ಕೊರೊನಾದಿಂದ ಟಾಲಿವುಡ್​ ನಟ TNR ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು

| Updated By: ರಾಜೇಶ್ ದುಗ್ಗುಮನೆ

Updated on: May 10, 2021 | 4:04 PM

TNR Death: ಟಿಎನ್​ಆರ್​ ಅವರು ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ನಟ ನಾನಿ, ನಿರ್ಮಾಪಕ ಬಂಡ್ಲ ಗಣೇಶ್​, ನಿರ್ದೇಶಕ ಮಾರುತಿ ಸೇರಿದಂತೆ ಅನೇಕರು ಟಿಎನ್​ಆರ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕೊರೊನಾದಿಂದ ಟಾಲಿವುಡ್​ ನಟ TNR ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು
ಟಿಎನ್ಆರ್
Follow us on

ಕೊರೊನಾದಿಂದ ಸಂಭವಿಸುತ್ತಿರುವ ಸೆಲೆಬ್ರಿಟಿಗಳ ಸಾವಿನ ಸರಣಿ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಎಲ್ಲ ಭಾಷೆಯ ಚಿತ್ರರಂಗದ ಕಲಾವಿದರು ಈ ಮಹಾಮಾರಿಗೆ ಬಲಿ ಆಗುತ್ತಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟ ಟಿಎನ್​ಆರ್​ ಅವರು ಸೋಮವಾರ (ಮೇ 10) ಹೈದರಾಬಾದ್​ನಲ್ಲಿ ನಿಧನರಾದರು. ಟಿಎನ್​ಆರ್​ ಎಂದೇ ಫೇಮಸ್​ ಆಗಿದ್ದ ಅವರ ಪೂರ್ಣ ಹೆಸರು ತುಮ್ಮಲ ನರಸಿಂಹ ರೆಡ್ಡಿ. ಅವರ ಅಗಲಿಕೆಗೆ ಟಾಲಿವುಡ್​ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.

ಸಿನಿಮಾ ಪತ್ರಕರ್ತರಾಗಿದ್ದ ಟಿಎನ್​ಆರ್​ ಅವರು ತಮ್ಮ ಯೂಟ್ಯೂಬ್​ ಚಾನಲ್​ ಮೂಲಕ ಹಲವಾರು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದರು. ಮಹಾಮಹೇಶ್ವರ ಉಗ್ರ ರೂಪಸ್ಯ, ಹಿಟ್​, ಜಾರ್ಜ್​ ರೆಡ್ಡಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದರು. ನಟ ನಾನಿ, ನಿರ್ಮಾಪಕ ಬಂಡ್ಲ ಗಣೇಶ್​, ನಿರ್ದೇಶಕ ಮಾರುತಿ ಸೇರಿದಂತೆ ಅನೇಕರು ಟಿಎನ್​ಆರ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

‘ಟಿಎನ್​ಆರ್​ ಅವರು ನಿಧನರಾದರು ಎಂಬ ಸುದ್ದಿ ಕೇಳಿ ಶಾಕ್​ ಆಯಿತು. ಅವರ ಕೆಲವು ಸಂದರ್ಶನಗಳನ್ನು ನಾನು ನೋಡಿದ್ದೇನೆ. ತುಂಬ ಚೆನ್ನಾಗಿ ಅಧ್ಯಯನ ಮಾಡಿಕೊಂಡು ಬಂದು, ಅತಿಥಿಗಳು ಮನಬಿಚ್ಚಿ ಮಾತನಾಡುವಂತೆ ಮಾಡುವ ಸಾಮರ್ಥ್ಯ ಅವರಲ್ಲಿ ಇತ್ತು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ’ ಎಂದು ನಾನಿ ಟ್ವೀಟ್​ ಮಾಡಿದ್ದಾರೆ.

ಖ್ಯಾತ ನಟ ರಾಹುಲ್​ ವೋಹ್ರಾ ಅವರು ಕೊರೊನಾದಿಂದ ನಿಧನರಾದ ಸುದ್ದಿ ಭಾನುವಾರವಷ್ಟೇ (ಮೇ 9) ಕೇಳಿಬಂದಿತ್ತು. ಮರುದಿನವೇ ಮತ್ತೊಬ್ಬ ನಟನನ್ನು ಚಿತ್ರರಂಗ ಕಳೆದುಕೊಂಡಿದೆ. ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಕಾಲಿವುಡ್​ ನಿರ್ದೇಶಕ ಕೆ.ವಿ. ಆನಂದ್​, ರವಿರತ್ನ ಕಾಳಿದಾಸ ಚಿತ್ರದ ನಿರ್ದೇಶಕ ರೇಣುಕಾ ಶರ್ಮಾ, ನಟ ಶಂಕನಾದ ಅರವಿಂದ್​, ಯುವ ನಿರ್ಮಾಪಕ ಡಿ.ಎಸ್​. ಮಂಜುನಾಥ್, ಮರಾಠಿ ನಟಿ ಅಭಿಲಾಷಾ ಪಾಟಿಲ್​​ ಸೇರಿದಂತೆ ಅನೇಕರು ಕೊರೊನಾದಿಂದ ಅಸುನೀಗಿದ್ದಾರೆ. ಸಾವಿನ ಸರಣಿ ಇನ್ನೂ ಮುಂದುವರಿದಿದೆ.

ಇದನ್ನೂ ಓದಿ:

ಆಕ್ಸಿಜನ್​ ಬೇಕು ಎಂದು ಮೋದಿಗೆ ಕೈ ಮುಗಿದು ಬೇಡಿಕೊಂಡಿದ್ದ ನಟ ರಾಹುಲ್​ ಕೊರೊನಾದಿಂದ ನಿಧನ

ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ