‘ಅಬ್ಬಬ್ಬ ಅಂಥ ಸಿನಿಮಾ ನೋಡಿರಲಿಲ್ಲ’ ಕನ್ನಡ ಚಿತ್ರದ ಬಗ್ಗೆ ತೆಲುಗು ನಟ ಮಾತು

KGF 2 movie: ವಿಶ್ವ ಚಿತ್ರರಂಗ ತಿರುಗಿ ನೋಡುವಂಥಹಾ ಕೆಲ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಿರ್ಮಾಣ ಆಗಿವೆ. ಪರಭಾಷೆ ನಟ-ನಟಿಯರು ಕನ್ನಡ ಸಿನಿಮಾಗಳನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಹಾಸ್ಯ ನಟನಾಗಿ, ವಿಲನ್ ಆಗಿ ನಟಿಸುತ್ತಿರುವ ನಟ ಸುನಿಲ್ ಇದೀಗ ತಮಗೆ ಅದ್ಭುತ ಎನಿಸಿದ ಕನ್ನಡದ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಅಬ್ಬಬ್ಬ ಅಂಥ ಸಿನಿಮಾ ನೋಡಿರಲಿಲ್ಲ’ ಕನ್ನಡ ಚಿತ್ರದ ಬಗ್ಗೆ ತೆಲುಗು ನಟ ಮಾತು
Telugu Actor Sunil

Updated on: Aug 11, 2026 | 4:39 PM

ಕನ್ನಡ ಸಿನಿಮಾಗಳ (Kannada Cinema) ಬಗ್ಗೆ ಪರಭಾಷೆ ಚಿತ್ರರಂಗದವರು ಗೇಲಿ ಮಾಡುತ್ತಿದ್ದ ಸಮಯ ಒಂದಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸಮಯ ಸಾಕಷ್ಟು ಬದಲಾಗಿದೆ. ವಿಶ್ವ ಚಿತ್ರರಂಗ ತಿರುಗಿ ನೋಡುವಂಥಹಾ ಕೆಲ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಿರ್ಮಾಣ ಆಗಿವೆ. ಪರಭಾಷೆ ನಟ-ನಟಿಯರು ಕನ್ನಡ ಸಿನಿಮಾಗಳನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಹಾಸ್ಯ ನಟನಾಗಿ, ವಿಲನ್ ಆಗಿ ನಟಿಸುತ್ತಿರುವ ನಟ ಸುನಿಲ್ ಇದೀಗ ತಮಗೆ ಅದ್ಭುತ ಎನಿಸಿದ ಕನ್ನಡದ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಸುನಿಲ್ ಈ ಹಿಂದೆ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಕನ್ನಡದ ‘ಜೋಡೆತ್ತು’ ಸಿನಿಮಾನಲ್ಲಿ ನಟಿಸಲು ಬಂದಿದ್ದಾರೆ. ಈ ವೇಳೆ ಕನ್ನಡದಲ್ಲಿ ತಾವು ನೋಡಿದ ಸಿನಿಮಾ, ತಮಗೆ ಇಷ್ಟವಾದ ಸಿನಿಮಾಗಳ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ‘ನಾನು ಕನ್ನಡದ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ, ಕಾಶಿನಾಥ್ ಅವರಿಂದ ಹಿಡಿದು ಉಪೇಂದ್ರ ಅವರ ಸಿನಿಮಾಗಳನ್ನು ಸಹ ನೋಡಿದ್ದೇನೆ. ಕನ್ನಡದಿಂದ ತೆಲುಗಿಗೆ ಡಬ್ ಆದ ಸಿನಿಮಾಗಳು, ರೀಮೇಕ್ ಆದ ಸಿನಿಮಾಗಳು, ನೇರವಾಗಿ ಕನ್ನಡದ ಸಿನಿಮಾಗಳನ್ನು ಸಹ ನಾನು ನೋಡಿದ್ದೀನಿ’ ಎಂದು ಸುನಿಲ್ ಹೇಳಿದ್ದಾರೆ.

ತಮಗೆ ಇಷ್ಟವಾದ ಕನ್ನಡದ ಸಿನಿಮಾ ಬಗ್ಗೆ ಮಾತನಾಡುತ್ತಾ, ತಮಗೆ ‘ಕೆಜಿಎಫ್ 2’ ಬಹಳ ಇಷ್ಟವಾಯ್ತು ಎಂದಿದ್ದಾರೆ. ಅದೊಂದು ಅದ್ಭುತ, ಅಂಥಹಾ ಹೀರೋಯಿಸಂ ಉಳ್ಳ ಇನ್ನೊಂದು ಸಿನಿಮಾ ಅನ್ನು ನಾನು ಈ ವರೆಗೆ ನೋಡಿಲ್ಲ. ಅಬ್ಬ, ಸಿನಿಮಾದ ಪ್ರಾರಂಭದಿಂದ ಕೊನೆಯ ವರೆಗೂ ಹೀರೋಯಿಸಂ, ಹೀರೋ ಎಲಿವೇಷನ್ ಒಟ್ಟಾರೆ ಆ ಸಿನಿಮಾ ಅತ್ಯದ್ಭುತ. ಸಿನಿಮಾ ಎಂದರೆ, ಹೀರೋಯಿಸಂ ಎಂದರೆ ಹೀಗಿರಬೇಕು ಎಂದು ತೋರಿಸಿದ ಸಿನಿಮಾ ಅದು’ ಎಂದು ಕೊಂಡಾಡಿದ್ದಾರೆ ನಟ ಸುನಿಲ್.

ಇದನ್ನೂ ಓದಿ:ಕನ್ನಡ, ತೆಲುಗು, ತಮಿಳು ಬಳಿಕ ಮಲಯಾಳಂಗೆ ಹೊರಟ ರುಕ್ಮಿಣಿ, ಸಿನಿಮಾ ಯಾವುದು?

‘ನಾನು ‘ಕೆಜಿಎಫ್’ ಸಿನಿಮಾ ನೋಡಿದ್ದೆ, ನನಗೆ ಅದು ಇಷ್ಟವಾಗಿತ್ತು. ಆದರೆ ‘ಕೆಜಿಎಫ್ 2’ ಮೊದಲ ಭಾಗವನ್ನು ಭಾರಿ ಅಂತರದಿಂದ ಬೀಟ್ ಮಾಡಿತು. ಅಂಥಹಾ ಹೀರೋ ಎಲಿವೇಷನ್ ಸಿನಿಮಾ ಆ ವರೆಗೆ ನಾನು ನೋಡಿರಲೇ ಇಲ್ಲ. ಆ ಅದ್ಧೂರಿತನ, ಆ ಮ್ಯೂಸಿಕ್ ಎಲ್ಲವೂ ಅದ್ಭುತವಾಗಿತ್ತು’ ಎಂದು ಸುನಿಲ್ ಹೇಳಿದ್ದಾರೆ.

ಸುನಿಲ್ ಅವರು ಈಗ ಚಿಕ್ಕಣ್ಣ ನಟನೆಯ ‘ಜೋಡೆತ್ತು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸುಧಾಕರ್ ನಿರ್ದೇಶಿಸುತ್ತಿದ್ದು, ಕಟ್ಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮೈಸೂರಿನ ಹೊರಭಾಗದಲ್ಲಿ ಸಾವಿರಾರು ಸಹ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಮುಗಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us