ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ಯನ್ನು ಹಿಂದಿಕ್ಕಿದ ‘ಸ್ಪೈಡರ್​​ಮ್ಯಾನ್’

The Odyssey vs Spider Man: ಪ್ರಸ್ತುತ ವಿಶ್ವ ಸಿನಿಮಾದ ಅತಿ ಹೆಚ್ಚು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ ‘ದಿ ಆಡಸ್ಸಿ’. ಮ್ಯಾಟ್ ಡೇಮನ್, ಟಾಮ್ ಹಾಲೆಂಡ್ ಇನ್ನೂ ಹಲವು ಸೂಪರ್ ಸ್ಟಾರ್ ನಟರು ನಟಿಸಿರುವ ಈ ಸಿನಿಮಾಕ್ಕೆ ವಿಶ್ವದಾದ್ಯಂತ ಭಾರಿ ಬೇಡಿಕೆ ಇದೆ. ವರ್ಷಕ್ಕೆ ಮುಂಚೆಯೇ ಸಿನಿಮಾದ ಟಿಕೆಟ್​​ಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿವೆ. ಆದರೆ ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ ಸಿನಿಮಾಕ್ಕೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಧಕ್ಕಿಲ್ಲ.

ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ಯನ್ನು ಹಿಂದಿಕ್ಕಿದ ‘ಸ್ಪೈಡರ್​​ಮ್ಯಾನ್’
The Odessy Spider Man

Updated on: Jul 10, 2026 | 11:49 AM

ಕ್ರಿಸ್ಟೊಫರ್ ನೋಲನ್ (christopher nolan) ನಿರ್ದೇಶನ ಮಾಡಿರುವ ‘ದಿ ಆಡಸ್ಸಿ’ ಸಿನಿಮಾ ಇನ್ನೊಂದು ವಾರದಲ್ಲಿ ಬಿಡುಗಡೆ ಆಗಲಿದೆ. ಪ್ರಸ್ತುತ ವಿಶ್ವ ಸಿನಿಮಾದ ಅತಿ ಹೆಚ್ಚು ನಿರೀಕ್ಷಿತ ಸಿನಿಮಾ ಇದೆನಿಸಿಕೊಂಡಿದೆ. ಮ್ಯಾಟ್ ಡೇಮನ್, ಟಾಮ್ ಹಾಲೆಂಡ್ ಇನ್ನೂ ಹಲವು ಸೂಪರ್ ಸ್ಟಾರ್ ನಟರು ನಟಿಸಿರುವ ಈ ಸಿನಿಮಾಕ್ಕೆ ವಿಶ್ವದಾದ್ಯಂತ ಭಾರಿ ಬೇಡಿಕೆ ಇದೆ. ವರ್ಷಕ್ಕೆ ಮುಂಚೆಯೇ ಸಿನಿಮಾದ ಟಿಕೆಟ್​​ಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿವೆ. ಆದರೆ ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ ಸಿನಿಮಾಕ್ಕೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಧಕ್ಕಿಲ್ಲ.

‘ದಿ ಆಡಸ್ಸಿ’ ಸಿನಿಮಾ ಜುಲೈ 17ಕ್ಕೆ ಬಿಡುಗಡೆ ಆಗಲಿದೆ. ಪರಭಾಷೆ ಸಿನಿಮಾಗಳಿಗೆ ಅದರಲ್ಲೂ ಕ್ರೇಜ್ ಹೆಚ್ಚಿರುವ ಪರಭಾಷೆ ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಭರ್ಜರಿ ಶೋಗಳು ಸಿಗುತ್ತವೆ. ಆದರೆ ‘ದಿ ಆಡಸ್ಸಿ’ ಸಿನಿಮಾಕ್ಕೆ ನಿರೀಕ್ಷಿತ ಮಟ್ಟದಲ್ಲಿ ಶೋಗಳು ದೊರೆತಿಲ್ಲ. ನೋಲನ್ ಅವರ ಈ ಹಿಂದಿನ ಸಿನಿಮಾ ಆಗಿದ್ದ ‘ಆಪನ್​​ಹೈಮರ್​’ಗೆ ಹೋಲಿಸಿದರೆ ಬಹಳ ಕಡಿಮೆ ಶೋಗಳೇ ದೊರೆತಿವೆ. ಅಲ್ಲದೆ, ‘ದಿ ಆಡಸ್ಸಿ’ ಬಿಡುಗಡೆ ಆದ ಎರಡು ವಾರದ ಬಳಿಕ ಬಿಡುಗಡೆ ಆಗಲಿರುವ ‘ಸ್ಪೈಡರ್​​ಮ್ಯಾನ್’ ಸಿನಿಮಾಕ್ಕೆ ‘ಆಡಸ್ಸಿ’ಗಿಂತಲೂ ಹೆಚ್ಚಿನ ಶೋಗಳು ದೊರೆತಿವೆ. ಪ್ರೇಕ್ಷಕರ ಪ್ರತಿಕ್ರಿಯೆಯೂ ಹೆಚ್ಚಿಗಿದೆ.

‘ದಿ ಆಡಸ್ಸಿ’ ಸಿನಿಮಾಕ್ಕೆ ಜುಲೈ 10ರಂದು ಬುಕ್​​ಮೈ ಶೋ ಮಾಹಿತಿಯಂತೆ ಬೆಂಗಳೂರಿನಲ್ಲಿ 75 ಶೋಗಳು ದೊರೆತಿವೆ. ವಿಶ್ವದ ಹಲವೆಡೆ ವರ್ಷಕ್ಕೆ ಮುಂಚೆಯೇ ಈ ಸಿನಿಮಾದ ಬುಕಿಂಗ್ ಆರಂಭವಾಗಿ ಟಿಕೆಟ್​​ಗಳು ಸೋಲ್ಡ್ ಔಟ್ ಸಹ ಆಗಿದ್ದವು. ಆದರೆ ಬೆಂಗಳೂರಿನಲ್ಲಿ ಸಿನಿಮಾ ಪ್ರೇಮಿಗಳು ಈ ಬಾರಿ ನೋಲನ್ ಸಿನಿಮಾಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಂತಿಲ್ಲ. ಸಿನಿಮಾದ ಐಮ್ಯಾಕ್ಸ್ 2ಡಿ ಗೆ ನೀಡಲಾಗಿರುವ 30 ಶೋಗಳ ಪೈಕಿ ಸುಮಾರು 25 ಶೋಗಳಿಗಷ್ಟೆ ಮುಂಗಡ ಬುಕಿಂಗ್ ಆಗಿದೆ. ಇನ್ನೆಲ್ಲ ಶೋಗಳು ಬಹುತೇಕ ಖಾಲಿ ಇವೆ. ಕೆಲ ಶೋಗಳ ಒಂದೇ ಒಂದು ಟಿಕೆಟ್ ಸಹ ಈ ವರೆಗೆ ಸೇಲ್ ಆಗಿಲ್ಲ.

ಇದನ್ನೂ ಓದಿ:‘ದಿ ಆಡಸ್ಸಿ’ ಬೆಂಗಳೂರಲ್ಲಿ ಶೋ ಕಡಿಮೆ, ಆದರೆ ಬೆಲೆ ಬಲು ಹೆಚ್ಚು

‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಇದೇ ಜುಲೈ 30 ರಂದು ಬಿಡುಗಡೆ ಆಗುತ್ತಿದೆ. ಅಂದರೆ ‘ಆಡಸ್ಸಿ’ ಬಿಡುಗಡೆ ಆದ ಎರಡು ವಾರದ ಬಳಿಕ. ಆ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್, ‘ಆಡಸ್ಸಿ’ಗಿಂತಲೂ ಚೆನ್ನಾಗಿದೆ. ಮತ್ತು ಬೆಂಗಳೂರಿನಲ್ಲಿ ಈಗಾಗಲೇ ‘ಸ್ಪೈಡರ್​ ಮ್ಯಾನ್’ ಸಿನಿಮಾಕ್ಕೆ ‘ಆಡಸ್ಸಿ’ಗಿಂತಲೂ ಹೆಚ್ಚು ಶೋಗಳು ಸಿಕ್ಕಿವೆ. ಮುಂದಿನ ದಿನಗಳಲ್ಲಿ ಶೋಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಹಾಗೂ ಈಗಾಗಲೇ ಸಿನಿಮಾದ ಹಲವು ಶೋಗಳು ಮುಂಗಡವಾಗಿ ಬುಕಿಂಗ್ ಸಹ ಆಗಿಬಿಟ್ಟಿವೆ.

‘ದಿ ಆಡಸ್ಸಿ’ ಸಿನಿಮಾದ ಟಿಕೆಟ್ ದರ ಬೆಂಗಳೂರಿನಲ್ಲಿ ಬಹಳ ಹೆಚ್ಚಿದೆ. ಕೆಲವೆಡೆ ಈ ಸಿನಿಮಾದ 2ಡಿ ಆವೃತ್ತಿಯ ಟಿಕೆಟ್​​ಗಳನ್ನು ಸಹ 1200-1300 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸಿನಿಮಾದ ಐಮ್ಯಾಕ್ಸ್ ಆವೃತ್ತಿಯ ಬೆಲೆ 1300 ರಿಂದ 1800ರವರೆಗೆ ಇದೆ. ‘ಸ್ಪೈಡರ್ ಮ್ಯಾನ್’ ಟಿಕೆಟ್ ಬೆಲೆಯೂ ಕಡಿಮೆ ಏನಿಲ್ಲ, ಸಿನಿಮಾದ 4ಡಿಎಕ್ಸ್ 3ಡಿ ಆವೃತ್ತಿಯ ಟಿಕೆಟ್ ಬೆಲೆ 1300 ರಿಂದ 1600ರವರೆಗೆ ಇದೆ. ಕೋವಿಡ್ ಬಳಿಕ ಭಾರತದಲ್ಲಿ ಹಾಲಿವುಡ್ ಸಿನಿಮಾಗಳು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿದ್ದು, ಈ ಗಳಿಕೆಯಲ್ಲಿ ದೊಡ್ಡ ಪಾಲು ಬೆಂಗಳೂರಿನದ್ದೇ ಆಗಿದೆ. ಈಗ ‘ದಿ ಆಡಸ್ಸಿ’ ಮತ್ತು ‘ಸ್ಪೈಡರ್​ ಮ್ಯಾನ್’ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಗಳಿಕೆ ಮಾಡಲಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us