Exclusive: ಶೀಘ್ರವೇ ಪೂರ್ಣಗೊಳ್ಳಲಿದೆ ‘ಗಟ್ಟಿಮೇಳ’; ಹೊಸ ಧಾರಾವಾಹಿ ಶೂಟ್​ಗೆ ನಡೆದಿದೆ ಸಿದ್ಧತೆ

|

Updated on: Oct 28, 2023 | 11:27 AM

‘ಗಟ್ಟಿಮೇಳ’ ಧಾರಾವಾಹಿ ಆರಂಭ ಆಗಿದ್ದು 2019ರ ಮಾರ್ಚ್ ತಿಂಗಳಲ್ಲಿ. ಈಗಾಗಲೇ ಧಾರಾವಾಹಿ 1100+ ಎಪಿಸೋಡ್​​ಗಳನ್ನು ಪೂರ್ಣಗೊಳಿಸಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈಗ ಧಾರಾವಾಹಿ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ.

Exclusive: ಶೀಘ್ರವೇ ಪೂರ್ಣಗೊಳ್ಳಲಿದೆ ‘ಗಟ್ಟಿಮೇಳ’; ಹೊಸ ಧಾರಾವಾಹಿ ಶೂಟ್​ಗೆ ನಡೆದಿದೆ ಸಿದ್ಧತೆ
ಗಟ್ಟಿಮೇಳ
Follow us on

ರಕ್ಷ್ ಹಾಗೂ ನಿಶಾ ರವಿಕೃಷ್ಣನ್ ಮುಖ್ಯಭೂಮಿಕೆಯಲ್ಲಿರುವ ‘ಗಟ್ಟಿಮೇಳ’ ಧಾರಾವಾಹಿ ಪೂರ್ಣಗೊಳ್ಳಲಿದೆ ಎನ್ನುವ ಸುದ್ದಿ ಕಳೆದ ಕೆಲ ತಿಂಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಈ ಬಗ್ಗೆ ವಾಹಿನಿಯವರ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ‘ಗಟ್ಟಿಮೇಳ’ ಧಾರಾವಾಹಿ (Gattimela Serial) ಶೀಘ್ರದಲ್ಲೇ ಕೊನೆಗೊಳ್ಳುವುದು ನಿಜವಂತೆ. ಸದ್ಯ ಕಥೆ ಕೊನೆಯ ಹಂತ ತಲುಪಿದೆ. ಹೊಸ ಧಾರಾವಾಹಿ ಒಂದಕ್ಕೆ ಶೂಟಿಂಗ್ ಕೂಡ ಆರಂಭ ಆಗಿದೆ.  ಈ ವಿಚಾರ ಕೇಳಿ ‘ಗಟ್ಟಿಮೇಳ’ ಧಾರಾವಾಹಿ ವೀಕ್ಷರಿಗೆ ಬೇಸರ ಆಗಿದೆ.

‘ಗಟ್ಟಿಮೇಳ’ ಧಾರಾವಾಹಿ ಆರಂಭ ಆಗಿದ್ದು 2019ರ ಮಾರ್ಚ್ ತಿಂಗಳಲ್ಲಿ. ಈಗಾಗಲೇ ಧಾರಾವಾಹಿ 1100+ ಎಪಿಸೋಡ್​​ಗಳನ್ನು ಪೂರ್ಣಗೊಳಿಸಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈಗ ಧಾರಾವಾಹಿ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ.

ಧ್ರುವ ಇಷ್ಟುದಿನ ವೀಲ್​ಚೇರ್ ​ಮೇಲಿದ್ದ. ಆತ ಚೇತರಿಸಿಕೊಂಡಿದ್ದಾನೆ. ಸದ್ಯ ಆತ ಸುಹಾಸಿನಿ ವಿರುದ್ಧ ನಿಂತಿದ್ದಾನೆ. ಇನ್ನು, ವೈದೇಹಿ ಪರವಾಗಿ ಅಜ್ಜಿ ನಿಂತಿದ್ದು, ಸುಹಾಸಿನಿಗೆ ತಿರುಗೇಟು ಕೊಡುತ್ತಿದ್ದಾಳೆ. ವೈದೇಹಿಯೇ ವೇದಾಂತ್ ಅಮ್ಮ ಎಂಬ ಸತ್ಯ ಗೊತ್ತಾಗುವ ಸನಿಹದರಲ್ಲಿದೆ. ವೇದಾಂತ್ ತಂದೆ ಸೂರ್ಯ ನಾರಾಯಣ್​ ಶೀಘ್ರವೇ ಮನೆಗೆ ಮರಳಬಹುದು. ಈ ಮೂಲಕ ವೇದಾಂತ್ ಮನೆ ಒಂದು ಹ್ಯಾಪಿ ಫ್ಯಾಮಿಲಿ ಆಗಲಿದೆ. ಆ ಬಳಿಕ ಧಾರಾವಾಹಿ ಪೂರ್ಣಗೊಳ್ಳಲಿದೆ.

ಹಾಗಾದರೆ, ‘ಗಟ್ಟಿಮೇಳ’ ಧಾರಾವಾಹಿಯ ಜಾಗಕ್ಕೆ ಬರೋದು ಯಾವ ಧಾರಾವಾಹಿ? ಅದಕ್ಕೂ ಉತ್ತರ ಇದೆ. ಸದ್ಯ ಹೊಸ ಧಾರಾವಾಹಿಯೊಂದರ ಶೂಟಿಂಗ್ ಆರಂಭ ಆಗಿದೆ. ಕೌಟುಂಬಿಕ ಕಥಾ ಹಂದರವನ್ನು ಈ ಧಾರಾವಾಹಿ ಒಳಗೊಂಡಿದೆ. ‘ಗಟ್ಟಿಮೇಳ’ ಧಾರಾವಾಹಿ ಪೂರ್ಣಗೊಂಡ ಬಳಿಕ ಈ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯಿಂದ ಶೀಘ್ರವೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಟಿಆರ್​ಪಿಯಲ್ಲಿ ‘ಸೀತಾ ರಾಮ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿ ಮಧ್ಯೆ ಟಫ್ ಕಾಂಪಿಟೇಷನ್

ರಕ್ಷ್ ರಾಮ್ ಅವರು ಈಗ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಅವರು ‘ಬರ್ಮ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಬಹದ್ದೂರ್’, ‘ಭರ್ಜರಿ’ ಮೊದಲಾದ ಯಶಸ್ವಿ ಸಿನಿಮಾಗಳನ್ನು ನೀಡಿದ ಚೇತನ್ ಕುಮಾರ್ ಅವರು ‘ಬರ್ಮ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಲೇ ನಿರೀಕ್ಷೆ ಸೃಷ್ಟಿ ಆಗಿದೆ. ಇತ್ತೀಚೆಗೆ ಸಿನಿಮಾದ ಮುಹೂರ್ತ ನೆರವೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ