ಧರ್ಮದ ಬಗ್ಗೆ ನಿಷ್ಠೆ ಇಲ್ಲ, ಕುಡಿತ ಹೆಚ್ಚಾಗಿದೆ, ನಾನು ಭ್ರಷ್ಟನಾಗಿದ್ದೇನೆ; ನಟ ಗೋವಿಂದ ಹೀಗಾಗಿದ್ದೇಕೆ?

| Updated By: ಮದನ್​ ಕುಮಾರ್​

Updated on: Mar 15, 2021 | 5:30 PM

ಖಾಸಗಿ ಮಾಧ್ಯಮವೊಂದಕ್ಕೆ ಗೋವಿಂದ ಸಂದರ್ಶನ ನೀಡಿದ್ದರು. ಸಿನಿಮಾ ರಂಗ ತೊರೆದ ನಂತರ ಗೊವಿಂದ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿದ್ದಾರೆಯೇ ಎನ್ನುವ ಪ್ರಶ್ನೆ ಕೇಳಲಾಯಿತು. ಆಗ ಗೋವಿಂದ ಉತ್ತರಿಸಿದ್ದಾರೆ.

ಧರ್ಮದ ಬಗ್ಗೆ ನಿಷ್ಠೆ ಇಲ್ಲ, ಕುಡಿತ ಹೆಚ್ಚಾಗಿದೆ, ನಾನು ಭ್ರಷ್ಟನಾಗಿದ್ದೇನೆ; ನಟ ಗೋವಿಂದ ಹೀಗಾಗಿದ್ದೇಕೆ?
ನಟ ಗೋವಿಂದ
Follow us on

 90ರ ದಶಕದಲ್ಲಿ ಗೋವಿಂದ​ ಬಾಲಿವುಡ್​ನಲ್ಲಿ ಬೇಡಿಕೆಯ ನಟರಾಗಿದ್ದರು. ಅವರ ಸಿನಿಮಾಗಳು ಹೊಟ್ಟೆ ಹುಣ್ಣಾಗಿಸುವ ರೀತಿಯಲ್ಲಿ ಪ್ರೇಕ್ಷಕರನ್ನು ನಗಿಸುತ್ತಿತ್ತು. ಹೀಗಾಗಿ, ನಿರ್ಮಾಪಕರ ಪಾಲಿಗೆ ಗೋವಿಂದ ಚಿನ್ನದ ಮೊಟ್ಟೆ ಇಡುವ ಕೋಳಿ. ಆದರೆ, ಬರು ಬರುತ್ತಾ ಗೋವಿಂದ ನಟನೆಯಿಂದ ದೂರ ಉಳಿದರು. ತಮಗೆ ಅವಕಾಶ ಸಿಗುತ್ತಿಲ್ಲ ಎಂದು ಗೋವಿಂದ ಓಪನ್​ ಆಗಿಯೇ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಿದೆ. ಆದರೆ, ಯಾವ ನಿರ್ಮಾಪಕರೂ ಅವರ ಬೇಸರ ಕೇಳಲು ಮುಂದೆ ಬಂದಿಲ್ಲ. ಈ ಮಧ್ಯೆ ಗೋವಿಂದ ಅಚ್ಚರಿ ವಿಚಾರ ಬಿಚ್ಚಿಟ್ಟಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಗೋವಿಂದ ಸಂದರ್ಶನ ನೀಡಿದ್ದರು. ಸಿನಿಮಾ ರಂಗ ತೊರೆದ ನಂತರ ಗೊವಿಂದ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿದ್ದಾರೆಯೇ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿರುವ ಅವರು, ಹಳೆಯ ಗೋವಿಂದ ಧರ್ಮನಿಷ್ಠೆ ಉಳ್ಳವನಾಗಿದ್ದ. ಆದರೆ ಈ ಗೋವಿಂದ ಭ್ರಷ್ಟನಾಗಿದ್ದಾನೆ. ನಾನು ಪಾರ್ಟಿ ಮಾಡುತ್ತೇನೆ. ಧೂಮಪಾನ- ಕುಡಿತ ಹೆಚ್ಚಾಗಿದೆ. ನಾನು ಮೊದಲೆಲ್ಲ ಭಾವುಕನಾಗುತ್ತಿದೆ. ಆದರೆ, ಈಗ ಭಾವುಕನಾಗುವುದೇ ಇಲ್ಲ ಎಂದಿದ್ದಾರೆ. ಈ ಮೂಲಕ ಜೀವನದಲ್ಲಿ ಸಾಕಷ್ಟು ಬದಲಾಗಿದೆ ಎಂಬುದನ್ನು ಅವರು ಹೇಳಿದ್ದಾರೆ.

ಕಪಿಲ್​ ಶರ್ಮಾ ಶೋನಲ್ಲಿ ಗೋವಿಂದ ಸೋದರಳಿಯ ಕೃಷ್ಣ ಅಭಿಷೇಕ್​ ಇವರ ಬಗ್ಗೆ ಜೋಕ್​ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಉತ್ತರಿಸಿರುವ ಕಪಿಲ್​, ಕೃಷ್ಣನಿಗೆ ಹಾಗೆ ಹೇಳು ಎಂದು ಹೇಳಿಕೊಟ್ಟವರು ಯಾರು ಎಂದು ಗೊತ್ತಿಲ್ಲ. ಅಲ್ಲಿ ಹಾಸ್ಯ ಮಾಡಿದ್ದು ಮಾತ್ರವಲ್ಲ, ನನ್ನ ಇಮ್ಯಾಜ್​ ಕೂಡ ಹಾಳಾಗಿದೆ. ಆತ ಒಳ್ಳೆಯ ಹುಡುಗ. ಹೀಗೆ ಮಾಡಿದ್ದೇಕೆ ಎಂಬುದು ನನಗೆ ಗೊತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ನನ್ನ ಲೈಫ್​ಸ್ಟೈಲ್​ ನೋಡಿ ಅನೇಕರು ನಗುತ್ತಾರೆ. ನನ್ನ ಮನೆಯಲ್ಲಿ ಕೆಲಸಕ್ಕೆ ಹೆಚ್ಚು ಜನರಿಲ್ಲ. ನಾನೇ ಅಡುಗೆ ಮಾಡುತ್ತೇನೆ ಎನ್ನುವುದು ಎಲ್ಲರಿಗೂ ಹಾಸ್ಯದ ವಿಚಾರ. ಕೆಲವೊಮ್ಮೆ ನಿಮಗೆ ಎದುರಾಗುವ ವೈರುಧ್ಯಗಳಿಗೆ ನಿಮ್ಮ ಅದೃಷ್ಟವೇ ಮೂಲ ಕಾರಣವಾಗಿರುತ್ತದೆ ಎಂದು ಗೋವಿಂದ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಸ್ವಲ್ಪ ಯಾಮಾರಿದ್ರೂ ಅಮಿತಾಭ್​ ಕಣ್ಣು ಕಳೆದುಕೊಳ್ಳಬೇಕಿತ್ತು! ಇದು ಎಲ್ಲರೂ ಎಚ್ಚರಿಕೆ ವಹಿಸಬೇಕಾದ ವಿಷಯ

ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ