ಅಕ್ಕಿನೇನಿ ನಾಗಾರ್ಜುನಗೆ ವಿಶೇಷ ಅಡುಗೆ ಮಾಡಿದ್ದ ಚಿರಂಜೀವಿ; ಕಾರಣವೇನು?
ಚಿರಂಜೀವಿ ಮತ್ತು ನಾಗಾರ್ಜುನರ ನಡುವಿನ ಆಪ್ತ ಸ್ನೇಹವನ್ನು ಈ ಲೇಖನ ವಿವರಿಸುತ್ತದೆ. 2021ರ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ, ಚಿರಂಜೀವಿ ನಾಗಾರ್ಜುನರಿಗೆ ವಿಶೇಷ ಅಡುಗೆ ಮಾಡಿ ತಿನ್ನಿಸಿದ್ದರು. ಈ ಘಟನೆಯ ಫೋಟೋಗಳನ್ನು ನಾಗಾರ್ಜುನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಚಿರಂಜೀವಿ ಹಾಗೂ ನಾಗಾರ್ಜುನ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದು ಪದೇ ಪದೇ ಸಾಬೀತು ಆಗುತ್ತಲೇ ಇರುತ್ತದೆ. ಇಬ್ಬರ ಮಧ್ಯೆ ತುಂಬಾ ಆಪ್ತವಾಗಿದ್ದಾರೆ. ಈ ಮೊದಲು ಚಿರಂಜೀವಿ ಅವರು ನಾಗಾರ್ಜುನ ಅವರಿಗೆ ವಿಶೇಷ ರೀತಿಯಲ್ಲಿ ಅಡುಗೆಯನ್ನು ಮಾಡಿಕೊಟ್ಟಿದ್ದರು. ಈ ಫೋಟೋಗಳನ್ನು ನಾಗಾರ್ಜುನ ಅವರು ಶೇರ್ ಮಾಡಿಕೊಂಡಿದ್ದರು.
ಅದು 2021ರ ಸಮಯ. ಕೊವಿಡ್ ಎರಡನೇ ಅಲೆ ಎದ್ದ ಕಾಲ. ಆಗ ಒಬ್ಬರನ್ನೊಬ್ಬರು ಭೇಟಿ ಮಾಡಲೂ ಹೆದರುತ್ತಿದ್ದ ಕಾಲ ಅದಾಗಿತ್ತು. ಆಗ, ಚಿರಂಜೀವಿ ಹಾಗೂ ಅಕ್ಕಿನೇನಿ ನಾಗಾರ್ಜುನ ಅವರು ಪರಸ್ಪರ ಭೇಟಿ ಆಗಿದ್ದರು. ಈ ಭೇಟಿ ಸಂದರ್ಭದಲ್ಲಿ ಚಿರಂಜೀವಿ ಅವರು ನಾಗಾರ್ಜುನ ಅವರಿಗೆ ವಿಶೇಷ ಅಡುಗೆ ಮಾಡಿ ತಿನ್ನಿಸಿದ್ದರು. ಇದನ್ನು ಸವಿದಿದ್ದರು ನಾಗಾರ್ಜುನ.
ಆ ಸಂದರ್ಭದಲ್ಲಿ ಚಿರಂಜೀವಿ ನಟನೆಯ ‘ವೈಲ್ಡ್ ಡಾಗ್’ ರಿಲೀಸ್ ಆಗುವುದರಲ್ಲಿ ಇತ್ತು. ಕೊವಿಡ್ ಸಂದರ್ಭ ಆಗಿದ್ದರಿಂದ ಜನರು ನಾನಾ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುವ ಭರದಲ್ಲಿ ಇದ್ದರು. ಆಗ ಈ ರೀತಿಯಲ್ಲಿ ಚಿರಂಜೀವಿ ಅವರು ತಮ್ಮ ಸಿನಿಮಾನ ಪ್ರಚಾರ ಮಾಡಿದ್ದರು ಅನ್ನೋದು ವಿಶೇಷ.
ಚಿರಂಜೀವಿ ಪ್ಲೇಟ್ನಲ್ಲಿ ನಾನ್ ವೆಜ್ ಇತ್ತು. ಈ ಅಡುಗೆ ಮಾಡಿ ಚಿರಂಜೀವಿ ಪೋಸ್ ಕೊಟ್ಟಿದ್ದರು. ಅಲ್ಲಿಯೇ ನಾಗಾರ್ಜುನ ಕೂಡ ಇದ್ದರು. ಈ ಮೂಲಕ ಚಿರಂಜೀವಿ ಅವರು ತಾವು ಒಳ್ಳೆಯ ಕುಕ್ ಎಂಬುದನ್ನು ಅವರು ಸಾಬೀತು ಮಾಡಿದ್ದರು.
ಟಾಲಿವುಡ್ನಲ್ಲಿ ಹೀರೋಗಳ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದರೆ, ಕನ್ನಡದಲ್ಲಿ ಅಷ್ಟಾಗಿ ಇಲ್ಲ ಎಂಬುದು ಬೇಸರದ ವಿಚಾರ ಎಂದು ಹೇಳಿದರೂ ತಪ್ಪಾಗಲಾರದು.
A delicious dinner Cooked by the megastar himself to cool my nerves for #WildDog release tomorrow !! Thank you For a wonderful evening @KChiruTweets 🙏 picture courtesy Surekha garu 😊 pic.twitter.com/86FO5aWI1Q
— Nagarjuna Akkineni (@iamnagarjuna) April 1, 2021
ಇದನ್ನೂ ಓದಿ: ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ ಅವರು ಸದ್ಯ ಬಿಗ್ ಬಾಸ್ನಲ್ಲಿ ಬ್ಯುಸಿ ಇದ್ದಾರೆ. ಇದಲ್ಲದೆ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ‘ಕುಬೇರ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇನ್ನು, ಚಿರಂಜೀವಿ ಅವರು ‘ವಿಶ್ವಂಭರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ. ಅವರ ಕೊನೆಯ ಸಿನಿಮಾ ‘ಭೋಲಾ ಶಂಕರ್’ 2023ರಲ್ಲಿ ರಿಲೀಸ್ ಆಗಿ ಸೋತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.