‘ಲಿಯೋ’ ಸಿನಿಮಾ ಹೊಸ ಹಾಡು ಬಿಡುಗಡೆ: ಮತ್ತೊಂದು ಮಾಸ್ ಗೀತೆ ಕೊಟ್ಟ ಅನಿರುದ್ಧ್

Leo Song: ವಿಜಯ್ ನಟನೆಯ 'ಲಿಯೋ' ಸಿನಿಮಾದ ಹಾಡೊಂದು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ. 'ಜೈಲರ್' ಸಿನಿಮಾಕ್ಕೆ ಸಖತ್ ಮಾಸ್ ನೀಡಿದ್ದ ಅನಿರುದ್ಧ್​ ಲಿಯೋ ಸಿನಿಮಾಕ್ಕೂ ಭರ್ಜರಿ ಹಾಡೊಂದನ್ನು ನೀಡಿದ್ದಾರೆ.

ಲಿಯೋ ಸಿನಿಮಾ ಹೊಸ ಹಾಡು ಬಿಡುಗಡೆ: ಮತ್ತೊಂದು ಮಾಸ್ ಗೀತೆ ಕೊಟ್ಟ ಅನಿರುದ್ಧ್
ಲಿಯೋ

Updated on: Sep 28, 2023 | 7:02 PM

ವಿಜಯ್ (Vijay) ನಟನೆಯ ‘ಲಿಯೋ‘ (Leo) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ರದ್ದಾಗಿದ್ದು ಇದೀಗ ತಮಿಳುನಾಡಿನಲ್ಲಿ ಚರ್ಚೆಯ ವಿಷಯವಾಗಿದ್ದು, ಇದು ಸಿನಿಮಾಕ್ಕೆ ಇನ್ನಷ್ಟು ಪ್ರಚಾರವನ್ನೂ ಒದಗಿಸಿದೆ. ಆಡಿಯೋ ಲಾಂಚ್ ರದ್ದಾದರೇನಂತೆ, ವಿಜಯ್​ರ ‘ಲಿಯೋ’ ಸಿನಿಮಾದ ಹಾಡೊಂದನ್ನು ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಮಾಸ್ ಹಾಡುಗಳಿಗೆ ಇತ್ತೀಚೆಗೆ ಜನಪ್ರಿಯವಾಗಿರುವ ಅನಿರುದ್ಧ್ ನಿರೀಕ್ಷೆಗೆ ತಕ್ಕಂತೆ ಮತ್ತೊಂದು ಡ್ಯಾನ್ಸಿ ಮಾಸ್ ಹಾಡು ನೀಡಿದ್ದಾರೆ.

‘ಬ್ಯಾಡಾಸ್ ಮಾ’ ಎಂಬ ಹಾಡೊಂದನ್ನು ಚಿತ್ರತಂಡ ಇಂದು (ಸೆಪ್ಟೆಂಬರ್ 28) ಬಿಡುಗಡೆ ಮಾಡಲಾಗಿದೆ. ಹಾಡಿನಲ್ಲಿ ‘ಲಿಯೋ’ ಸಿನಿಮಾ ಹೊಸ ಹಾಡು ಬಿಡುಗಡೆ: ಮತ್ತೊಂದು ಮಾಸ್ ಗೀತೆ ಕೊಟ್ಟ ಅನಿರುದ್ಧ್

ವಿಜಯ್ ನಟನೆಯ ‘ಲಿಯೋ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ರದ್ದಾಗಿದ್ದು ಇದೀಗ ತಮಿಳುನಾಡಿನಲ್ಲಿ ಚರ್ಚೆಯ ವಿಷಯವಾಗಿದ್ದು, ಇದು ಸಿನಿಮಾಕ್ಕೆ ಇನ್ನಷ್ಟು ಪ್ರಚಾರವನ್ನೂ ಒದಗಿಸಿದೆ. ಆಡಿಯೋ ಲಾಂಚ್ ರದ್ದಾದರೇನಂತೆ, ವಿಜಯ್​ರ ‘ಲಿಯೋ’ ಸಿನಿಮಾದ ಹಾಡೊಂದನ್ನು ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಮಾಸ್ ಹಾಡುಗಳಿಗೆ ಇತ್ತೀಚೆಗೆ ಜನಪ್ರಿಯವಾಗಿರುವ ಅನಿರುದ್ಧ್ ನಿರೀಕ್ಷೆಗೆ ತಕ್ಕಂತೆ ಮತ್ತೊಂದು ಡ್ಯಾನ್ಸಿ ಮಾಸ್ ಹಾಡು ನೀಡಿದ್ದಾರೆ.

ಇದನ್ನೂ ಓದಿ:‘ಲಿಯೋ’ ನಿರ್ಮಾಪಕರ ಹೊಸ ಘೋಷಣೆಯಿಂದ ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆ

‘ಬ್ಯಾಡಾಸ್ ಮಾ’ ಎಂಬ ಹಾಡೊಂದನ್ನು ಚಿತ್ರತಂಡ ಇಂದು (ಸೆಪ್ಟೆಂಬರ್ 28) ಬಿಡುಗಡೆ ಮಾಡಲಾಗಿದೆ. ಹಾಡಿನಲ್ಲಿ ನಾಯಕನ ಪಾತ್ರದ ಜೊತೆಗೆ ವಿಲನ್ ಹಾಗೂ ಮತ್ತೊಂದು ಪ್ರಮುಖ ಪಾತ್ರದ ಬಗ್ಗೆಯೂ ವಿವರಣೆಗಳಿವೆ. ನಾಯಕ ವಿಜಯ್ ನಟಿಸಿರುವ ಲಿಯೋ ಕುರಿತ ಸಾಲುಗಳ ಜೊತೆಗೆ ಸಂಜಯ್ ದತ್ ನಟಿಸಿರುವ ವಿಲನ್ ಪಲ ರಜಕಲಾ ಹಾಗೂ ಅರ್ಜುನ್ ಸರ್ಜಾ ನಟಿಸಿರುವ ವೆರಿಧನ್ ಪಾತ್ರದ ಬಗ್ಗೆಯೂ ಕೆಲವು ಸಾಲುಗಳಿವೆ.

ಪ್ರಸ್ತುತ ಬಿಡುಗಡೆ ಆಗಿರುವ ಲಿರಿಕಲ್ ವಿಡಿಯೋನಲ್ಲಿ ಸಂಗೀತ ನಿರ್ದೇಶನ ಮಾಡಿರುವ ಅನಿರುದ್ಧ್ ಹಾಡು ಹಾಡುತ್ತಿರುವ ವಿಡಿಯೋವನ್ನು ಸಹ ಸೇರಿಸಲಾಗಿದೆ. ಜೊತೆಗೆ ಸಿನಿಮಾದ ದೃಶ್ಯಗಳನ್ನು ಗ್ರಾಫಿಕ್ಸ್ ಟೋನ್​ ಬದಲಿಸಿ ಅಲ್ಲಲ್ಲಿ ಬಳಸಿಕೊಳ್ಳಲಾಗಿದೆ. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಜೈಲರ್’ ಸಿನಿಮಾ ಭರ್ಜರಿ ಇಂಟ್ರೊಡಕ್ಷನ್ ಹಾಡು ಕೊಟ್ಟಿದ್ದ ಅನಿರುದ್ಧ್ ಈಗ ‘ಲಿಯೋ’ ಸಿನಿಮಾಕ್ಕೂ ಅದೇ ಮಾದರಿಯ ಮಾಸ್ ಹಾಡು ನೀಡಿದ್ದಾರೆ.

‘ಲಿಯೋ’ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ವಿಜಯ್ ಜೊತೆಗೆ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಈ ಜೋಡಿ 13 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿದ್ದು, ನಟ ಅರ್ಜುನ್ ಸರ್ಜಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಲಿಯೋ’ ಸಿನಿಮಾ ಪಕ್ಕಾ ಆಕ್ಷನ್ ಕತೆಯನ್ನು ಒಳಗೊಂಡಿದ್ದು, ಸಿನಿಮಾವನ್ನು ಜಮ್ಮು ಕಾಶ್ಮೀರ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನಟ ವಿಜಯ್ ಈ ಸಿನಿಮಾದಲ್ಲಿ ಚಾಕಲೇಟ್ ಮೇಕರ್ ಆಗಿ ಕಾಣಿಸಿಕೊಂಡಿದ್ದಾರೆ.

‘ಲಿಯೋ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಕೆಲವು ದಿನಗಳ ಹಿಂದೆ ನಿಗದಿಪಡಿಸಲಾಗಿತ್ತು. ಆದರೆ ತಮಿಳುನಾಡು ಸರ್ಕಾರವು ಅದಕ್ಕೆ ಅನುಮತಿ ನೀಡಿಲ್ಲ. ವಿಜಯ್ ಸಹ ಶೀಘ್ರದಲ್ಲಿಯೇ ರಾಜಕೀಯ ಪಕ್ಷ ಪ್ರಾರಂಭಿಸುವ ಸಾಧ್ಯತೆ ಇದ್ದು, ಸಿನಿಮಾ ಕಾರ್ಯಕ್ರಮಗಳು ವಿಜಯ್​ರ ಜನಪ್ರಿಯ ಹೆಚ್ಚಲು ಕಾರಣವಾಗುತ್ತವೆ ಎಂಬ ಮುಂದಾಲೋಚನೆಯಿಂದಲೇ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ವಿಜಯ್ ಅಭಿಮಾನಿಗಳು ಆರೋಪಿಸಿದ್ದಾರೆ. ಏನೇ ಆದರೂ ‘ಲಿಯೋ’ ಸಿನಿಮಾಕ್ಕೆ ಪ್ರಚಾರ ಜೋರಾಗಿಯೇ ಧಕ್ಕುತ್ತಿದೆ. ಸಿನಿಮಾ ಅಕ್ಟೋಬರ್ 19ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Thu, 28 September 23