
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಗಮನ ಸೆಳೆಯುವ ನಿರೀಕ್ಷೆ ಇದೆ. ಈ ಚಿತ್ರವು ತೆಲುಗಿನ ಬಾಲಯ್ಯ ನಟನೆಯ ‘ಭಗವಂತ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿ ತೊಂದರೆ ಅನುಭವಿಸಿದ್ದು ಗೊತ್ತೇ ಇದೆ. ಹೀಗಿರುವಾಗಲೇ ಚಿತ್ರದ ಬಜೆಟ್ ಬಗ್ಗೆ ಹಾಗೂ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಜನ ನಾಯಗನ್’ ಚಿತ್ರವು ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಾ ಇದೆ. ಆ ಬಳಿಕ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಟಿವಿಕೆ ಪಕ್ಷ ಕಟ್ಟಿ ಅವರು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿ ಆಗಿದ್ದಾರೆ. ಹೀಗಾಗಿ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.
‘ಜನ ನಾಯಗನ್’ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಬಜೆಟ್ 380 ಕೋಟಿ ರೂಪಾಯಿ ಎಂದು ಹೇಳಲಾಗುತ್ತಾ ಇದೆ. ಈ ಚಿತ್ರದಲ್ಲಿ ವಿಜಯ್ ಅವರು 220 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಸಂಭಾವನೆ ಆಗಿದೆ. ಈ ಮೊದಲು ಅವರು 100 ಕೋಟಿ ರೂಪಾಯಿಗೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.
ಇನ್ನು, ನಿರ್ದೇಶಕ ವಿನೋದ್ ಅವರು 25 ಕೋಟಿ ರೂಪಾಯಿ ಪಡೆದಿದ್ದಾರೆ. ರಿಮೇಕ್ ಸಿನಿಮಾ ಮಾಡಲು ಅವರು ಇಷ್ಟು ಹಣ ಪಡೆದಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ಅವರು 13 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಬಾಬಿ ಡಿಯೋಲ್ ಚಿತ್ರದ ವಿಲನ್. ಅವರಿಗೆ 3 ಕೋಟಿ ರೂಪಾಯಿ ಸಿಕ್ಕಿದೆ. ಮಲಯಾಳಂ ನಟಿ ಮಮಿತಾ ಬೈಜು ಅವರ ಸಂಭಾವನೆ 60 ಲಕ್ಷ ರೂಪಾಯಿ. ಉಳಿದ ಎಲ್ಲಾ ಕಲಾವಿದರ ಸಂಭಾವನೆ ಸೇರಿದರೆ 9 ಕೋಟಿ ರೂಪಾಯಿ ಆಗಲಿದೆ. ಈ ಸಿನಿಮಾನ 148 ದಿನ ಶೂಟ್ ಮಾಡಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಜಯ; ಯುಎ ಪ್ರಮಾಣಪತ್ರ ನೀಡಲು ಕೋರ್ಟ್ ಆದೇಶ
‘ಜನ ನಾಯಗನ್’ ಸಿನಿಮಾದ ಸೆಟ್ ಕೆಲಸಕ್ಕೆ 15 ಕೋಟಿ ರೂಪಾಯಿ ಖರ್ಚಾಗಿದೆ. ಶೂಟಿಂಗ್ಗೆ 48 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಸಿಜಿ ಕೆಲಸಕ್ಕೆ 5 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.