ರಿಲೀಸ್ ಹೊಸ್ತಿಲಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಹೊಸ ಟ್ರೇಲರ್; ಸಖತ್ ಮೇಕಿಂಗ್
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ದಿಶಾ ಪಟಾನಿ, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ‘ವೈಜಯಂತಿ ಮೂವೀಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಜೂ.27ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆ. ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ.
‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ವೈಜ್ಞಾನಿಕ ಹಾಗೂ ಕಾಲ್ಪನಿಕ ಅಂಶಗಳ ಸಮ್ಮಿಶ್ರಣದ ರೀತಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಮೊದಲು ಬಿಡುಗಡೆ ಆಗಿದ್ದ ಟ್ರೇಲರ್ ಸಖತ್ ಹವಾ ಸೃಷ್ಟಿಸಿತ್ತು. ಈಗ ಸಿನಿಮಾದ ರಿಲೀಸ್ ಹೊಸ್ತಿಲಿನಲ್ಲಿ ಹೊಸ ಟ್ರೇಲರ್ (Kalki 2898 AD Release Trailer) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನೇಕ ಅಂಶಗಳು ರಿವೀಲ್ ಆಗಿವೆ. ಭಾರತೀಯ ಪುರಾಣಗಳಲ್ಲಿ ಇರುವ ಅಸಾಧಾರಣ ಕಲ್ಕಿಯ ಕುರಿತ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸುವ ರೀತಿಯಲ್ಲಿ ಈ ಟ್ರೇಲರ್ ಮೂಡಿಬಂದಿದೆ. ‘ಕಲ್ಕಿ 2898 ಎಡಿ’ ಸಿನಿಮಾದ ಹೊಸ ಟ್ರೇಲರ್ ನೋಡಿದ ಪ್ರಭಾಸ್ (Prabhas) ಅಭಿಮಾನಿಗಳಿಗೆ ಥ್ರಿಲ್ ಆಗಿದೆ.
‘ಕಲ್ಕಿ 2898 ಎಡಿ’ ಸಿನಿಮಾದ ಹೊಸ ಟ್ರೇಲರ್ನಲ್ಲಿ ಹಲವು ಪಾತ್ರಗಳು ಹೈಲೈಟ್ ಆಗಿದೆ. ಭಾರತೀಯ ಚಿತ್ರರಂಗದ ಬಿಗ್-ಬಿ ಅಮಿತಾಭ್ ಬಚ್ಚನ್ ಅವರು ಅಶ್ವತ್ಥಾಮನಾಗಿ, ಧೈರ್ಯಶಾಲಿಯಾಗಿ ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ಇನ್ನು, ಖ್ಯಾತ ನಟ ಕಮಲ್ ಹಾಸನ್ ಅವರು ಗುರುತಿಸಲಾಗದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಅವರು ಭೈರವನಾಗಿ ಜನರ ಎದುರು ಬರುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರು ಸುಮತಿ ಎಂಬ ಪಾತ್ರ ನಿಭಾಯಿಸಿದ್ದಾರೆ. ಬಾಲಿವುಡ್ ಬೆಡಗಿ ದಿಶಾ ಪಟಾನಿ ಅವರು ರಾಕ್ಸಿ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ.
ಇದನ್ನೂ ಓದಿ: ಪ್ರಭಾಸ್, ದೀಪಿಕಾ ಸೇರಿ ‘ಕಲ್ಕಿ 2898 ಎಡಿ’ ಚಿತ್ರದ ಕಲಾವಿದರ ಸಂಭಾವನೆ ವಿವರ ಇಲ್ಲಿದೆ
ವಿಎಫ್ಎಕ್ಸ್ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಟ್ರೇಲರ್‌ಗೆ ಬೇರೆಯದೇ ಮೆರುಗು ಬಂದಿದೆ. ಸಿನಿಮಾದ ಕಥೆ ಏನು ಎಂಬ ಬಗ್ಗೆಯೂ ಇದರಲ್ಲಿ ಸುಳಿವು ನೀಡಲಾಗಿದೆ. ಪ್ರೇಕ್ಷಕರ ಊಹೆಗೂ ಮೀರಿದ ಅನೇಕ ಅಂಶಗಳು ಈ ಟ್ರೇಲರ್ನಲ್ಲಿ ಕಾಣಿಸಿವೆ. ಆಕರ್ಷಕವಾದ ಹಿನ್ನೆಲೆ ಸಂಗೀತ, ಅದ್ದೂರಿಯಾದ ಮೇಕಿಂಗ್, ಮೈನವಿರೇಳಿಸುವ ಆ್ಯಕ್ಷನ್ ಸನ್ನಿವೇಶಗಳು, ಕಲಾವಿದರ ಡಿಫರೆಂಟ್ ಗೆಟಪ್ ಎಲ್ಲವೂ ಈ ಸಿನಿಮಾದ ಮೇಲಿನ ಕೌತುಕ ಹೆಚ್ಚಿಸಿವೆ.
‘ಕಲ್ಕಿ 2898 ಎಡಿ’ ಚಿತ್ರದ ಟ್ರೇಲರ್:
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗಿನ ಜೊತೆ ಹಿಂದಿ, ಕನ್ನಡ ಮುಂತಾದ ಭಾಷೆಗಳಲ್ಲಿ ಟ್ರೇಲರ್ ಅನಾವರಣ ಮಾಡಲಾಗಿದೆ. ‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಅವರು ಹೊಸ ಲೋಕವನ್ನು ಕಟ್ಟಿಕೊಟ್ಟಿದ್ದಾರೆ. ಅದರ ಝಲಕ್ ಈಗ ಟ್ರೇಲರ್ನಲ್ಲಿ ಕಾಣಿಸಿದೆ. ಪ್ರಭಾಸ್ ಜೊತೆ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಪ್ರತಿಷ್ಠಿತ ‘ವೈಜಯಂತಿ ಮೂವೀಸ್’ ಸಂಸ್ಥೆಯು ಈ ಸಿನಿಮಾಗೆ ಬಂಡವಾಳ ಹೂಡಿದೆ. ಜೂನ್ 27ರಂದು ವಿಶ್ವಾದ್ಯಂತ ‘ಕಲ್ಕಿ 2898 ಎಡಿ’ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.