ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಇಷ್ಟೊಂದಾ?

ದಳಪತಿ ವಿಜಯ್ ಅವರು ತಮ್ಮ ಮುಂಬರುವ ಚಿತ್ರ 'ಜನ ನಾಯಗನ್​’ಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಇದು ಅವರನ್ನು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರನ್ನಾಗಿ ಮಾಡಿದೆ. ಈ ಚಿತ್ರ ರಾಜಕೀಯದ ಹಿನ್ನೆಲೆಯನ್ನು ಹೊಂದಿದ್ದು, ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನ ಇದು ಅವರ ಕೊನೆಯ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.

ದಳಪತಿ ವಿಜಯ್ ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಇಷ್ಟೊಂದಾ?
ಜನ ನಾಯಗನ್
Updated By: ರಾಜೇಶ್ ದುಗ್ಗುಮನೆ

Updated on: Jul 22, 2025 | 7:59 AM

ನಟ ದಳಪತಿ ವಿಜಯ್​  ಅವರು ‘ಜನ ನಾಯಗನ್’ (Jana Nayagan) ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಈ ಚಿತ್ರಕ್ಕೆ ಪಡೆದ ಸಂಭಾವನೆ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ವಿಜಯ್ ಅವರು ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋ ಎನಿಸಿಕೊಂಡಿದ್ದಾರೆ. ಹಾಗಾದರೆ ವಿಜಯ್ ಅವರು ಈ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ದಕ್ಷಿಣ ಭಾರತದ ನಟ ವಿಜಯ್ ದಳಪತಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರ ‘ಜನ ನಾಯಗನ್’ ಚಿತ್ರಕ್ಕಾಗಿ ಅವರು 275 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ದಕ್ಷಿಣದ ಸೂಪರ್‌ಸ್ಟಾರ್ ದಳಪತಿ ವಿಜಯ್ ಸತತವಾಗಿ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಈ ಚಿತ್ರವು ಅವರು ರಾಜಕೀಯಕ್ಕೆ ಪ್ರವೇಶಿಸುವುದಕ್ಕೂ ಮುನ್ನದ ಕೊನೆಯ ಚಿತ್ರವಾಗಿದೆ.

‘ಜನ ನಾಯಗನ್’ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಹಲವು ದಿನಗಳಿಂದ ಕಾಯುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಉದ್ಯಮಗಳಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ‘ಕೆವಿಎನ್’ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದಕ್ಕೂ ಮೊದಲು, ಶಾರುಖ್ ಖಾನ್ ತಮ್ಮ ಇತ್ತೀಚಿನ ಚಿತ್ರದಿಂದ 250 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ರಜನಿಕಾಂತ್ ಪ್ರತಿ ಚಿತ್ರಕ್ಕೆ 200 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಆದ್ದರಿಂದ, ಈಗ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ದಳಪತಿ ವಿಜಯ್ ಮುಂದಿದ್ದಾರೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಚಿತ್ರದ ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು
‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್?
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?
ಈ ಸಸ್ಪೆನ್ಸ್ ಥ್ರಿಲ್ಲರ್​ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಲೇಬೇಡಿ

‘ಜನ ನಾಯಗನ್’ ಚಿತ್ರದ ಶೂಟಿಂಗ್ ಅದ್ದೂರಿಯಾಗಿ ಸಾಗುತ್ತಿದೆ. ಈ ಚಿತ್ರವನ್ನು ನಿರ್ದೇಶಕ ಹೆಚ್. ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ರಂಜಿಸುವ ಚಿತ್ರವಾಗಿರಲಿದೆ. ಇದು ವಿಜಯ್ ದಳಪತಿ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ. ಈ ಚಿತ್ರವು ರಾಜಕೀಯ ವಿಷಯಗಳನ್ನು ಆಧರಿಸಿ ಇರಲಿದೆ.

ಇದನ್ನೂ ಓದಿ: ವಿಜಯ್ ಹುಟ್ಟುಹಬ್ಬ ಬಂತು ‘ಜನ ನಾಯಗನ್’ ಟೀಸರ್, ಸಮವಸ್ತ್ರದಲ್ಲಿ ದಳಪತಿ

‘ಜನ ನಾಯಗನ್’ ಬಳಿಕ ದಳಪತಿ ವಿಜಯ್ ಅವರು ಸಿನಿಮಾ ಮಾಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗದೆ ಇದ್ದರೆ ಅವರಿಗೆ ಬೇರೆ ಯಾವುದೇ ಆಯ್ಕೆ ಇರೋದಿಲ್ಲ. ಅವರು ಆ ಸಂದರ್ಭದಲ್ಲಿ ಮತ್ತೆ ಚಿತ್ರರಂಗಕ್ಕೆ ಬರೋ ಸಾಧ್ಯತೆ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:57 am, Tue, 22 July 25