
ಜೀ ಕನ್ನಡ (Zee Kannada) ವಾಹಿನಿ ಕಿರುತೆರೆ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದೆ. ಹೊಸ ಹೊಸ ಧಾರಾವಾಹಿಗಳ ಮೂಲಕ ಜನರ ಎದುರು ಬರುವ ಪ್ರಯತ್ನದಲ್ಲಿ ಈ ಧಾರಾವಾಹಿ ಇದೆ. ಇತ್ತೀಚೆಗೆ ಜೀ ಕನ್ನಡ ವಾಹಿನಿ ತನ್ನ ಲೋಗೋ ಹಾಗೂ ಟ್ಯಾಗ್ಲೈನ್ನ ಬದಲಾಯಿಸಿದೆ. ಈ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. 1.2 ಕೋಟಿ ಮನೆ ಹಾಗೂ 4.5 ಕೋಟಿ ವೀಕ್ಷಕರನ್ನು ತಲುಪಿದ್ದಾಗಿ ವಾಹಿನಿಯವರು ಹೇಳಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಧ್ಯೇಯದೊಂದಿಗೆ ಮುನ್ನುಗ್ಗುತ್ತಿದೆ. ಈ ಪೋಸ್ಟರ್ನಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಾಣುವ ‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’, ‘ಲಕ್ಷ್ಮೀ ನಿವಾಸ’, ‘ನಾ ನಿನ್ನ ಬಿಡಲಾರೆ’ ಸೇರಿದಂತೆ ಎಲ್ಲಾ ಧಾರಾವಾಹಿಯ ಕಲಾವಿದರನ್ನು ನೀವು ಕಾಣಬಹುದು.
ಇತ್ತೀಚೆಗೆ 23ನೇ ಜೀ ಸಿನಿ ಅವಾರ್ಡ್ಸ್ 2025 ಆಯೋಜನೆ ಮಾಡಲಾಗಿತ್ತು. ಈ ವೇಳೆ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಹೆಸರಿನ ಅಭಿಯಾನವನ್ನು ಆರಂಭಿಸಲಾಗಿದೆ. ಎಲ್ಲಾ ಏಳು ಭಾಷೆಗಳಲ್ಲಿ ಈ ಅಭಿಯಾನ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿದೆ ಅನ್ನೋದು ವಿಶೇಷ.
ಜೀ ಕನ್ನಡಕ್ಕೆ ‘ಸದಾ ನಿಮ್ಮೊಂದಿಗೆ’ ಎನ್ನುವ ಧ್ಯೆಯವನ್ನು ಇಟ್ಟುಕೊಂಡಿದೆ. ಇಲ್ಲಿ ಕೇವಲ ಕಂಟೆಂಟ್ಗಳನ್ನು ಮಾತ್ರ ನೀಡದೆ ಧಾರಾವಾಹಿಗಳ ಮೂಲಕ ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗು ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿಯುವ ಪ್ರಯತ್ನ ನಡೆಯಲಿದೆ.
‘ಬದುಕಲ್ಲೂ ಅವರದ್ದೇ ಆದ ಒಂದಷ್ಟು ಕಥೆಗಳಿರುತ್ತವೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಆದರೆ ನಮ್ಮದೇ ಅನ್ನಿಸುವಷ್ಟು ಆಪ್ತ ಕಥೆ. ಜನರು ಹತ್ತಿರವಾದಾಗ, ಹೃದಯಗಳು ಬೆಸೆದುಕೊಂಡಾಗ, ನನ್ನ ಕಥೆ ಎಂಬ ಚೌಕಟ್ಟು ಮುರಿದು ಅವು ನಮ್ಮ ಕಥೆಗಳಾಗುತ್ತವೆ. ಜೀ ನಿಮಗಾಗಿ ನಿಮ್ಮದೆನಿಸುವ ಕಥೆಗಳನ್ನು ಸದಾ ತರುತ್ತದೆ. ಇವು ನಿಮ್ಮ ಹೃದಯ ಬಡಿತವನ್ನು ಆಲಿಸಬಲ್ಲ ಕಥೆಗಳು, ನೀವು ಹೇಳದೆ ಉಳಿಸಿದ್ದನ್ನು ಹೇಳಬಲ್ಲ ಕಥೆಗಳು, ನಿಜವಾಗಿಯೂ ನಿಮ್ಮದೇ ಕಥೆಗಳು’ ಎಂದು ಜೀ ವಾಹನಿ ಬರೆದುಕೊಂಡಿದೆ.
ಇದನ್ನೂ ಓದಿ: ‘ಅವನ ನಟನೆ ನೋಡೋದೇ ಆನಂದ’; ಜೀ ಕನ್ನಡ ವೇದಿಕೆ ಮೇಲೆ ರಾಕೇಶ್ ಪೂಜಾರಿಗೆ ವಿಶೇಷ ಗೌರವ
ಜೀ ಕನ್ನಡ ವಾಹಿನಿ ಸದ್ಯ ಟಿಆರ್‌ಪಿ ವಿಚಾರದಲ್ಲಿ ಮುಂದಿದೆ. ಪ್ರತಿ ವಾರ ಟಾಪ್ ಐದು ಧಾರಾವಾಹಿಗಳಲ್ಲಿ ಈ ವಾಹಿನಿಯೇ ಮುಂದಿರುತ್ತದೆ. ಅದರಂತೆ ‘ಸರೆಗಮಪ’, ‘ಭರ್ಜರಿ ಬ್ಯಾಚುಲರ್ಸ್’, ‘ಮಹಾನಟಿ’ ರೀತಿಯ ರಿಯಾಲಿಟಿ ಶೋಗಳ ಮೂಲಕ ಜನ ಮನ ಗೆದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.