‘ವಿಕ್ರಮ್’ ನಿರ್ದೇಶಕನ ಜತೆ ದಳಪತಿ ವಿಜಯ್ ಸಿನಿಮಾ; ‘ವಾರಿಸು’ ಗೆದ್ದ ಖುಷಿಯಲ್ಲಿ ಹೊಸ ಚಿತ್ರ ಘೋಷಣೆ  

Thalapathy 67: ದಳಪತಿ ವಿಜಯ್ ಅವರು ಸಾಕಷ್ಟು ವೇಗವಾಗಿ ಸಿನಿಮಾ ಕೆಲಸ ಮಾಡಿ ಮುಗಿಸುತ್ತಾರೆ. ‘ವಾರಿಸು’ ರಿಲೀಸ್ ಆದ 20 ದಿನಕ್ಕೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ.

‘ವಿಕ್ರಮ್’ ನಿರ್ದೇಶಕನ ಜತೆ ದಳಪತಿ ವಿಜಯ್ ಸಿನಿಮಾ; ‘ವಾರಿಸು’ ಗೆದ್ದ ಖುಷಿಯಲ್ಲಿ ಹೊಸ ಚಿತ್ರ ಘೋಷಣೆ  
ವಿಜಯ್ ಹಾಗೂ ಲೋಕೇಶ್

Updated on: Jan 31, 2023 | 10:00 AM

2022ರಲ್ಲಿ ರಿಲೀಸ್ ಆದ ಸೂಪರ್ ಹಿಟ್ ಚಿತ್ರಗಳ ಪೈಕಿ ‘ವಿಕ್ರಮ್’ (Vikram Movie) ಕೂಡ ಒಂದು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ಅವರು ನಿರ್ದೇಶನ ಮಾಡಿದ್ದರು. ಈಗ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ದಳಪತಿ ವಿಜಯ್ ಅವರ 67ನೇ ಚಿತ್ರಕ್ಕೆ ಲೋಕೇಶ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಈ ವಿಚಾರ ಈಗ ಅಧಿಕೃತವಾಗಿದೆ. ‘ವಾರಿಸು’ ಗೆದ್ದ ಖುಷಿಯಲ್ಲಿ ವಿಜಯ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.

ದಳಪತಿ ವಿಜಯ್ ಅವರು ಸಾಕಷ್ಟು ವೇಗವಾಗಿ ಸಿನಿಮಾ ಕೆಲಸ ಮಾಡಿ ಮುಗಿಸುತ್ತಾರೆ. ಒಂದು ಸಿನಿಮಾ ಗೆದ್ದ ಬಳಿಕ ಮತ್ತೊಂದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ‘ವಾರಿಸು’ ರಿಲೀಸ್ ಆದ 20 ದಿನಕ್ಕೆ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 67’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ‘7 ಸ್ಕ್ರೀನ್‌ ಸ್ಟುಡಿಯೋಸ್‌’ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ
ಯುವ ನಟಿಯ ಜತೆ ದಳಪತಿ ವಿಜಯ್ ಡೇಟಿಂಗ್​? ವಿಚ್ಛೇದನ ಸುದ್ದಿ ಹುಟ್ಟಲು ಇದುವೇ ಕಾರಣ
‘ವಾರಿಸು’ದಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕಿಲ್ಲ ತೂಕ; ಈ ಸಿನಿಮಾ ಮಾಡಿದ್ದಕ್ಕೆ ಕಾರಣ ತಿಳಿಸಿದ ನಟಿ  
Thalapathy 67: ರಶ್ಮಿಕಾ ಬಳಿಕ ದಳಪತಿ ವಿಜಯ್ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ? ‘ಸಿಂಪಲ್​ ಸ್ಟಾರ್​’ಗೆ ಕಾಲಿವುಡ್​ನಲ್ಲಿ ಬೇಡಿಕೆ

ಈ ಹಿಂದೆ ವಿಜಯ್‌ ನಟನೆಯ ‘ಮಾಸ್ಟರ್‌’ ಚಿತ್ರಕ್ಕೆ ಲೋಕೇಶ್‌ ಕನಗರಾಜ್​ ನಿರ್ದೇಶನ ಮಾಡಿದ್ದರು. ಇದು ವಿಜಯ್‌ ಜತೆ ಅವರ ಎರಡನೇ ಪ್ರಾಜೆಕ್ಟ್‌. ಮತ್ತೊಮ್ಮೆ ಮೋಡಿ ಮಾಡಲು ‘ಮಾಸ್ಟರ್‌’ ಜೋಡಿ ಸಿದ್ಧವಾಗಿದೆ. ವಿಶೇಷ ಎಂದರೆ ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಕೂಡ ಆರಂಭ ಆಗಿದೆ.

ಇದನ್ನೂ ಓದಿ: ಪ್ರಪಂಚದಲ್ಲೇ 2ನೇ ಸ್ಥಾನ ಪಡೆದ ರಶ್ಮಿಕಾ ಮಂದಣ್ಣ ಹೊಸ ಸಾಂಗ್​ ‘ರಂಜಿದಮೆ..’

‘ಕೈದಿ’, ‘ಮಾಸ್ಟರ್​’, ‘ವಿಕ್ರಮ್​’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಲೋಕೇಶ್​ಗೆ ಇದೆ. ಈ ಕಾರಣಕ್ಕೆ ಅವರ ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಮೊದಲು ಲೋಕೇಶ್ ಜತೆ ಕೆಲಸ ಮಾಡಿ ಅನುಭವ ಇರುವ ಅನಿರುದ್ಧ್​ ರವಿಚಂದರ್​ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ವಿಜಯ್ ಹಾಗೂ ಅನಿರುದ್ಧ್ ಒಟ್ಟಾಗಿ ಕೆಲಸ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು. ಶೀಘ್ರದಲ್ಲೇ ಈ ಚಿತ್ರದ ಟೈಟಲ್ ರಿವೀಲ್ ಆಗಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:55 am, Tue, 31 January 23