ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ

The Raja Saab movie: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆಯಷ್ಟೆ ಅದ್ಧೂರಿಯಾಗಿ ನಡೆದಿದೆ. ಸಿನಿಮಾದ ನಿರ್ದೇಶಕ ಮಾರುತಿ ಅವರು ಇವೆಂಟ್​​ನಲ್ಲಿ ಮಾತನಾಡಿ, ಪ್ರಭಾಸ್ ಅಭಿಮಾನಿಗಳಿಗೆ ತಮ್ಮ ಮನೆ ವಿಳಾಸ ನೀಡಿದ್ದಾರೆ.

ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ
Director Maruti

Updated on: Dec 28, 2025 | 4:41 PM

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಕೊನೆಗೂ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಈ ವರ್ಷದ ಆರಂಭದಿಂದಲೂ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಕೊನೆಗೂ ಸಿನಿಮಾ ಮುಂದಿನ ತಿಂಗಳು ಅಂದರೆ ಜನವರಿಯ ಸಂಕ್ರಾಂತಿ ವೇಳೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ನಿರ್ದೇಶಕ ಮಾರುತಿ ಅವರು, ಪ್ರಭಾಸ್ ಅಭಿಮಾನಿಗಳಿಗೆ ತಮ್ಮ ಮನೆ ವಿಳಾಸ ಕೊಟ್ಟಿದ್ದಾರೆ.

ಪ್ರೀ ರಿಲೀಸ್ ಇವೆಂಟ್​​ನಲ್ಲಿ ಮಾತನಾಡಿದ ‘ದಿ ರಾಜಾ ಸಾಬ್’ ಸಿನಿಮಾದ ನಿರ್ದೇಶಕ ಮಾರುತಿ, ಪ್ರಭಾಸ್ ಅವರ ನಟನೆ, ಅವರ ಸ್ಟೈಲ್, ಅವರ ಮಾನವೀಯತೆ, ತಾಳ್ಮೆ ಇನ್ನಿತರೆಗಳನ್ನು ಕೊಂಡಾಡಿದರು. ‘ಪ್ರಭಾಸ್ ಅಂಥಹಾ ದೊಡ್ಡ ಸ್ಟಾರ್ ಅನ್ನು ಕರೆದುಕೊಂಡು ಬಂದು, ಏನೋ ಸುಮ್ಮನೆ ನಾಮ್​ ಕೆ ವಾಸ್ತೆ ಸಿನಿಮಾ ಮಾಡಲು ಆಗುವುದಿಲ್ಲ ನಾವು ಅದ್ಭುತವಾದ ಸಿನಿಮಾ ಅನ್ನೇ ಮಾಡಿದ್ದೀವಿ, ಚಿತ್ರಮಂದಿರಕ್ಕೆ ಹೋದಾಗ ನಿಮಗೆ ಅದರ ಅರಿವಾಗುತ್ತದೆ’ ಎಂದಿದ್ದಾರೆ ಮಾರುತಿ.

ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾ ಮಾಡುವಾಗ ಶ್ರೀರಾಮನ ಪಾತ್ರದಲ್ಲಿದ್ದಾಗ ನಾನು ಮಾರುತಿ ಅವರ ಬಳಿಗೆ ಹೋಗಿ ಕತೆ ಹೇಳಿದೆ. ಮೊದಲ ಭೇಟಿಯಲ್ಲಿ ಅವರನ್ನು ಚೆನ್ನಾಗಿ ನಗಿಸಿದ್ದೆ. ಅಲ್ಲಿಯ ವರೆಗೂ ನಾನು ಸಾಮಾನ್ಯ ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಿದ್ದೆ ಆದರೆ ವಿಧಿ ನನ್ನನ್ನು ‘ರೆಬೆಲ್’ ಯೂನಿವರ್ಸಿಟಿಗೆ ಸೇರಿಸಿತು. ಅವರು ನನ್ನ ಹಿಂದೆ ಒಂದು ಶಕ್ತಿಯಾಗಿ ನಿಂತು ನನ್ನನ್ನು ಮುಂದಕ್ಕೆ ಕರೆದುಕೊಂಡು ಬಂದಿದ್ದಾರೆ’ ಎಂದರು ಮಾರುತಿ.

ಇದನ್ನೂ ಓದಿ: ಹೇಗಿದೆ ನೋಡಿ ಪ್ರಭಾಸ್-ನಿಧಿ ಕಾಂಬಿನೇಷನ್

‘ಬಹಳ ಕಷ್ಟಪಟ್ಟು ಕಳೆದ ಮೂರು ವರ್ಷಗಳಿಂದ ಕಷ್ಟ ಪಟ್ಟು ಕೆಲಸ ಮಾಡಿದ್ದೇವೆ. ನಾನು ಪ್ರೇಕ್ಷಕನಾಗಿ ಸಿನಿಮಾ ನೋಡಿದ್ದೇನೆ, ಪ್ರತಿ ಬಾರಿ ಸಿನಿಮಾ ನೋಡಿದಾಗಲೂ ಕಣ್ಣೀರು ಹಾಕಿದ್ದೇನೆ, ಅದರಲ್ಲೂ ಪ್ರಭಾಸ್ ನಟನೆ ನನ್ನನ್ನು ಭಾವುಕಗೊಳಿಸಿದೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದರು ನಟ ಮಾರುತಿ. ಬಳಿಕ, ‘ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಈ ಸಿನಿಮಾ ನಿಮಗೆ 1% ಆದರೂ ಬೇಸರ ಮೂಡಿಸಿದರೂ ಸಹ ನನ್ನ ಮನೆ ವಿಳಾಸ ವಿಲ್ಲಾ ನಂಬರ್ 17, ವಿಲ್ಲಾ ಲಕ್ಷುರಿಯಾ, ಕೊಂಡಾಪುರ, ಹೈದರಾಬಾದ್. ಈ ವಿಳಾಸಕ್ಕೆ ಪ್ರಭಾಸ್ ಅಭಿಮಾನಿಗಳು, ಅವರ ಕುಟುಂಬದವರು ಬಂದು ನನ್ನನ್ನು ಪ್ರಶ್ನೆ ಮಾಡಬಹುದು ಎಂದಿದ್ದಾರೆ ಮಾರುತಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ