ಮದುವೆ ಆಗಿ ಮಗು ಆಗಿರೋ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟ ಖ್ಯಾತ ನಟ
ದಿಲ್ಜಿತ್ ಅವರು ಮದುವೆ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ತಮಗೆ ವಿವಾಹ ಆಗಿದೆ ಎಂದು ಅವರು ಯಾವಾಗಲೂ ಹೇಳಿಕೊಂಡಿಲ್ಲ. ಆದರೆ, ದಿಲ್ಜಿತ್ ಅವರಿಗೆ ಈಗಾಗಲೇ ಮದುವೆ ಆಗಿದೆ ಹಾಗೂ ಒಂದು ಮಗು ಇದೆ. ಇದನ್ನು ಅವರು ಅಭಿಮಾನಿಗಳಿಂದ ಮುಚ್ಚಿಟ್ಟಿದ್ದಾರೆ.
ಗಾಯಕ ಹಾಗೂ ನಟಿ ದಿಲ್ಜಿತ್ ದೋಸಾಂಜ್ (Diljit Dosanjh) ಅವರು ಖಾಸಗಿ ಜೀವನದ ವಿಚಾರವನ್ನು ಹೆಚ್ಚು ಮುಚ್ಚಿಡೋಕೆ ಬಯಸುತ್ತಾರೆ. ಅವರು ಇಷ್ಟು ವರ್ಷಗಳ ಕಾಲ ಕುಟುಂಬದ ವಿಚಾರವನ್ನು ಮುಚ್ಚಿಟ್ಟಿದ್ದರು. ಈಗ ಅವರ ಗೆಳೆಯನೋರ್ವ ಈ ಬಗ್ಗೆ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ದಿಲ್ಜಿತ್ ಅವರಿಗೆ ಈಗಾಗಲೇ ಮದುವೆ ಆಗಿದೆ ಹಾಗೂ ಓರ್ವ ಮಗ ಕೂಡ ಇದ್ದಾನೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.
ದಿಲ್ಜಿತ್ ಅವರು ಮದುವೆ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ತಮಗೆ ವಿವಾಹ ಆಗಿದೆ ಎಂದು ಅವರು ಯಾವಾಗಲೂ ಹೇಳಿಕೊಂಡಿಲ್ಲ. ಆದರೆ, ದಿಲ್ಜಿತ್ ಅವರಿಗೆ ಈಗಾಗಲೇ ಮದುವೆ ಆಗಿದೆ ಹಾಗೂ ಒಂದು ಮಗು ಇದೆ. ಇದನ್ನು ಅವರು ಅಭಿಮಾನಿಗಳಿಂದ ಮುಚ್ಚಿಟ್ಟಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.
ದಿಲ್ಜಿತ್ ಅವರ ಪತ್ನಿ ಭಾರತ ಮೂಲದ ಅಮೆರಿಕ ಮಹಿಳೆ. ಈ ದಂಪತಿಗೆ ಮಗ ಇದ್ದಾನೆ. ಲುಧಿಯಾನಾದಲ್ಲಿ ದಿಲ್ಜಿತ್ ಕುಟುಂಬ ವಾಸವಾಗಿದೆ. ದಿಲ್ಜಿತ್ ಪತ್ನಿ ಹಾಗೂ ಮಗ ಅಮೆರಿಕದಲ್ಲಿ ವಾಸವಾಗಿದ್ದಾರೆ. ದಿಲ್ಜಿತ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದರು. ಈ ವೇಳೆ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದರು. 11 ವರ್ಷ ಇದ್ದಾಗ ಗ್ರಾಮ ಬಿಟ್ಟು ಬರಬೇಕಾದ ಪರಿಸ್ಥಿತಿ ಅವರಿಗೆ ಬಂತು. ಇದರಿಂದ ಕುಟುಂಬದ ಜೊತೆ ಅವರಿಗೆ ಅಷ್ಟಾಗಿ ಬಾಂಧವ್ಯ ಬೆಳೆದಿಲ್ಲ.
ಇದನ್ನೂ ಓದಿ: ನಟ, ಗಾಯಕ ದಿಲ್ಜಿತ್ ದೋಸಾಂಜ್ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್ಗಳು
‘ಗುಡ್ ನ್ಯೂಸ್’ ಸಿನಿಮಾ ಪ್ರಮೋಷನ್ ವೇಳೆ ಕಿಯಾರಾ ಅಡ್ವಾಣಿ ಅವರು ಅಚಾನಕ್ಕಾಗಿ ಈ ವಿಚಾರ ರಿವೀಲ್ ಮಾಡಿದ್ದರು. ಆದರೆ, ಇದನ್ನು ಯಾರೊಬ್ಬರೂ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ‘ಗುಡ್ ನ್ಯೂಸ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಜೊತೆ ದಿಲ್ಜಿತ್ ಹಾಗೂ ಕಿಯಾರಾ ಕೂಡ ಬಣ್ಣ ಜಚ್ಚಿದ್ದರು. ‘ಸಿನಿಮಾದಲ್ಲಿ ನಟಿಸಿದ ನಾಲ್ಕು ಪ್ರಮುಖ ಕಲಾವಿದರ ಪೈಕಿ ಮೂವರಿಗೆ ಮಕ್ಕಳಿದ್ದಾರೆ. ಆದರೆ, ನನಗೆ ಮಾತ್ರ ಮಗು ಇಲ್ಲ’ ಎಂದು ಕಿಯಾರಾ ಹೇಳಿದ್ದರು. ಆ ಸಮಯದಲ್ಲಿ ಇದನ್ನು ಯಾರೂ ಅಷ್ಟಾಗಿ ಗಂಭೀರವಾಗಿ ಸ್ವೀಕರಿಸಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ