ಸಿಎಂ ಸ್ಥಾನದಿಂದ ವೀರೇಂದ್ರ ಪಾಟೀಲರನ್ನು ಇಳಿಸಿದ್ದು ಹೇಗೆ? ಅದರಲ್ಲಿ ಡಿಕೆ ಶಿವಕುಮಾರ್ ಪಾತ್ರವೇನು?

|

Updated on: Jun 11, 2023 | 10:54 PM

Weekend With Ramesh: ವೀರೇಂದ್ರ ಪಾಟೀಲರು ಸಿಎಂ ಸ್ಥಾನದಿಂದ ಇಳಿದು ಬಂಗಾರಪ್ಪನವರು ಸಿಎಂ ಆಗಲು ಡಿ.ಕೆ.ಶಿವಕುಮಾರ್ ಕಾರಣಕರ್ತರಾಗಿದ್ದು ಹೇಗೆ? ವೀಕೆಂಡ್​ ವಿತ್ ರಮೇಶ್​ನಲ್ಲಿ ನೆನಪು ಮೆಲುಕು ಹಾಕಿದ ಡಿಕೆಶಿ.

ಸಿಎಂ ಸ್ಥಾನದಿಂದ ವೀರೇಂದ್ರ ಪಾಟೀಲರನ್ನು ಇಳಿಸಿದ್ದು ಹೇಗೆ? ಅದರಲ್ಲಿ ಡಿಕೆ ಶಿವಕುಮಾರ್ ಪಾತ್ರವೇನು?
ಡಿಕೆ ಶಿವಕುಮಾರ್-ವೀಕೆಂಡ್ ವಿತ್ ರಮೇಶ್
Follow us on

ಡಿ.ಕೆ.ಶಿವಕುಮಾರ್ (DK Shivakumar) ಅವರ ರಾಜಕೀಯ ಜೀವನದಲ್ಲಿ (Political Journey) ಪ್ರಮುಖ ಘಟನೆಗಳಲ್ಲಿ ವೀರೇಂದ್ರ ಪಾಟೀಲರನ್ನು (Veerendra Patil) ಸಿಎಂ ಸ್ಥಾನದಿಂದ ಇಳಿಸಿದ್ದು ಸಹ ಒಂದು ಎನ್ನಲಾಗುತ್ತದೆ. ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಡಿ.ಕೆ.ಶಿವಕುಮಾರ್, ಸಿಎಂ ಆಗಿದ್ದ ವೀರೇಂದ್ರ ಪಾಟೀಲರು ಕೆಳಗೆ ಇಳಿದಿದ್ದು ಹೇಗೆ ಹಾಗೂ ಆ ಸ್ಥಾನಕ್ಕೆ ಬಂಗಾರಪ್ಪನವರು (Bangarappa) ಬಂದಿದ್ದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.

ವೀರೇಂದ್ರ ಪಾಟೀಲರು ಸಿಎಂ ಆಗಿದ್ದ ಸಮಯದಲ್ಲಿ ರಾಮನಗರ-ಚನ್ನಪಟ್ಟಣ ಭಾಗದಲ್ಲಿ ಕೋಮುಗಲಭೆ ಪ್ರಾರಂಭವಾಗಿದ್ದವಂತೆ. ಅದೇ ಸಮಯದಲ್ಲಿ ರಾಜೀವ್ ಗಾಂಧಿ ಅವರು ರಾಜ್ಯಕ್ಕೆ ಬಂದಿದ್ದರಂತೆ. ಅವರ ಹೆಲಿಕಾಪ್ಟರ್​ಗೆ ಪೆಟ್ರೋಲ್ ತುಂಬಲು ರಾಮನಗರದಲ್ಲಿ ನಿರಾಕರಿಸಿದಾಗ ಕಾರಿನಲ್ಲಿ ಬಳ್ಳಾರಿವರೆಗೆ ರಾಜೀವ್ ಗಾಂಧಿ ಪ್ರಯಾಣಿಸಬೇಕಾಯ್ತಂತೆ. ಆಗ ರಾಜೀವ್ ಅವರು ಡಿಕೆ ಶಿವಕುಮಾರ್ ಅವರನ್ನು ಜೊತೆಗೆ ಕರೆದರಂತೆ.

ಹೋಗುತ್ತಾ ದಾರಿಯಲ್ಲಿ ಏನಿದು ಘಟನೆ? ಯಾಕೆ ಆಗಿದೆ? ಸಿಎಂ ಹೇಗೆ? ಸರ್ಕಾರ ಹೇಗೆ ನಡೆಯುತ್ತಿದೆ? ಸಿಎಂ ಆರೋಗ್ಯ ಹೇಗಿದೆ? ಇನ್ನಿತರೆ ವಿಷಯಗಳನ್ನು ಕೇಳಿದರಂತೆ. ”ನಾನೂ ಸಹ ಮುಗ್ಧ ಏನೇನು ನಡೆಯುತ್ತಿದೆಯೋ ಅದನ್ನು ಹೇಳಿದೆ. ಅದಾದ ಬಳಿಕ ತಲುಪಬೇಕಿದ್ದ ಸ್ಥಳ ತಲುಪಿದಾಗ ಅಲ್ಲಿ ಎಸ್ ರಮೇಶ್ ಹಾಗೂ ಗುತ್ತೇದಾರ್ ಇನ್ನಿತರರು ಇದ್ದರಂತೆ. ಏನು ಮಾತನಾಡಿದೆ ಎಂದು ಕೇಳಿದಾಗ ಎಲ್ಲವನ್ನೂ ಹೇಳಿದ್ದಾರೆ. ಅದಾದ ಬಳಿಕ ಯಾರು ಸಿಎಂ ಆಗಬಹುದು ಎಂದು ಕೇಳಿದರೆ ಬಂಗಾರಪ್ಪನವರ ಹೆಸರು ಹೇಳಿಬಿಡು ಎಂದರಂತೆ. ಅಂತೆಯೇ ಡಿ.ಕೆ.ಶಿವಕುಮಾರ್ ಸಹ ಬಂಗಾರಪ್ಪನವರ ಹೆಸರು ಹೇಳಿದ್ದಾರೆ.

ಅದಾದ ಬಳಿಕ ರಾಜೀವ್ ಗಾಂಧಿ ಅವರು ನಾನು ವೀರೇಂದ್ರ ಪಾಟೀಲರ ಆರೋಗ್ಯ ವೀಕ್ಷಿಸಿದ ಬಳಿಕವಷ್ಟೆ ಏನಾದರೂ ಡಿಸಿಷನ್ ತೆಗೆದುಕೊಳ್ಳುತ್ತೇನೆ ಎಂದರಂತೆ. ಅದಾದ ಬಳಿಕ ಡಿ.ಕೆ.ಶಿವಕುಮಾರ್, ಚಂದ್ರಶೇಖರ್ ಮೂರ್ತಿ ಅವರೊಡನೆ ಬಂಗಾರಪ್ಪ ಅವರ ಮನೆಗೆ ತೆರಳಿದರಂತೆ. ತಮ್ಮ ಕಾರಿನಲ್ಲೇ ಬಂಗಾರಪ್ಪನವರನ್ನು ಕರೆದುಕೊಂಡು ರಾಜೀವ್ ಗಾಂಧಿ ಅವರೊಟ್ಟಿಗೆ ನಡೆದ ಘಟನೆಗಳನ್ನು ವಿವರಿಸಿ ನೀವೇ ಸಿಎಂ ಆಗುತ್ತೀರಿ ಎಂದರಂತೆ ಡಿಕೆ ಶಿವಕುಮಾರ್. ಆಗ ಚಂದ್ರಶೇಖರ್, ಬಂಗಾರಪ್ಪ ಸಿಎಂ ಆದರೆ ನೀನು ಲೋಕಸಭೆಗೆ ಸ್ಪರ್ಧಿಸು, ನನಗೆ ನಿನ್ನ ಕ್ಷೇತ್ರ ಬಿಟ್ಟುಕೊಡು ನಾನು ಗೆದ್ದು ಸಚಿವ ಆಗುತ್ತೀನಿ ಎಂದರಂತೆ. ಅದಕ್ಕೆ ಬೈದ ಬಂಗಾರಪ್ಪ, ಪಾಟೀಲರ ಸರ್ಕಾರ ಬೀಳುವುದು ಎಂದರೆ ತಮಾಷೆಯೇ ಸುಮ್ಮನಿರಿ ಎಂದರಂತೆ. ಆಗ ಡಿ.ಕೆ.ಶಿವಕುಮಾರ್ ಖಂಡಿತ ನೀವೇ ಸಿಎಂ ಆಗುತ್ತೀರಿ, ಆದರೆ ಏನು ಮಾಡುತ್ತೀರಿ ಎಂದರಂತೆ. ಆಗ ಬಂಗಾರಪ್ಪನವರು ನಾನು ಸಿಎಂ ಆದರೆ ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಮಾತುಕೊಟ್ಟರಂತೆ ಬಂಗಾರಪ್ಪ.

ಅದಾದ ಬಳಿಕ ಕ್ಯಾಬಿನೆಟ್ ರಚಿಸುವ ವೇಳೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಕರೆದು, ನಾನು ಬಂಧಿಖಾನೆ ಸಚಿವನಾಗಿದ್ದೆ ಸಿಎಂ ಆದೆ, ದೇವರಾಜ್ ಅರಸು ಬಂದಿಖಾನೆ ಸಚಿವರಾಗಿದ್ದರು ಅವರು ಸಿಎಂ ಆದರು. ನಿನ್ನನ್ನು ಜೈಲು ಮಂತ್ರಿ ಮಾಡುತ್ತಿದ್ದೇನೆ ನೀನು ಸಿಎಂ ಆಗುತ್ತೀಯ ಎಂದು ಹೇಳಿ ನನ್ನನ್ನು ಮೊದಲ ಬಾರಿಗೆ ಮಂತ್ರಿ ಮಾಡಿದರು ಎಂದು ನೆನಪು ಮಾಡಿಕೊಂಡರು ಡಿ.ಕೆ.ಶಿವಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ