‘ಕರ್ಣ’ ಧಾರಾವಾಹಿ: ಅಭಿಮಾನಿಗಳ ಎದುರು ವಿಶೇಷ ಕೋರಿಕೆ ಇಟ್ಟ ನಿತ್ಯಾ-ನಿಧಿ

Karna Serial: ಕರ್ಣ್ ಹಾಗೂ ನಿತ್ಯಾ ಮದುವೆ ಆಗುತ್ತದೆ ಎಂದು ತಿಳಿದಾಗಿನಿಂದ ಫ್ಯಾನ್ಸ್ ಯಾಕೋ ಸಿಟ್ಟಾಗಿದ್ದಾರೆ. ನಿತ್ಯಾ ಹಾಗೂ ನಿಧಿ ಫ್ಯಾನ್ಸ್ ಪರಸ್ಪರ ಬೈದುಕೊಳ್ಳೋದನ್ನು ಕಾಣಬಹುದು. ಈ ವಿಚಾರವಾಗಿ ನಿಧಿ ಹಾಗೂ ನಿತ್ಯಾ ಪಾತ್ರಧಾರಿಗಳು ಸ್ಪಷ್ಟನೆ ನೀಡಿದ್ದಾರೆ. ಪರಸ್ಪರ ಬೈದುಕೊಳ್ಳಬಾರದು ಎಂದು ಕೋರಿದ್ದಾರೆ.

‘ಕರ್ಣ’ ಧಾರಾವಾಹಿ: ಅಭಿಮಾನಿಗಳ ಎದುರು ವಿಶೇಷ ಕೋರಿಕೆ ಇಟ್ಟ ನಿತ್ಯಾ-ನಿಧಿ
ಭವ್ಯಾ-ನಮ್ರತಾ
Updated By: ಮಂಜುನಾಥ ಸಿ.

Updated on: Oct 08, 2025 | 6:00 AM

ಕೆಲವೊಮ್ಮೆ ಧಾರಾವಾಹಿಗಳನ್ನು ವೀಕ್ಷಕರು ಗಂಭೀರವಾಗಿ ಸ್ವೀಕರಿಸುತ್ತಾರೆ. ಅದು ನಿಜ ಜೀವನದಲ್ಲೇ ನಡೆಯುತ್ತಿದೆ ಎಂದು ಭಾವಿಸುವ ಅವರು ಕಲಾವಿದರಿಗೆ ಬಯ್ಯೋದನ್ನು ನೀವು ಕಂಡಿರಬಹುದು. ವಿಲನ್ ಪಾತ್ರಗಳನ್ನು ಮಾಡಿದವರು ಸಾರ್ವಜನಿಕವಾಗಿ ಹೊಡೆತ ತಿಂದಿದ್ದನ್ನು ಕೂಡ ನೀವು ಕಾಣಬಹುದು. ಈ ರೀತಿ ಸಾಕಷ್ಟು ಬಾರಿ ಆಗಿದೆ. ಈಗ ನಿತ್ಯಾ, ನಿಧಿ ಪಾತ್ರದ ವಿಚಾರದಲ್ಲಿ ಹಾಗೆಯೇ ಆಗಿದೆ. ಈ ಬಗ್ಗೆ ಧಾರಾವಾಹಿಯ ಪಾತ್ರಧಾರಿಗಳಾದ ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಅವರು ಮಾತನಾಡಿದ್ದಾರೆ.

‘ಕರ್ಣ’ ಧಾರಾವಾಹಿಯ ಪ್ರಮುಖ ತಿರುವಿನ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಈ ಧಾರಾವಾಹಿಯಲ್ಲಿ ನಿಧಿ (ಭವ್ಯಾ ಗೌಡ) ಹಾಗೂ ಕರ್ಣ (ಕಿರಣ್ ರಾಜ್) ಪ್ರೀತಿ ಮಾಡುತ್ತಾ ಇದ್ದರು. ಇವರ ಪ್ರೀತಿಗೆ ಈಗ ನಿತ್ಯಾ (ನಮ್ರತಾ ಗೌಡ) ಮುಳ್ಳಾಗುತ್ತಿದ್ದಾರೆ. ಹಾಗಂತ ಇವರ ಮಧ್ಯೆ ಅವರು ಬರುತ್ತಾರೆ ಎಂದೇನು ಅಲ್ಲ. ಕರ್ಣ ಹಾಗೂ ನಿಧಿ ವಿವಾಹದ ಬದಲು ಕರ್ಣ-ನಿತ್ಯಾ ವಿವಾಹ ನೆರವೇರುತ್ತದೆ. ಇದು ಹೇಗೆ ಎನ್ನುವ ಪ್ರಶ್ನೆಗೆ ಧಾರಾವಾಹಿಯಲ್ಲಿ ಉತ್ತರ ಸಿಗಬೇಕಿದೆ.

ಕರ್ಣ್ ಹಾಗೂ ನಿತ್ಯಾ ಮದುವೆ ಆಗುತ್ತದೆ ಎಂದು ತಿಳಿದಾಗಿನಿಂದ ಫ್ಯಾನ್ಸ್ ಯಾಕೋ ಸಿಟ್ಟಾಗಿದ್ದಾರೆ. ನಿತ್ಯಾ ಹಾಗೂ ನಿಧಿ ಫ್ಯಾನ್ಸ್ ಪರಸ್ಪರ ಬೈದುಕೊಳ್ಳೋದನ್ನು ಕಾಣಬಹುದು. ಈ ವಿಚಾರವಾಗಿ ನಿಧಿ ಹಾಗೂ ನಿತ್ಯಾ ಪಾತ್ರಧಾರಿಗಳು ಸ್ಪಷ್ಟನೆ ನೀಡಿದ್ದಾರೆ. ಪರಸ್ಪರ ಬೈದುಕೊಳ್ಳಬಾರದು ಎಂದು ಕೋರಿದ್ದಾರೆ.

ನಮ್ರತಾ-ಭವ್ಯಾ ಸ್ಪಷ್ಟನೆ

‘ಇಬ್ಬರಿಗೂ ಡೀ ಮೋಟಿವ್ ಮಾಡೋತರ ಮಾಡಬೇಡಿ. ಇಬ್ಬರೂ ಚೆನ್ನಾಗಿಯೇ ಇದ್ದೇವೆ. ನಿಧಿ ಫ್ಯಾನ್ಸ್ ನಿತ್ಯಾ ಫ್ಯಾನ್ಸ್​ನ ಡಿ ಮೋಟಿವ್ ಮಾಡೋದು ಅಥವಾ ನಿತ್ಯಾ ಫ್ಯಾನ್ಸ್ ನಿಧಿನ ಡಿಮೋಟಿವ್ ಮಾಡೋದು ಸರಿ ಅಲ್ಲ. ಆಫ್​ ಸ್ಕ್ರೀನ್ ನಾವು ಚೆನ್ನಾಗಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ಜೆಲೆಸಿ ಇಲ್ಲ’ ಎಂದು ಇಬ್ಬರೂ ಹೇಳಿದ್ದಾರೆ.

ಇದನ್ನೂ ಓದಿ: ಕರ್ಣನ ತಂದೆ ರಮೇಶ್ ಮುಖವಾಡ ಕಳಚಿಬಿತ್ತು; ದೊಡ್ಡ ಸಂಚು ಬಯಲು

ಸದ್ಯ ‘ಕರ್ಣ’ ಧಾರಾವಾಹಿಯಲ್ಲಿ ವಿವಾಹ ಶಾಸ್ತ್ರಗಳು ನಡೆಯುತ್ತಿವೆ. ನಿತ್ಯಾ ಹಾಗೂ ಸೂರಜ್ ಮದುವೆ ಶಾಸ್ತ್ರಗಳು ನೆರವೇರುವ ರೀತಿಯಲ್ಲಿ ಇದೆ. ಆದರೆ, ಅಲ್ಲಿ ಕೊನೆಗೆ ಕರ್ಣ ಹೇಗೆ ಬರುತ್ತಾನೆ ಎಂಬುದೇ ಸದ್ಯದ ಪ್ರಶ್ನೆ. ಇದರಲ್ಲಿ ಕರ್ಣನ ತಂದೆ ರಮೇಶ್ ಕೈವಾಡ ಕೂಡ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.