‘ಹಾಲಿವುಡ್​’ನಲ್ಲಿ ಪ್ರೀಮಿಯರ್ ಆಗಲಿದೆ ‘ದೇವರ’; ಅಮೆರಿಕಕ್ಕೆ ಹಾರಲಿದ್ದಾರೆ ಜೂ. ಎನ್​ಟಿಆರ್

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದ ವಿಶೇಷ ಶೋನ ಅಮೆರಿಕದಲ್ಲಿ ಆಯೋಜನೆ ಮಾಡಲಾಗಿದೆ.

‘ಹಾಲಿವುಡ್​’ನಲ್ಲಿ ಪ್ರೀಮಿಯರ್ ಆಗಲಿದೆ ‘ದೇವರ’; ಅಮೆರಿಕಕ್ಕೆ ಹಾರಲಿದ್ದಾರೆ ಜೂ. ಎನ್​ಟಿಆರ್
ಎನ್​ಟಿಆರ್
Follow us
ರಾಜೇಶ್ ದುಗ್ಗುಮನೆ
|

Updated on:Sep 13, 2024 | 12:55 PM

ಜೂನಿಯರ್​ ಎನ್​ಟಿಆರ್ ಅವರು ‘ದೇವರ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಸೆಪ್ಟೆಂಬರ್ 27ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಜೂನಿಯರ್​ ಎನ್​ಟಿಆರ್ ಅವರು ಭಾರತದಲ್ಲಿ ಇರೋದಿಲ್ಲ. ಹೌದು, ಸೆಪ್ಟೆಂಬರ್ 25ರಂದು ಜೂನಿಯರ್​ ಎನ್​ಟಿಆರ್ ಅವರು ಅಮೆರಿಕದ ಲಾಸ್ ಎಂಜಲೀಸ್​ಗೆ ತೆರಳಲಿದ್ದಾರೆ. ಇದಕ್ಕೆ ಒಂದು ಕಾರಣವೂ ಇದೆ.

ಕನ್ನಡದಲ್ಲಿ ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ದಿನ ಹೀರೋಗಳು ಮುಖ್ಯ ಥಿಯೇಟರ್​ಗೆ ತೆರಳಿ ಫ್ಯಾನ್ಸ್ ಜೊತೆ ಸಿನಿಮಾ ನೋಡುವ ಟ್ರೆಂಡ್ ಇದೆ. ಆದರೆ, ತೆಲುಗಿನಲ್ಲಿ ಆ ರೀತಿ ಇಲ್ಲ. ಈ ಕಾರಣಕ್ಕೆ ಜೂನಿಯರ್​ ಎನ್​ಟಿಆರ್ ಅವರು ಸಿನಿಮಾ ರಿಲೀಸ್​ಗೂ ಮೊದಲು ಕ್ಯಾಲಿಫೋರ್ನಿಯಾ ತೆರಳಲಿದ್ದಾರೆ. ಅಲ್ಲಿಂದ ಅವರು ಲಾಸ್ ಏಂಜಲೀಸ್​ಗೆ ತೆರಳುತ್ತಾರೆ.

ಬಿಯಾಂಡ್ ಫೆಸ್ಟ್​ ಹಿನ್ನೆಲೆಯಲ್ಲಿ ಹಾಲಿವುಡ್​ನ ಈಜಿಪ್ಟಿಯನ್ ಥಿಯೇಟರ್​ನಲ್ಲಿ ‘ದೇವರ’ ಸಿನಿಮಾದ ಶೋ ಆಯೋಜನೆ ಮಾಡಲಾಗಿದೆ. ಈ ವಿಶೇಷ ಶೋ 26ಕ್ಕೆ ಇದೆ. ಈ ಕಾರಣದಿಂದ ಅವರು ಭಾರತದಿಂದ 25ಕ್ಕೇ ಹೊರಡಲಿದ್ದಾರೆ. ಸ್ಥಳೀಯ ಅಭಿಮಾನಿಗಳ ಜೊತೆ ಅವರು ಸಿನಿಮಾ ನೋಡಲಿದ್ದಾರೆ. ಹಾಲಿವುಡ್ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.

ಪ್ರಕಾಶ್ ರಾಜ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಶ್ರೀಕಾಂತ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಈ ಚಿತ್ರದ ಅವಧಿ ಸುಮಾರು ಮೂರು ಗಂಟೆ ಇದೆ.  ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಜೂನಿಯರ್​ ಎನ್​ಟಿಆರ್​ಗೆ ಆದ ಗಾಯದಿಂದ ‘ವಾರ್ 2’ ಚಿತ್ರಕ್ಕೆ ದೊಡ್ಡ ನಷ್ಟ

‘ದೇವರ’ ಸಿನಿಮಾದ ಟ್ರೇಲರ್ ನೋಡಿದ ಅನೇಕರು ನಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರವನ್ನು ಕೆಲವರು ಅಟ್ಟರ್ ಫ್ಲಾಪ್ ಸಿನಿಮಾ ‘ಆಚಾರ್ಯ’ಕ್ಕೆ ಹೋಲಿಕೆ ಮಾಡಿದ್ದಾರೆ. ‘ದೇವರ’ ಮತ್ತೊಂದು ‘ಆಚಾರ್ಯ’ ಆಗಲಿದೆ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:53 pm, Fri, 13 September 24

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ