ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಕನ್ನಡ ನಿರ್ಮಾಣ ಸಂಸ್ಥೆಯಿಂದ ಬಂಡವಾಳ; ಟೀಸರ್ ರಿಲೀಸ್

|

Updated on: Sep 13, 2024 | 2:24 PM

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ವೆಂಕಟ್ ಅವರು ಬಂಡವಾಳ ಹೂಡತ್ತಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ಮೂಲಕ  ‘Thalapathy 69’ ಚಿತ್ರ ಸಿದ್ಧವಾಗಲಿದೆ. ಈ ಚಿತ್ರದ ಬಗ್ಗೆ ಇಂದು (ಸೆಪ್ಟೆಂಬ್ 13) ಸಂಜೆ 5 ಗಂಟೆಗೆ ಅಪ್​ಡೇಟ್ ಕೊಡೋದಾಗಿ ಕೆವಿಎನ್ ಸಂಸ್ಥೆ ತಿಳಿಸಿದೆ.

ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಕನ್ನಡ ನಿರ್ಮಾಣ ಸಂಸ್ಥೆಯಿಂದ ಬಂಡವಾಳ; ಟೀಸರ್ ರಿಲೀಸ್
ವಿಜಯ್
Follow us on

ದಳಪತಿ ವಿಜಯ್ ಅವರ ನಟನೆಯ ‘ಗ್ರೇಟೆಸ್ಟ್​ ಆಫ್ ಆಲ್ ಟೈಮ್​’ (GOAT) ಚಿತ್ರ ರಿಲೀಸ್​ ಆಗಿದೆ. ಇದು ಮಿಶ್ರಪ್ರತಿಕ್ರಿಯೆ ಪಡೆದಿದೆ. ಈಗ ದಳಪತಿ ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘Thalapathy 69’ ಚಿತ್ರಕ್ಕೆ ರೆಡಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಿಂದ ಅಪ್​ಡೇಟ್ ಸಿಕ್ಕಿದೆ. ಹಾಗಾದರೆ ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವವರು ಯಾರು? ಟೈಟಲ್ ಯಾವಾಗ ರಿವೀಲ್ ಆಗುತ್ತದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ವೆಂಕಟ್ ಅವರು ಬಂಡವಾಳ ಹೂಡತ್ತಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ಮೂಲಕ  ‘Thalapathy 69’ ಚಿತ್ರ ಸಿದ್ಧವಾಗಲಿದೆ. ಈ ಚಿತ್ರದ ಬಗ್ಗೆ ಇಂದು (ಸೆಪ್ಟೆಂಬ್ 13) ಸಂಜೆ 5 ಗಂಟೆಗೆ ಅಪ್​ಡೇಟ್ ಕೊಡೋದಾಗಿ ಕೆವಿಎನ್ ಸಂಸ್ಥೆ ತಿಳಿಸಿದೆ.

ದಳಪತಿ ವಿಜಯ್ ನಟನೆಯ ಈ ಹಿಂದಿನ ಸಿನಿಮಾಗಳ ದೃಶ್ಯವನ್ನು ಕಟ್ ಮಾಡಿ ಸೇರಿಸಿ ಟೀಸರ್ ಮಾಡಲಾಗಿದೆ. ‘ನಮ್ಮ ಮೊದಲ ತಮಿಳು ಸಿನಿಮಾ’ ಎಂದು ಕೆವಿಎನ್​ ಹೇಳಿದೆ. ಸಂಜೆ ವೇಳೆಗೆ ಸಿನಿಮಾದ ಟೈಟಲ್, ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಸಿಗೋ ಸಾಧ್ಯತೆ ಇದೆ.

ಏಕಕಾಲಕ್ಕೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡೋದು ಎಂದರೆ ಅದು ಸುಲಭ ಅಲ್ಲ. ಸದ್ಯ ಈ ಸಂಸ್ಥೆ ‘ಕೆಡಿ-ದಿ ಡೆವಿಲ್’, ‘ಟಾಕ್ಸಿಕ್’ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಈಗ ಈ ಸಾಲಿಗೆ ದಳಪತಿ ವಿಜಯ್ ಅವರ 69ನೇ ಸಿನಿಮಾ ಕೂಡ ಸೇರ್ಪಡೆ ಆಗಿದೆ.

ಇದನ್ನೂ ಓದಿ: ಚುನಾವಣಾ ಆಯೋಗದಿಂದ ನಟ ದಳಪತಿ ವಿಜಯ್ ಪಕ್ಷಕ್ಕೆ ಮಾನ್ಯತೆ

ದಳಪತಿ ವಿಜಯ್ ಅವರು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. 2026ರ ತಮಿಳುನಾಡು ಚುನಾವಣೆಗೆ ಅವರು ಸ್ಪರ್ಧೆ ಮಾಡಲಿದ್ದಾರೆ. ಅವರು ಪಕ್ಷ ಬೆಳೆಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈಗ ಕೆವಿಎನ್​ ಜೊತೆ ಮಾಡುತ್ತಿರುವುದು ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.