ಡ್ರೋನ್ ಪ್ರತಾಪ್​ಗೆ ಫಿನಾಲೆ ಟಿಕೆಟ್ ಕೊಟ್ಟಿಲ್ಲವೇಕೆ? ಸುದೀಪ್ ಕೊಟ್ಟರು ಅಭಿಪ್ರಾಯ

|

Updated on: Jan 13, 2024 | 11:55 PM

Bigg Boss Kannada: ಟಾಸ್ಕ್​ಗಳಲ್ಲಿ ಹೆಚ್ಚು ಅಂಕ ಗಳಿಸಿದ ಡ್ರೋನ್ ಪ್ರತಾಪ್​ಗೆ ಏಕೆ ನೇರ ಫಿನಾಲೆ ಟಿಕೆಟ್ ನೀಡಲಿಲ್ಲ, ಮತಚಲಾವಣೆ ನಡೆಸಿ ಸಂಗೀತಾಗೆ ಕೊಟ್ಟಿದ್ದೇಕೆ? ಸುದೀಪ್ ಕೊಟ್ಟರು ಸ್ಪಷ್ಟನೆ.

ಡ್ರೋನ್ ಪ್ರತಾಪ್​ಗೆ ಫಿನಾಲೆ ಟಿಕೆಟ್ ಕೊಟ್ಟಿಲ್ಲವೇಕೆ? ಸುದೀಪ್ ಕೊಟ್ಟರು ಅಭಿಪ್ರಾಯ
ಬಿಗ್​ಬಾಸ್
Follow us on

ಬಿಗ್​ಬಾಸ್ (BiggBoss)​ ಕನ್ನಡ ಸೀಸನ್ 10ರಲ್ಲಿ ಈ ವಾರ ಆಟಗಾರರ ನಡುವೆ ಸ್ಪರ್ಧೆ ಜೋರಾಗಿತ್ತು ಅದಕ್ಕೆ ಕಾರಣ ಫಿನಾಲೆ ಟಿಕೆಟ್. ಈ ವಾರ ಹೆಚ್ಚು ಟಾಸ್ಕ್​ಗಳಲ್ಲಿ ಗೆದ್ದು ಮುಂಚೂಣಿಯಲ್ಲಿರುವವರು ಫಿನಾಲೆಗೆ ನೇರ ಟಿಕೆಟ್ ಪಡೆಯುತ್ತಾರೆಂಬ ಕಾರಣಕ್ಕೆ ಎಲ್ಲರೂ ಸಹ ಶಕ್ತಿ ಮೀರಿ ಆಟ ಆಡಿದರು. ಅಂತಿಮವಾಗಿ ಡ್ರೋನ್ ಪ್ರತಾಪ್ ಅತಿ ಹೆಚ್ಚು ಅಂಕ ಗಳಿಸಿದರು. ಡ್ರೋನ್ ಪ್ರತಾಪ್​ ನೇರವಾಗಿ ಫಿನಾಲೆಗೆ ಹೋದರು ಎಂದು ಮನೆಯ ಸದಸ್ಯರು ಅಂದುಕೊಂಡಿದ್ದರು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಬಿಗ್​ಬಾಸ್ ಮನೆಯವರಿಂದ ಮತದಾನ ನಡೆಸಿ ಅದರಲ್ಲಿ ಗೆದ್ದ ಸಂಗೀತಾಗೆ ಫಿನಾಲೆ ಟಿಕೆಟ್ ನೀಡಿದರು.

ಈ ಬಗ್ಗೆ ಹೊರಗಡೆ ಹಲವರು ಪ್ರಶ್ನೆ ಮಾಡಿದರು. ವೋಟಿಂಗ್ ಮೂಲಕ ಟಿಕೆಟ್ ನೀಡುವುದಾದರೆ ಟಾಸ್ಕ್ ನಡೆಸಿದ್ದು ಏಕೆ? ಹೆಚ್ಚು ಮತ ಗಳಿಸಿದ ಡ್ರೋನ್ ಪ್ರತಾಪ್​ಗೆ ನೇರವಾಗಿ ಟಿಕೆಟ್ ನೀಡಲಿಲ್ಲ ಏಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಶನಿವಾರದ ಎಪಿಸೋಡ್​ಗೆ ಬಂದ ಸುದೀಪ್, ಇದೇ ಪ್ರಶ್ನೆಯನ್ನಿಟ್ಟುಕೊಂಡೇ ಎಪಿಸೋಡ್ ಪ್ರಾರಂಭ ಮಾಡಿದರು.

ಇದನ್ನೂ ಓದಿ:ಆಪ್ತ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರೇ ತುಕಾಲಿ ಸಂತೋಷ್?

ಮೊದಲಿಗೆ ಮನೆಯ ಸದಸ್ಯರ ಅಭಿಪ್ರಾಯಗಳನ್ನು ಕೇಳಿದರು. ಆಗ ಡ್ರೋನ್ ಪ್ರತಾಪ್ ಸೇರಿದಂತೆ ಎಲ್ಲರೂ ಬಿಗ್​ಬಾಸ್ ನಿರ್ಣಯ ಸರಿಯಾಗಿಯೇ ಇತ್ತು ಎಂದರು. ಬಹುತೇಕರು, ಪ್ರತಾಪ್ ಇಷ್ಟು ದಿನ ಸರಿಯಾಗಿ ಆಡಲಿಲ್ಲ, ಆದರೆ ಈ ವಾರ ಮಾತ್ರವೇ ಚೆನ್ನಾಗಿ ಆಡಿದರು. ಅವರಿಗೆ ಟಿಕೆಟ್ ಕೊಟ್ಟಿದ್ದರೆ ಮೊದಲಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದವರಿಗೆ ಅನ್ಯಾಯವಾಗುತ್ತದೆ ಎಂಬ ಅಭಿಪ್ರಾಯ ಮೂಡಿಬಂತು. ಕೇವಲ ಒಂದು ವಾರದ ಪ್ರದರ್ಶನದಿಂದ ಫಿನಾಲೆಗೆ ಹೋಗುವುದು ನ್ಯಾಯವಲ್ಲ ಎನಿಸಿತು ಎಂದು ಹಲವರು ಅಭಿಪ್ರಾಯಪಟ್ಟರು.

ಸುದೀಪ್ ಸಹ ಮಾತನಾಡುತ್ತಾ, ಬಿಗ್​ಬಾಸ್ ಎಂಬುದು ಒಂದು ವಾರದ ಆಟವಷ್ಟೆ ಅಲ್ಲ, ಅಲ್ಲದೇ ಕೇವಲ ಆಟ ಮಾತ್ರವೇ ಅಲ್ಲ ಮನೆಯಲ್ಲಿ ಇಷ್ಟು ದಿನಗಳ ಆಟಗಾರರ ವ್ಯಕ್ತಿತ್ವವೂ ಅದಕ್ಕೆ ಸೇರಿರುತ್ತದೆ. ವೀಕ್ಷಕರ ಅಭಿಪ್ರಾಯದ ಜೊತೆಗೆ, ಮನೆಯ ಒಳಗಿರುವವರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಅದೆಲ್ಲದಕ್ಕಿಂತಲೂ ಮುಖ್ಯವಾಗಿ, ಬಿಗ್​ಬಾಸ್ ಘೋಷಣೆ ಮಾಡಿದಾಗಲೇ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರು ಫಿನಾಲೆಗೆ ಟಿಕೆಟ್ ಪಡೆಯಲಿದ್ದಾರೆ ಎಂದೇ ಘೋಷಿಸಿದ್ದರು. ಮನೆಯಲ್ಲಿರುವವರಿಗೆ ಹಾಗೂ ಪ್ರೇಕ್ಷಕರಿಗೆ ಈ ಸ್ಪಷ್ಟನೆ ನನಗೆ ಕೊಡಬೇಕು ಅನ್ನಿಸುತ್ತಿದೆ ಹಾಗಾಗಿ ಕೊಡುತ್ತಿದ್ದೇನೆ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 pm, Sat, 13 January 24