SIIMA Awards : ಕನ್ನಡದಿಂದ ಮೂರು ಚಿತ್ರಗಳು ನಾಮಿನೇಟ್​; ನೆಚ್ಚಿನ ಚಿತ್ರಕ್ಕೆ ನೀವೂ ವೋಟ್ ಮಾಡಬಹುದು

ಸಂತೋಷ್ ಆನಂದ್​ರಾಮ್ ನಿರ್ದೇಶನದ, ಪುನೀತ್ ರಾಜ್​ಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಏಳು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಇದು ಪುನೀತ್​ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

SIIMA Awards : ಕನ್ನಡದಿಂದ ಮೂರು ಚಿತ್ರಗಳು ನಾಮಿನೇಟ್​; ನೆಚ್ಚಿನ ಚಿತ್ರಕ್ಕೆ ನೀವೂ ವೋಟ್ ಮಾಡಬಹುದು
Updated By: ರಾಜೇಶ್ ದುಗ್ಗುಮನೆ

Updated on: Aug 17, 2022 | 2:53 PM

ಪ್ರತಿಷ್ಠಿತ ‘ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಅಥವಾ ‘ಸೈಮಾ 2021’ನೇ (SIIMA 2021) ಸಾಲಿನ ನಾಮನಿರ್ದೇಶನ ಪಟ್ಟಿ ಬಿಡುಗಡೆ ಆಗಿದೆ. ದಕ್ಷಿಣ ಭಾರತದ ವಿವಿಧ ಸಿನಿಮಾಗಳು ಇಲ್ಲಿ ನಾಮನಿರ್ದೇಶನಗೊಂಡಿವೆ. ಕನ್ನಡದಿಂದ ಮೂರು ಚಿತ್ರಗಳು ನಾಮಿನೇಟ್ ಆಗಿವೆ. ತೆಲುಗಿನಲ್ಲಿ ತೆರೆಗೆ ಬಂದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ (Pushpa Movie) ಬರೋಬ್ಬರಿ 12 ವಿಭಾಗಗಳಲ್ಲಿ ನಾಮಿನೇಷನ್ ಪಡೆದುಕೊಂಡಿದೆ. ಈ ಮೂಲಕ ಅತಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಭಾಗಿ ಆಗಿದೆ.

ಕನ್ನಡದಿಂದ ಮೂರು ಚಿತ್ರಗಳು

ಇದನ್ನೂ ಓದಿ
Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
Vikrant Rona Twitter Review: ‘ಇದು ಬೆಸ್ಟ್​​ 3ಡಿ ಅನುಭವ’: ವಿಕ್ರಾಂತ್​ ರೋಣ ನೋಡಿ ಮೆಚ್ಚಿದ ಫ್ಯಾನ್ಸ್​
Vikrant Rona: ತ್ರಿನೇತ್ರ ಚಿತ್ರಮಂದಿರದಲ್ಲಿ 3ಡಿ ಸಮಸ್ಯೆ; ‘ವಿಕ್ರಾಂತ್​ ರೋಣ’ ನೋಡಲು ಬಂದ ಫ್ಯಾನ್ಸ್​ ಆಕ್ರೋಶ
Priya Sudeep: ಅಭಿಮಾನಿಗಳ ಜತೆ ಕುಳಿತು ‘ವಿಕ್ರಾಂತ್​ ರೋಣ’ ಫಸ್ಟ್​ ಶೋ ನೋಡಿದ ಸುದೀಪ್​ ಪತ್ನಿ ಪ್ರಿಯಾ

ಸ್ಯಾಂಡಲ್​ವುಡ್​ನಿಂದ ಮೂರು ಸಿನಿಮಾಗಳು ಸೈಮಾಗೆ ನಾಮ ನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್​’ ಸಿನಿಮಾ 10 ವಿಭಾಗದಲ್ಲಿ ನಾಮಿನೇಟ್ ಆಗಿದೆ. ರಾಜ್​ ಬಿ. ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೂ ಮನ್ನಣೆ ಸಿಕ್ಕಿದೆ. 2021ರಲ್ಲಿ ತೆರೆಗೆ ಬಂದ ಈ ಚಿತ್ರ 8 ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವುದು ವಿಶೇಷ. ಸಂತೋಷ್ ಆನಂದ್​ರಾಮ್ ನಿರ್ದೇಶನದ, ಪುನೀತ್ ರಾಜ್​ಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಏಳು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಇದು ಪುನೀತ್​ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

ತೆಲುಗಿನಲ್ಲಿ ಪುಷ್ಪ ಚಿತ್ರದ ಮೇಲುಗೈ

‘ಪುಷ್ಪ’ ಚಿತ್ರ 2021ರ ಅಂತ್ಯಕ್ಕೆ ತೆರೆಗೆ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಈ ಚಿತ್ರ 12 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ. ಬಾಲಯ್ಯ ಅವರ ‘ಅಖಂಡ’ ಸಿನಿಮಾಗೂ ಮನ್ನಣೆ ಸಿಕ್ಕಿದ್ದು, 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಕೃತಿ ಶೆಟ್ಟಿ ನಟನೆಯ ‘ಉಪ್ಪೇನ’ ಚಿತ್ರ 8 ವಿಭಾಗದಲ್ಲಿ ಆಯ್ಕೆ ಆಗಿದೆ.

ಉಳಿದಂತೆ ತಮಿಳಿನಲ್ಲಿ ‘ಕರ್ಣನ್​’, ‘ಡಾನ್​’, ‘ಡಾಕ್ಟರ್’, ‘ಮಾಸ್ಟರ್’ ಚಿತ್ರಗಳು ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ ‘ಮಿನ್ನಲ್​ ಮುರಳಿ’, ‘ಕುರುಪ್’, ‘ಮಲಿಕ್’, ‘ಜೋಜಿ’ ಚಿತ್ರಗಳು ನಾಮ ನಿರ್ದೇಶನಗೊಂಡಿವೆ.

ವೋಟಿಂಗ್ ಹೇಗೆ?

ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಚಿತ್ರಗಳಿಗೆ ನೀವು ವೋಟ್ ಮಾಡಬಹುದು. ಸೈಮಾ ವೆಬ್​ಸೈಟ್​ಗೆ ತೆರಳಿ ವೋಟ್ ಮಾಡಬೇಕು ಅಥವಾ ಸೈಮಾ ಫೇಸ್​ಬುಕ್ ಪೇಜ್ ಮೂಲಕವೂ ವೋಟ್ ಮಾಡಬಹುದಾಗಿದೆ.

Published On - 2:48 pm, Wed, 17 August 22