‘ಇದು ರಾಕಿಯ ಕೆಜಿಎಫ್’; ದಳಪತಿ ವಿಜಯ್ ರ‍್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್

| Updated By: ರಾಜೇಶ್ ದುಗ್ಗುಮನೆ

Updated on: Oct 28, 2024 | 10:48 AM

ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ ಪಕ್ಷದ ರ್ಯಾಲಿ, ಅದರ ಬೃಹತ್ ಪ್ರಮಾಣದಿಂದ, ‘ಕೆಜಿಎಫ್ 2’ ಚಿತ್ರದ ಒಂದು ದೃಶ್ಯವನ್ನು ನೆನಪಿಸುತ್ತದೆ. ಐದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ ಈ ರ್ಯಾಲಿಯು ರಾಜಕೀಯ ವಲಯದಲ್ಲಿ ಸಂಚಲನವನ್ನು ಉಂಟುಮಾಡಿದೆ.

‘ಇದು ರಾಕಿಯ ಕೆಜಿಎಫ್’; ದಳಪತಿ ವಿಜಯ್ ರ‍್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್
ವಿಜಯ್
Follow us on

‘ಕೆಜಿಎಫ್ 2’ ಚಿತ್ರದಲ್ಲಿ ಒಂದು ಥ್ರಿಲ್ಲಿಂಗ್ ಸೀನ್ ಬರುತ್ತದೆ. ರಾಕಿಯ ಕೆಜಿಎಫ್ ಹೇಗೆ ಇರುತ್ತದೆ ಎಂಬ ಕಲ್ಪನೆ ಯಾರಿಗೂ ಇರುವುದಿಲ್ಲ. ಅಲ್ಲಿ ಫೋಟೋ ತೆಗೆಯೋದು, ಮೇಲ್ಭಾಗದಲ್ಲಿ ವಿಮಾನ ಹಾರೋದು ನಿಷಿದ್ಧವಾಗಿರುತ್ತದೆ. ಆದಾಗ್ಯೂ ಕಷ್ಟಪಟ್ಟು ರಾಕಿಯ ಕೆಜಿಎಫ್​ನ ಒಂದು ದೃಶ್ಯವನ್ನು ಶೂಟ್ ಮಾಡಲಾಗಿರುತ್ತದೆ. ರಾಕಿಯ ಕೆಜಿಎಫ್​ನ ನೋಡಿ ಪ್ರಧಾನಿ ರಮಿಕಾ ಸೇನ್ ಶಾಕ್ ಆಗುತ್ತಾಳೆ. ಈಗ ದಳಪತಿ ವಿಜಯ್ ರ‍್ಯಾಲಿಯ ದೃಶ್ಯವನ್ನು ಅನೇಕರು ‘ಕೆಜಿಎಫ್ 2’ ಚಿತ್ರದ ದೃಶ್ಯಕ್ಕೆ ಹೋಲಿಕೆ ಮಾಡುತ್ತಾ ಇದ್ದಾರೆ.

ತಮಿಳುನಾಡಿನಲ್ಲಿ ವಿಜಯ್ ಅವರ ಪಕ್ಷದ ರ‍್ಯಾಲಿ ನಡೆದಿದೆ. ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷದ ಮೊದಲ ಸಾರ್ವಜನಿಕ ರ‍್ಯಾಲಿ ಇದಾಗಿತ್ತು. ವಿಜಯ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ರಾಜಕೀಯದಲ್ಲೂ ಇದೇ ರೀತಿಯ ಸ್ವಾಗತ ಸಿಗುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಒಂದೇ ರ‍್ಯಾಲಿ ಮೂಲಕ ವಿಜಯ್ ಉತ್ತರ ಕೊಟ್ಟಿದ್ದಾರೆ.

ವಿಜಯ್ ನಡೆಸಿದ ರ‍್ಯಾಲಿಯಲ್ಲಿ ಸುಮಾರು ಐದು ಲಕ್ಷ ಜನರು ಸೇರಿದ್ದರು ಎನ್ನಲಾಗಿದೆ. ‘ಇದು ರಾಕಿಯ ಕೆಜಿಎಫ್’ ಎಂದು ‘ಕೆಜಿಎಫ್ 2’ ಚಿತ್ರದಲ್ಲಿ ರಾಘವನ್ (ರಾವ್ ರಮೇಶ್) ಹೇಳುವ ಡೈಲಾಗ್​ ಜೊತೆ ರ‍್ಯಾಲಿಯ ದೃಶ್ಯಗಳನ್ನು ಜೋಡಿಸಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಆ ವಿಡಿಯೋ ನೋಡಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಪವರ್ ತೋರಿಸಿದ ದಳಪತಿ ವಿಜಯ್; ರಾಜಕೀಯ ರ‍್ಯಾಲಿಯಲ್ಲಿ ಐದು ಲಕ್ಷ ಮಂದಿ

‘ತಮಿಳಗ ವೆಟ್ರಿ ಕಳಗಮ್’ ಪಕ್ಷ ಸ್ಥಾಪನೆ ಆಗಿದ್ದು, ವಿಜಯ್ ಇದರ ಸ್ಥಾಪಕ. ಅವರು ತಮ್ಮ ನಟನಾ ವೃತ್ತಿ ಉತ್ತುಂಗದಲ್ಲಿ ಇರುವಾಗಲೇ ಅದನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಸದ್ಯ ವಿಜಯ್ ಹಮ್ಮಿಕೊಂಡಿರೋ ರ‍್ಯಾಲಿ ಉಳಿದ ಪಕ್ಷಗಳಲ್ಲಿ ಭಯ ಮೂಡಿಸಿದೆ. 2026ರಲ್ಲಿ ವಿಜಯ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.