Thalapathy Vijay Birthday: ದಳಪತಿ ವಿಜಯ್ ಒಟ್ಟೂ ಆಸ್ತಿ ಎಷ್ಟು? ಯಾವೆಲ್ಲ ಕಾರುಗಳಿವೆ? ಇಲ್ಲಿದೆ ವಿವರ

ದಳಪತಿ ವಿಜಯ್ ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿ ಪಡೆಯುತ್ತಾರೆ. 2019ರಿಂದ ಈಚೆಗೆ ಅವರ ಚಾರ್ಮ್​ ಹೆಚ್ಚಿದೆ. ಈಗ ಅವರು ಪ್ರತಿ ಸಿನಿಮಾಗೆ 200 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಕೊನೆಯ ಚಿತ್ರಕ್ಕೆ ಅವರು 250 ಕೋಟಿ ರೂಪಾಯಿ ಹಣ ಪಡೆಯೋ ಸಾಧ್ಯತೆ ಇದೆಯಂತೆ.

Thalapathy Vijay Birthday: ದಳಪತಿ ವಿಜಯ್ ಒಟ್ಟೂ ಆಸ್ತಿ ಎಷ್ಟು? ಯಾವೆಲ್ಲ ಕಾರುಗಳಿವೆ? ಇಲ್ಲಿದೆ ವಿವರ
ವಿಜಯ್
Edited By:

Updated on: Jun 22, 2024 | 7:55 AM

ತಮಿಳು ಚಿತ್ರರಂಗದ ಸ್ಟಾರ್​ ನಟ ದಳಪತಿ ವಿಜಯ್​ (Thalapathy Vijay) ಅವರಿಗೆ ಇಂದು (ಜೂ.22) ಹುಟ್ಟುಹಬ್ಬ. ಅವರು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಫ್ಯಾನ್ಸ್ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಮೂರು ದಶಕವನ್ನು ಅವರು ಕಳೆದಿದ್ದಾರೆ. ದಿನ ಕಳೆದಂತೆ ಸ್ಟಾರ್​ಗಿರಿ ಹೆಚ್ಚುತ್ತಿದೆ. ಶೀಘ್ರವೇ ಸಿನಿಮಾ ತೊರೆದು, ರಾಜಕೀಯಕ್ಕೆ ಕಾಲಿಡುವ ಘೋಷಣೆ ವಿಜಯ್ ಕಡೆಯಿಂದ ಆಗಿದೆ​. ಇದು ಸಿನಿರಸಿಕರಿಗೆ ಬೇಸರ ತರಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ವಿಜಯ್​ ಕೂಡ ಇದ್ದಾರೆ. ಅವರ ಬಳಿ ಬಹುಕೋಟಿ ರೂ. ಬೆಲೆಯ ಹಲವಾರು ಕಾರುಗಳಿವೆ.

ದಳಪತಿ ವಿಜಯ್ ಆಸ್ತಿ

ದಳಪತಿ ವಿಜಯ್ ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿ ಪಡೆಯುತ್ತಾರೆ. 2019ರಿಂದ ಈಚೆಗೆ ಅವರ ಚಾರ್ಮ್​ ಹೆಚ್ಚಿದೆ. ಈಗ ಅವರು ಪ್ರತಿ ಸಿನಿಮಾಗೆ 200 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಕೊನೆಯ ಚಿತ್ರಕ್ಕೆ ಅವರು 250 ಕೋಟಿ ರೂಪಾಯಿ ಹಣ ಪಡೆಯೋ ಸಾಧ್ಯತೆ ಇದೆಯಂತೆ. ವಿಜಯ್ ಆಸ್ತಿ 420 ಕೋಟಿ ರೂಪಾಯಿ ಎನ್ನಲಾಗಿದೆ.

ಸಿನಿಮಾಗಳಿಂದ ಮಾತ್ರವಲ್ಲದೆ ಅನೇಕ ಕಂಪನಿಗಳ ಜಾಹೀರಾತುಗಳಲ್ಲೂ ನಟಿಸುವ ಮೂಲಕವೂ ವಿಜಯ್​ ಹಣ ಸಂಪಾದಿಸುತ್ತಾರೆ. ಪ್ರತಿ ವರ್ಷ ಜಾಹೀರಾತುಗಳಿಂದಲೇ ಅವರಿಗೆ ಅಂದಾಜು 10 ಕೋಟಿ ರೂ. ಸಿಗುತ್ತದೆ. ಕೊಕಕೋಲಾ, ಚೆನ್ನೈ ಸೂಪರ್​ ಕಿಂಗ್ಸ್​ ಮುಂತಾದವುಗಳಿಗೆ ಅವರು ರಾಯಭಾರಿ ಆಗಿದ್ದಾರೆ.

ವಿಜಯ್​ಗೆ ಕಾರುಗಳ ಬಗ್ಗೆ ಅಪಾರ ಕ್ರೇಜ್​ ಇದೆ. ಅವರ ಕಲೆಕ್ಷನ್​ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಅಂದಾಜು 6 ಕೋಟಿ ರೂ. ಬೆಲೆ ಬಾಳುವ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಅವರ ಮನೆಯಲ್ಲಿದೆ. ಜೊತೆಗೆ 1.30 ಕೋಟಿ ಬೆಲೆಯ ಆಡಿ ಎ8, 75 ಲಕ್ಷ ಬೆಲೆ ಬಿಎಂಡಬ್ಲ್ಯೂ, 90 ಲಕ್ಷದ ಬಿಎಂಡಬ್ಲ್ಯೂ ಎಕ್ಸ್​6, 35 ಲಕ್ಷ ಬೆಲೆ ಬಾಳುವ ಮಿನಿ ಕೂಪರ್​ ಮುಂತಾದ ಕಾರುಗಳನ್ನು ವಿಜಯ್ ಹೊಂದಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಸಂಭಾವನೆ ಕೇಳಿ ದೂರವೇ ಸರಿದ ನಿರ್ಮಾಪಕ

ಪ್ರಸ್ತುತ ವಿಜಯ್​ ಅವರು ತಮ್ಮ 68ನೇ ಸಿನಿಮಾದತ್ತ ಗಮನ ಹರಿಸಿದ್ದಾರೆ. ಈ ಚಿತ್ರಕ್ಕೆ ‘GOAT’​ ಎಂದು ಹೆಸರು ಇಡಲಾಗಿದೆ. ಅವರ 69ನೇ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇಂದೇ ಅಧಿಕೃತ ಮಾಹಿತಿ ಸಿಗೋ ಸಾಧ್ಯತೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:54 am, Sat, 22 June 24