
‘ಪ್ಯಾರಡೈಸ್’ ಸಿನಿಮಾಗೆ ಮೊದಲ ದಿನದಿಂದಲೇ ತೀರಾ ನೆಗೆಟಿವ್ ವಿಮರ್ಶೆಗಳು ಹರಿದುಬರುತ್ತಿವೆ. ಭಾರಿ ಹೈಪ್‌ನಿಂದಾಗಿ ‘ಪ್ಯಾರಡೈಸ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಗಳಿಕೆ ಮಾಡಿದೆ. ಆದರೆ, ಚಿತ್ರಕ್ಕೆ ಸಿಗುತ್ತಿರುವ ಬ್ಯಾಡ್ ಟಾಕ್‌ನಿಂದಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್ ಭಾರಿ ಪ್ರಮಾಣದಲ್ಲಿ ಕುಸಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಬಿಡುಗಡೆಗೂ ಮುನ್ನ ಸೃಷ್ಟಿಯಾಗಿದ್ದ ಅಪಾರ ನಿರೀಕ್ಷೆಯಿಂದಾಗಿ ‘ಪ್ಯಾರಡೈಸ್’ ಸಿನಿಮಾಗೆ ಆರಂಭಿಕ ದಿನದಂದು ಪ್ರೇಕ್ಷಕರು ಹರಿದುಬಂದಿದ್ದಾರೆ. ದೇಶಾದ್ಯಂತ ಒಟ್ಟು 9,732 ಪ್ರದರ್ಶನಗಳನ್ನು ಕಂಡಿರುವ ಈ ಸಿನಿಮಾ, ಭಾರತದಲ್ಲಿ ಮೊದಲ ದಿನ ₹34.65 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 54.90 ಕೋಟಿ ತಲುಪಿದ್ದರೆ, ಒಟ್ಟು ನೆಟ್ ಸಂಗ್ರಹ 46.25 ಕೋಟಿಗೆ ತಲುಪಿದೆ.
ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಈ ಚಿತ್ರಕ್ಕೆ ಆರಂಭಿಕ ಹೈಪ್ ಲಾಭ ತಂದುಕೊಟ್ಟಿದೆ. ಓವರ್‌ಸೀಸ್ ಮಾರುಕಟ್ಟೆಯಲ್ಲಿ ಸಿನಿಮಾ 20.00 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ‘ಪ್ಯಾರಡೈಸ್’ ಚಿತ್ರದ ಮೊದಲ ದಿನದ ವಿಶ್ವದಾದ್ಯಂತ ಒಟ್ಟು ಗ್ರಾಸ್ ಗಳಿಕೆ 74.90 ಕೋಟಿ ರೂಪಾಯಿ ದಾಟಿದೆ.
ಇದನ್ನೂ ಓದಿ: ‘ಪ್ಯಾರಡೈಸ್’ ವಿಮರ್ಶೆ; ಅಸ್ಮಿತೆಯ ಹೋರಾಟದಲ್ಲಿ ನರಕದ ಅನುಭವ
ಮೊದಲ ದಿನ ಅಡ್ವಾನ್ಸ್ ಬುಕಿಂಗ್ ಹಾಗೂ ಹೈಪ್‌ನಿಂದಾಗಿ ಚಿತ್ರ ಭರ್ಜರಿ ಆರಂಭ ಪಡೆದುಕೊಂಡಿದೆಯಾದರೂ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ತೀರಾ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರಿಂದ ನೆಗೆಟಿವ್ ಟಾಕ್ ಹರಡುತ್ತಿರುವುದರಿಂದ, ವಾರಾಂತ್ಯದ ನಂತರ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್ ಭಾರಿ ಮಟ್ಟದಲ್ಲಿ ಡೌನ್ ಆಗುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ನಿಲ್ಲಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:48 am, Fri, 25 September 26