Gowda) ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಕಳೆದ ವಾರ ಅವರನ್ನು ಸುದೀಪ್ ಹೊಗಳಿದ್ದರು. ಅವರಿಗೆ ಎದುರಾಳಿ ಯಾರೂ ಇಲ್ಲ ಎಂದು ಹೇಳಲಾಯಿತು. ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ಅವರು ತಪ್ಪು ಮಾಡಿದ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈಗ ವಿನಯ್ ಅವರ ಮಾತು ಎಲ್ಲೆ ಮೀರುತ್ತಿದೆ. ಬಳೆ ಹಾಕಿದವರ ಕೈಯಲ್ಲಿ ಏನೂ ಆಗಲ್ಲ ಎಂಬರ್ಥದಲ್ಲಿ ವಿನಯ್ ಮಾತನಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಹಳ್ಳಿಯ ರೀತಿಯಲ್ಲಿ ಸೆಟ್ ನಿರ್ಮಾಣ ಆಗಿದೆ. ಹಳ್ಳಿಯಲ್ಲಿ ನಡೆಯುವ ಚಟುವಟಿಕೆಗಳನ್ನೇ ಆಯ್ದುಕೊಂಡು ಟಾಸ್ಕ್ ನೀಡಲಾಗುತ್ತಿದೆ. ಮಡಿಕೆ ಮಾಡುವ ಟಾಸ್ಕ್​​ನ ಸ್ಪರ್ಧಿಗಳಿಗೆ ಮೊದಲು ನೀಡಲಾಗಿದೆ. ಈ ವೇಳೆ ವಿನಯ್ ಆಡಿದ ಮಾತು ಸಂಗೀತಾ ಕೋಪಕ್ಕೆ ಕಾರಣ ಆಗಿದೆ.

‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದು ವಿನಯ್ ಕೂಗಾಡಿದರು. ಇದಕ್ಕೆ ಸಂಗೀತಾ ಸಿಟ್ಟಾದರು. ‘ಬಳೆ ಹಾಕ್ಕೊಂಡ್ರೆ ಏನಿವಾಗ? ಏನೋ ಇವಾಗ’ ಎಂದು ಸಂಗೀತಾ ಪ್ರಶ್ನೆ ಮಾಡಿದರು. ‘ಮರ್ಯಾದಿ ಬಿಟ್ಟ ನಿನ್ನ ಬಳಿ ಮಾತೇಕೆ’ ಎಂದು ವಿನಯ್ ಕೂಗಾಡಿದರು. ಇಡೀ ಮನೆ ರಣರಂಗವಾಗಿ ಬದಲಾಯಿತು.

ಸದ್ಯ ವಿನಯ್ ಅವರು ಬಳಕೆ ಮಾಡಿದ ಬಳೆ ಶಬ್ದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರು ಈ ರೀತಿ ಹೇಳಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು ಇದು ಹೆಣ್ಣು ಮಕ್ಕಳಿಗೆ ವಿನಯ್ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ. ವೀಕೆಂಡ್​ನಲ್ಲಿ ಈ ವಿಚಾರ ಇಟ್ಟುಕೊಂಡು ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ

ಮಹಿಳೆಯರು ಬಳೆ ಹಾಕುತ್ತಾರೆ. ಈ ರೀತಿ ಬಳೆ ಹಾಕಿದ ಅನೇಕ ಮಹಿಳೆಯರು ಹಲವು ಸಾಧನೆ ಮಾಡಿದ್ದಾರೆ. ಆದರೆ, ವಿನಯ್ ಹೇಳಿರುವ ಮಾತು ಬೇರೆಯದೇ ಅರ್ಥ ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅವರು ಮಾತನ್ನು ಹಿಂಪಡೆದು, ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕಲರ್ಸ್ ಕನ್ನಡದಲ್ಲಿ ಎಪಿಸೋಡ್ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:39 am, Thu, 2 November 23