AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ-ನಟಿಯರ ಭೇಟಿಗೆ ದರ್ಶನ್ ನಿರಾಕರಣೆ; ಜಾಮೀನು ನಿರೀಕ್ಷೆಯಲ್ಲಿ ದಾಸ

ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್, ನಟ ನಟಿಯರ ಭೇಟಿಗೆ ನಿರಾಕರಣೆ ಮಾಡಿದ್ದಾರೆ. ಅವರ ಪತ್ನಿ ವಿಜಯಲಕ್ಷ್ಮೀ ಅವರು ಇಂದು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.

ನಟ-ನಟಿಯರ ಭೇಟಿಗೆ ದರ್ಶನ್ ನಿರಾಕರಣೆ; ಜಾಮೀನು ನಿರೀಕ್ಷೆಯಲ್ಲಿ ದಾಸ
ದರ್ಶನ್
ವಿನಾಯಕ ಬಡಿಗೇರ್​
| Edited By: |

Updated on: Oct 28, 2024 | 12:02 PM

Share

ನಟ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಪ್ರತಿ ವಾರವೂ ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿ ಮಾಡುತ್ತಿದ್ದಾರೆ. ಈಗ ನಟ, ನಟಿಯರ ಭೇಟಿಗೆ ದರ್ಶನ್ ನಿರಾಕರಣೆ ಮಾಡಿದ್ದಾರೆ. ‘ಸ್ವಲ್ಪ ದಿನದಲ್ಲಿ ಜಾಮೀನು ಸಿಗುತ್ತದೆ. ನಾನೇ ಬರುತ್ತೇನೆ’ ಎಂದು ದರ್ಶನ್ ಹೇಳಿದ್ದಾರೆ ಎಂದು ವರದಿ ಆಗಿದೆ. ಇಂದು (ಅಕ್ಟೋಬರ್ 28) ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆಯಲಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ ದರ್ಶನ್​ ಭೇಟಿಗೆ ಅವಕಾಶ ಕೇಳುತ್ತಿದ್ದಾರೆ ಎನ್ನಲಾಗಿದೆ. ನಟ ನಟಿಯರ ಭೇಟಿ ಕುರಿತು ಪತಿ ದರ್ಶನ್​ ಜೊತೆ ವಿಜಯಲಕ್ಷ್ಮೀ ಮಾತನಾಡಿದ್ದಾರೆ. ಆದರೆ ಸದ್ಯಕ್ಕೆ ಯಾರೂ ಬರುವುದು ಬೇಡ ಎಂದು ದರ್ಶನ್ ಹೇಳಿದ್ದಾರೆ. ಜಾಮೀನಿನ ವಿಚಾರದಲ್ಲಿ ಅವರು ಪಾಸಿಟಿವ್ ಆಗಿದ್ದಾರೆ.

ಜಾಮೀನು ಅರ್ಜಿ ವಿಚಾರ

ಕೊಲೆ ಆರೋಪಿ ದರ್ಶನ್​ ಜಾಮೀನು ಅರ್ಜಿ ಕೆಳ ಹಂತದ ಕೋರ್ಟ್​ನಲ್ಲಿ ರಿಜೆಕ್ಟ್ ಆಗಿದೆ. ಹೀಗಾಗಿ, ಅವರು ಹೈಕೋರ್ಟ್​ ಮೊರೆ ಹೋಗಿದ್ದಾರೆ. ಹೈಕೋರ್ಟ್​ನಲ್ಲಿ ಇಂದು (ಅಕ್ಟೋಬರ್ 28) ನಟ ದರ್ಶನ್​​ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಬೆನ್ನು ನೋವಿನಿಂದ ದರ್ಶನ್​​ ಬಳಲುತ್ತಿದ್ದಾರೆ. ಇದೇ ಮೊದಲ ಬಾರಿಗೆ ವೈದ್ಯಕೀಯ ವರದಿಯೊಂದಿಗೆ ವಕೀಲರು ವಾದ ಮಾಡುತ್ತಿದ್ದಾರೆ. ವೈದ್ಯಕೀಯ ದಾಖಲೆಗಳನ್ನು ಆಧರಿಸಿ ದರ್ಶನ್​ಗೆ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಲಿದ್ದಾರೆ. ಜಾಮೀನು ನಿರಾಕರಿಸಿದರೆ ಬೆಂಗಳೂರು ಜೈಲಿಗೆ ಸ್ಥಳಾಂತರಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

ತೀವ್ರತರವಾದ ಬೆನ್ನುನೋವು

ದರ್ಶನ್ ಅವರು ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲೇ ಇದ್ದಾರೆ. ದರ್ಶನ್ ನಡೆಯಲಾಗದ ಸ್ಥಿತಿ ನಿರ್ಮಾಣ ಆಗಿದೆ. ಒಂದು ತಿಂಗಳಿಂದ ಬೆನ್ನುನೋವಿಗೆ ದರ್ಶನ್ ಹೈರಾಣವಾಗಿದ್ದಾರೆ. ಫಿಜಿಯೋ ಥೆರಪಿ, ಜೈಲು ವೈದ್ಯಕೀಯ ಚಿಕಿತ್ಸೆ ಕ್ರಮದಿಂದಲೂ ಬೆನ್ನು ನೋವು ನಿಯಂತ್ರಣಕ್ಕೆ ಬಂದಿಲ್ಲ. ಇಂದು ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಬೇಲ್ ನಿರೀಕ್ಷೆಯಲ್ಲಿ ದರ್ಶನ್ ಇದ್ದಾರೆ.

ಇದನ್ನೂ ಓದಿ: 2900 ರೂಪಾಯಿಂದ 29 ಕೋಟಿ ವರೆಗೆ, ದರ್ಶನ್ ಪ್ರಯಾಣ ನೆನೆದ ಕೋಮಲ್

ಈಗಾಗಲೇ ವಕೀಲರು RTI ಮೂಲಕ ದರ್ಶನ್ ವೈದ್ಯಕೀಯ ವರದಿ ಪಡೆದಿದ್ದಾರೆ. ಇಂದೇ ಬೇಲ್ ಸಿಗುತ್ತದೆ ಎಂದು ದರ್ಶನ್‌ಗೆ ವಿಜಯಲಕ್ಷ್ಮೀ ಧೈರ್ಯ ತುಂಬಿದ್ದಾರೆ.  ಇಂದು ದರ್ಶನ್ ಪತ್ನಿ, ಆಪ್ತರು ಬಳ್ಳಾರಿ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಕೋರ್ಟ್ ಕಲಾಪದ ಮಧ್ಯೆಯೇ ವಿಜಯಲಕ್ಷ್ಮೀ ಅವರು ದರ್ಶನ್ ಭೇಟಿ ಮಾಡೋ‌ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.