Thalapathy Vijay: ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ದಳಪತಿ ವಿಜಯ್

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ದಳಪತಿ ವಿಜಯ್ ಅವರು ಸಣ್ಣ ಜಾಗ ಒಂದನ್ನು ಹೊಂದಿದ್ದರು. ಅಲ್ಲಿ ಈ ಮಂದಿರ ನಿರ್ಮಾಣ ಆಗಿದೆ. ವಿಜಯ್ ತಾಯಿ ಶೋಭಾ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿತ್ತು. ಆ ಕನಸು ಈಗ ಈಡೇರಿದೆ.

Thalapathy Vijay: ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ದಳಪತಿ ವಿಜಯ್
ದಳಪತಿ ವಿಜಯ್

Updated on: Apr 10, 2024 | 2:25 PM

ನಟ ದಳಪತಿ ವಿಜಯ್ (Thalapathy Vijay) ಅವರು ರಾಜಕೀಯಕ್ಕೆ ಕಾಲಿಡೋ ಘೋಷಣೆ ಮಾಡಿದ್ದಾರೆ. ಅವರು ಸದ್ಯ ‘GOAT’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು ಶೀಘ್ರವೇ ಅವರ 69ನೇ ಸಿನಿಮಾ ಘೋಷಣೆ ಆಗಲಿದೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸದೆ 2026ರಲ್ಲಿ ಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಈಗ ದಳಪತಿ ವಿಜಯ್ ಅವರು ಚೆನ್ನೈನಲ್ಲಿ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ. ಇದು ಅವರ ತಾಯಿಗಾಗಿ ನಿರ್ಮಾಣ ಮಾಡಿದ ಮಂದಿರ ಅನ್ನೋದು ವಿಶೇಷ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ದಳಪತಿ ವಿಜಯ್ ಅವರು ಸಣ್ಣ ಜಾಗ ಒಂದನ್ನು ಹೊಂದಿದ್ದರು. ಅಲ್ಲಿ ಈ ಮಂದಿರ ನಿರ್ಮಾಣ ಆಗಿದೆ. ವಿಜಯ್ ತಾಯಿ ಶೋಭಾ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿತ್ತು. ಆ ಕನಸು ಈಗ ಈಡೇರಿದೆ. ಚೆನ್ನೈನ ಕೊರಟ್ಟೂರ್​ನಲ್ಲಿ ಈ ಮಂದಿರ ನಿರ್ಮಾಣ ಆಗಿದೆ.

ಈ ವರ್ಷ ಫೆಬ್ರವರಿಯಲ್ಲಿ ಈ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ ಎನ್ನಲಾಗಿದೆ. ಅವರು ಇತ್ತೀಚೆಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಿಜಯ್ ಅವರು ಸಾಯಿ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಉತ್ತರ ಈಗ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ಹೊಸ ಚಿತ್ರದಿಂದ ಹೊರ ನಡೆದ ಶ್ರೀಲೀಲಾ; ‘ಪ್ರೇಮಲು’ ನಾಯಕಿಯ ಎಂಟ್ರಿ?

ವಿಜಯ್ ಅವರು ‘ಗ್ರೇಟೆಸ್ಟ್ ಆಫ್ ಆಲ್​ ಟೈಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿಶಾ ನಾಯಕಿ. ಈ ಸಿನಿಮಾದಲ್ಲಿ ಪ್ರಭುದೇವ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ವಿಜಯ್ ಅವರ ಮುಂದಿನ ಸಿನಿಮಾ ಬಗ್ಗೆಯೂ ಚರ್ಚೆ ಶುರುವಾಗಿದೆ. ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡುತ್ತಾರೆ ಎಂದು ಕೂಡ ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ