‘ವಾರಿಸು’ದಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕಿಲ್ಲ ತೂಕ; ಈ ಸಿನಿಮಾ ಮಾಡಿದ್ದಕ್ಕೆ ಕಾರಣ ತಿಳಿಸಿದ ನಟಿ
ರಶ್ಮಿಕಾ ಮಂದಣ್ಣ ಅವರ ನಟನೆಯ ‘ವಾರಿಸು’ ಸಿನಿಮಾ ಸಂಕ್ರಾಂತಿ ನಿಮಿತ್ತ ಜನವರಿ 11ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಈ ಸಿನಿಮಾದಲ್ಲಿ ರಶ್ಮಿಕಾ ಆರಂಭದಲ್ಲಿ ಕೆಲವು ದೃಶ್ಯಗಳಲ್ಲಿ ಬರುತ್ತಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ವಾರಿಸು’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ತೂಕವಿಲ್ಲ. ಕೆಲವೇ ಕೆಲವು ಹಾಡು ಹಾಗೂ ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಕೆಲವೊಮ್ಮೆ ಹೀರೋಯಿನ್ಗಳು ತೂಕವಿಲ್ಲದ ಪಾತ್ರ ಎಂದಾಗ ಒಪ್ಪಿಕೊಳ್ಳುವುದಿಲ್ಲ. ಆದರೆ, ರಶ್ಮಿಕಾ ಮಂದಣ್ಣ ಆ ರೀತಿ ಮಾಡಿಲ್ಲ. ‘ವಾರಿಸು’ (Varisu Movie) ಚಿತ್ರವನ್ನು ಒಪ್ಪಿಕೊಂಡು ನಟಿಸಿದರು. ಇದು ಏಕೆ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ನಟನೆಯ ‘ವಾರಿಸು’ ಸಿನಿಮಾ ಸಂಕ್ರಾಂತಿ ನಿಮಿತ್ತ ಜನವರಿ 11ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಈ ಸಿನಿಮಾದಲ್ಲಿ ರಶ್ಮಿಕಾ ಆರಂಭದಲ್ಲಿ ಕೆಲವು ದೃಶ್ಯಗಳಲ್ಲಿ ಬರುತ್ತಾರೆ. ಮರಸುತ್ತುವ ಪಾತ್ರಕ್ಕೆ ಅವರು ಸೀಮಿತವಾಗಿದ್ದಾರೆ. ಒಂದೆರಡು ಹಾಡುಗಳಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ‘ರಂಜಿದಮೆ..’ ಹಾಡು ಹಿಟ್ ಆಗಿದೆ. ಈಗ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಕಾರಣ ನೀಡಿದ್ದಾರೆ.
‘ಈ ಚಿತ್ರವನ್ನು ನಾನೇ ಆಯ್ಕೆ ಮಾಡಿಕೊಂಡಿದ್ದು. ನನಗೆ ಗೊತ್ತಿತ್ತು ಈ ಸಿನಿಮಾದಲ್ಲಿ ನನಗಿರೋದು ಕೇವಲ ಎರಡು ಹಾಡುಗಳು ಮಾತ್ರ ಅಂತ. ಅದರಲ್ಲೇ ನಾನು ಗಮನಸೆಳೆಯಬೇಕು ಎಂದುಕೊಂಡಿದ್ದೆ. ನಾನು ವಿಜಯ್ ಅವರ ಬಳಿ ಈ ಮಾತನ್ನು ಹೇಳಿದ್ದೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
‘ನನಗೆ ವಿಜಯ್ ಅವರ ಜತೆ ನಟಿಸಬೇಕು ಎಂದಿತ್ತು. ಅವರು ನನಗೆ ಮೊದಲಿನಿಂದಲೂ ಅಚ್ಚುಮೆಚ್ಚು. ಹೀಗಾಗಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ. ಓರ್ವ ಕಲಾವಿದನಾಗಿ ಸೆಟ್‌ಗೆ ಹೋಗುವುದು ಮತ್ತು ಅಲ್ಲಿ ಕೆಲಸ ಮಾಡುತ್ತಿರುವವರಿಂದ ಸಣ್ಣ ವಿಷಯಗಳನ್ನು ಕಲಿತುಕೊಳ್ಳುವುದು ಮುಖ್ಯ’ ಎಂದು ಮಾಹಿತಿ ನೀಡಿದ್ದಾರೆ ರಶ್ಮಿಕಾ.
ಇದನ್ನೂ ಓದಿ: ‘ವೃತ್ತಿ ಜೀವನದ ಆರಂಭದಲ್ಲೇ ಆ ತಪ್ಪು ಮಾಡಿದೆ’; ಈಗಲೂ ಮರುಗುತ್ತಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್ ಮಜ್ನು’ ಚಿತ್ರ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ರಶ್ಮಿಕಾ ಅವರು ಅಂಧ ಪಾಕ್ ಯುವತಿಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರಕ್ಕೆ ಸ್ಕೋಪ್ ಇದೆ. ಅವರ ಪಾತ್ರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Mon, 23 January 23




