ಮನೆತೊರೆದು ಹೊರಟಿದ್ದ ಪ್ರೇಮ್​ರ ಒರಟು ವ್ಯಕ್ತಿತತ್ವದಲ್ಲಿ ಬದಲಾವಣೆ ತಂದಿದ್ದು ಆ ಒಂದು ಸಿನಿಮಾ

Weekend With Ramesh: ಬಾಲ್ಯದಲ್ಲಿ ಒರಟನು, ಬಹಳ ಸಿಟ್ಟಿನ ಮನುಷ್ಯ ಆಗಿದ್ದ ಪ್ರೇಮ್​ರ ವ್ಯಕ್ತಿತ್ವ ಬದಲಾಗುವಂತೆ ಮಾಡಿದ್ದು ರಾಜ್​ಕುಮಾರ್ ನಟನೆಯ ಆ ಒಂದು ಸಿನಿಮಾ.

ಮನೆತೊರೆದು ಹೊರಟಿದ್ದ ಪ್ರೇಮ್​ರ ಒರಟು ವ್ಯಕ್ತಿತತ್ವದಲ್ಲಿ ಬದಲಾವಣೆ ತಂದಿದ್ದು ಆ ಒಂದು ಸಿನಿಮಾ
ಪ್ರೇಮ್
Follow us
ಮಂಜುನಾಥ ಸಿ.
|

Updated on: May 07, 2023 | 7:36 PM

ಪ್ರೇಮ್ ಈಗ ಲವ್ಲಿ ಸ್ಟಾರ್ (Lovely Star Prem) ಆಗಿ ಚಿರಪರಿಚಿತರು. ಬೆಂಗಳೂರಿನಲ್ಲಿಯೇ (Bengaluru) ಹುಟ್ಟಿ, ಇಲ್ಲಿಯೇ ಬೆಳೆದ ಪ್ರೇಮ್ ಬಾಲ್ಯದಿಂದಲೂ ಅಂದಗಾರ ಆದರೆ ಅವರ ಅಂದಕ್ಕೂ ಅವರ ವ್ಯಕ್ತಿತ್ವಕ್ಕೂ ಒಪ್ಪುತ್ತಲೇ ಇರಲಿಲ್ಲವಂತೆ ಅಷ್ಟು ಸಿಟ್ಟಿನ, ಒರಟು ವ್ಯಕ್ತಿಯಾಗಿದ್ದರು ಪ್ರೇಮ್. ಅದೇ ಒರಟು ವ್ಯಕ್ತಿತತ್ವದಿಂದಾಗಿ ಒಮ್ಮೆ ಮನೆ ಬಿಟ್ಟು ಹೊರಟು ಹೋಗುವ ಪರಿಸ್ಥಿತಿ ನಿರ್ಮಾಣ ಸಹ ಆಗಿತ್ತಂತೆ ಆದರೆ ಅಂದು ಪ್ರೇಮ್ ನೋಡಿದ ಒಂದು ಸಿನಿಮಾ ಅವರ ಜೀವನವನ್ನು ಬದಲಾಯಿಸಿಬಿಟ್ಟಿದೆ.

ಪ್ರೇಮ್ ಬಹಳ ಶಿಸ್ತಿನ, ಕೋಪದ ಪ್ರವೃತ್ತಿಯವರಾಗಿದ್ದರಂತೆ. ಮೂವರು ತಂಗಿಯರ ಮೇಲಂತೂ ವಿಪರೀತ ಶಿಸ್ತು, ಸಿಟ್ಟು ಪ್ರದರ್ಶಿಸುತ್ತಿದ್ದರಂತೆ. ತಂಗಿಯರ ಮೇಲೆ ಅತಿಯಾದ ಶಿಸ್ತು ಹೇರಿದ್ದರಂತೆ ಹಾಗೂ ಹೊಡೆಯುತ್ತಿದ್ದರಂತೆ ಸಹ. ಅವರು ಬೆಳೆದ ಏರಿಯಾ ಹಾಗಿತ್ತಂತೆ. ರೌಡಿಸಂ, ಪೋಲಿ ಹುಡುಗರ ಹಾವಳಿ ಎಲ್ಲವೂ ಇತ್ತಂತೆ ಅಲ್ಲಿ. ಆ ಕಾರಣಕ್ಕೆ ಪ್ರೇಮ್ ಸಹ ಹಾಗೆಯೇ ಆಗಿಬಿಟ್ಟಿದ್ದರಂತೆ.

ಒಮ್ಮೆ ಹುಡುಗರೊಟ್ಟಿಗೆ ಬುಗುರಿ ಆಡುವಾಗ ಹುಡುಗನೊಬ್ಬ ಏನೋ ಕೆಟ್ಟದಾಗಿ ಮಾತನಾಡಿದ ಎಂದು ಅದೇ ಬುಗುರಿಯಲ್ಲಿ ಅವನ ತಲೆ ತೂತು ಮಾಡಿದ್ದರಂತೆ ಪ್ರೇಮ್. ಆ ನಂತರ ಮನೆಗೆ ಬಂದಾಗ ಮನೆಯ ಬಳಿ ಭಾರಿ ಸಂಖ್ಯೆಯ ಜನ ಸೇರಿ ಜಗಳ ಮಾಡಿದ್ದರಂತೆ. ಪ್ರೇಮ್ ಮನೆಗೆ ಹೋದಾಗ ಅವರ ತಾಯಿ-ತಂದೆ ಬಹಳ ಬೈದಿದ್ದರಂತೆ. ಆ ಅವಮಾನಕ್ಕೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ್ದರಂತೆ ಪ್ರೇಮ್.

ಮನೆ ಬಿಟ್ಟು ಹೋಗುವಾಗ ಅಲ್ಲಿ ಪರದೆ ಕಟ್ಟಿ ಡಾ ರಾಜ್​ಕುಮಾರ್ ನಟನೆಯ, ಬಂಗಾರದ ಮನುಷ್ಯ ಸಿನಿಮಾ ತೋರಿಸುತ್ತಿದ್ದರಂತೆ. ಸರಿ ಎಂದುಕೊಂಡು ಪ್ರೇಮ್ ಯಾವುದೋ ಮನೆ ಮೇಲೆ ಹತ್ತಿ ಟ್ಯಾಂಕರ್ ಪಕ್ಕ ಒಬ್ಬರೇ ಕೂತು ತದೇಕಚಿತ್ತದಿಂದ ಆ ಸಿನಿಮಾ ನೋಡಿದರಂತೆ. ಆ ಸಿನಿಮಾ ಅವರ ವ್ಯಕ್ತಿತ್ವದ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿತಂತೆ. ಆ ಸಿನಿಮಾ ನೋಡಿದ ಬಳಿಕ, ನಾನು ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಬೇಕು, ಜೀವನದಲ್ಲಿ ಕೆಲವಾದರೂ ಆದರ್ಶಗಳನ್ನು ಇಟ್ಟುಕೊಳ್ಳಬೇಕು ಎಂದುಕೊಂಡರಂತೆ. ಅದಾದ ಮೇಲೆ ಒಳ್ಳೆಯತನದಿಂದ ಬದುಕಲು ಆರಂಭಿಸಿದರಂತೆ, ಸಿಟ್ಟು ತ್ಯಜಿಸಿದರಂತೆ, ತಂಗಿಯರ ಮೇಲೆ ಕೈಮಾಡುವುದು ಬಿಟ್ಟರಂತೆ. ಆದರ್ಶಗಳನ್ನು ಹೊಂದಿ ಅದಕ್ಕಾಗಿ ಬದುಕುವುದು ರೂಢಿ ಮಾಡಿಕೊಂಡರಂತೆ.

ಪ್ರೇಮ್ ಅವರೇ ವೀಕೆಂಡ್ ವಿತ್ ರಮೇಶ್​ನಲ್ಲಿ ಹೇಳಿಕೊಂಡಿರುವಂತೆ, ಸಿನಿಮಾಗಳು ಜೀವನವನ್ನೇ ಬದಲಾಯಿಸಿಬಿಡಬಲ್ಲವು, ನನ್ನ ಜೀವನದಲ್ಲಿ ಇದು ಸತ್ಯವಾಗಿದೆ. ಎಲ್ಲ ಸಿನಿಮಾಗಳಲ್ಲಿಯೂ ಸಂದೇಶಗಳಿರುತ್ತವೆ ಆದರೆ ಸಿನಿಮಾದಿಂದ ನಾವು ಯಾವುದನ್ನು ಅಳವಡಿಸಿಕೊಳ್ಳುತ್ತೇವೆ ಎಂಬುದಷ್ಟೆ ಮುಖ್ಯ ಎಂದಿದ್ದಾರೆ ಪ್ರೇಮ್.

ಪ್ರೇಮ್, ನಟರಾಗವ ಮುಂಚೆಯೇ ದೊಡ್ಡ ಸಿನಿಮಾ ಅಭಿಮಾನಿ ಆಗಿದ್ದವರು. ಪ್ರೇಮ್ ಅವರು ತರಗತಿಯಲ್ಲಿದ್ದಾಗಲೂ ಅವರ ತಂದೆ ಬಂದು ಮಗನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಕಳಿಸಿ ಎಂದು ಹೇಳಿ ಪ್ರೇಮ್​ರನ್ನು ಕರೆದುಕೊಂಡು ಪಲ್ಲವಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ತೋರಿಸುತ್ತಿದ್ದರಂತೆ. ಯೌವ್ವನಕ್ಕೆ ಬಂದ ಬಳಿಕವಂತೂ ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೂ ತಪ್ಪದೆ ನೋಡುತ್ತಿದ್ದರಂತೆ ಪ್ರೇಮ್. ಕೆಲವು ಸಿನಿಮಾಗಳನ್ನಂತೂ 10-20 ಭಾರಿ ಸಹ ನೋಡಿದ್ದರಂತೆ. ಶಾರುಖ್ ಖಾನ್​ರ ಬಹುದೊಡ್ಡ ಅಭಿಮಾನಿ ಆಗಿದ್ದರಂತೆ ನಟ ಪ್ರೇಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ