Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

Kannada Bigg Boss Elimination: ಈ ವಾರ ಮಂಜು ಪಾವಗಡ, ದಿವ್ಯಾ ಸುರೇಶ್, ಪ್ರಶಾಂತ್, ವೈಷ್ಣವಿ, ರಘು, ರಾಜೀವ್ ಡೇಂಜರ್ ಝೋನ್‌ನಲ್ಲಿದ್ದಾರೆ.

Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?
ಬಿಗ್​ ಬಾಸ್​ ಕನ್ನಡ

Updated on: Apr 25, 2021 | 2:05 PM

ಬಿಗ್​ ಬಾಸ್​ ಸ್ಪರ್ಧಿಗಳು ಈಗಾಗಲೇ 50 ದಿನ ಪೂರೈಸಿದ್ದಾರೆ. ಎಂಟನೇ ವಾರದ ಎಲಿಮಿನೇಷನ್​ ಭಾನುವಾರ (ಎಪ್ರಿಲ್​ 25) ನಡೆಯುತ್ತಿದೆ. ಈ ವಾರ ಮಂಜು ಪಾವಗಡ, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ವೈಷ್ಣವಿ, ರಘು ಹಾಗೂ ರಾಜೀವ್​ ತಲೆ ಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ಈ ಆರು ಮಂದಿಯ ಪೈಕಿ ಒಬ್ಬರ ಪ್ರಯಾಣ ಈ ವಾರಕ್ಕೆ ಅಂತ್ಯಗೊಳ್ಳಲಿದೆ.

ಈ ವಾರ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದು ನಾಮಿನೇಟ್​ ಆದವರು ಮಂಜು ಹಾಗೂ ದಿವ್ಯಾ. ಮಂಜು ಮತ್ತು ದಿವ್ಯಾ ಏಳನೇ ವಾರದ ಟಾಸ್ಕ್​ನಲ್ಲಿ ಮೋಸದ ಹಾದಿ ತುಳಿದಿದ್ದರು. ಇದು ಮನೆಮಂದಿಗೆ ಶಾಕ್​ ನೀಡಿತ್ತು. ಈ ಘಟನೆಯಿಂದ ಮನೆಯ ಸ್ಪರ್ಧಿಗಳು ತುಂಬಾನೇ ಬೇಸರ ಮಾಡಿಕೊಂಡಿದ್ದರು. ಹೀಗಾಗಿ, ಬಹುತೇಕರು ಮಂಜು ಮತ್ತು ದಿವ್ಯಾ ಹೆಸರನ್ನು ತೆಗೆದುಕೊಂಡರು.

ರಘು ವಿರುದ್ಧ ಮಂಜು ಹಾಗೂ ದಿವ್ಯಾ ಸುರೇಶ್​ ವೋಟ್​ ಮಾಡಿದ್ದಾರೆ. ವೈಷ್ಣವಿ ವಿರುದ್ಧ  ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ಮತ ಹಾಕಿದ್ದಾರೆ. ಹೀಗಾಗಿ, ರಘು ಮತ್ತು ವೈಷ್ಣವಿ ಕೂಡ ನಾಮಿನೇಟ್​ ಆಗಿದ್ದಾರೆ. ಕಳೆದ ವಾರದ ಟಾಸ್ಕ್​ನಲ್ಲಿ ಅಷ್ಟು ಉತ್ತಮವಾಗಿ ಆಡಿಲ್ಲ ಎಂಬ ಕಾರಣಕ್ಕೆ ಪ್ರಶಾಂತ್​ ಸಂಬರಗಿಯನ್ನು ನಾಮಿನೇಟ್​ ಮಾಡಲಾಗಿತ್ತು. ನೇರವಾಗಿ ನಾಮಿನೇಟ್​ ಮಾಡುವ ಅವಕಾಶ ಕ್ಯಾಪ್ಟನ್​ ಅರವಿಂದ್​ಗೆ ಇತ್ತು. ಈ ವೇಳೆ ರಾಜೀವ್ ಅವರನ್ನು ನಾಮಿನೇಟ್​ ಮಾಡಿದರು.

ಹೀಗಾಗಿ ಈ ವಾರ ಮಂಜು ಪಾವಗಡ, ದಿವ್ಯಾ ಸುರೇಶ್, ಪ್ರಶಾಂತ್, ವೈಷ್ಣವಿ, ರಘು, ರಾಜೀವ್ ಡೇಂಜರ್ ಝೋನ್‌ನಲ್ಲಿದ್ದಾರೆ. ಮಂಜು ಪಾವಗಡ ಡಲ್​ ಆದರೂ ಅವರ ಟಿಆರ್​ಪಿ ಕುಗ್ಗಿಲ್ಲ. ಹೀಗಾಗಿ, ಅವರು ಮನೆಯಿಂದ ಹೊರ ಹೋಗೋದು ಅನುಮಾನವೇ. ಪ್ರಶಾಂತ್​ ಸಂಬರಗಿ ಮನೆ ಮಂದಿಗೆ ಇಷ್ಟವಾಗದೆ ಇರಬಹುದು ಆದರೆ, ಅವರ ತಂತ್ರಗಾರಿಕೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಹೀಗಾಗಿ, ಅವರು ಕೂಡ ಮನೆಯಲ್ಲಿ ಮುಂದುವರಿಯಬಹುದು.

ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಸೈಲೆಂಟ್​ ಆಗಿದ್ದುಕೊಂಡೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ದಿವ್ಯಾ-ಮಂಜು ಕಹಾನಿ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು, ರಘು ಈ ವಾರದ ಕ್ಯಾಪ್ಟನ್​ ಆಗಿದ್ದಾರೆ. ಹೀಗಾಗಿ ಇವರಿಬ್ಬರೂ ಹೋಗೋದು ಡೌಟ್​ ಎನ್ನಲಾಗುತ್ತಿದೆ. ಇನ್ನು ಉಳೀದುಕೊಂಡಿದ್ದು ರಾಜೀವ್​. ಈ ವಾರ ಅವರೇ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸೆಲ್ಫೀ ನೆಪದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಎಲ್ಲರೆದುರೇ ಮುತ್ತಿಟ್ಟ ಅಭಿಮಾನಿ! ಮರುದಿನವೇ ಬಂತು ಕೊರೊನಾ

Published On - 3:18 pm, Sat, 24 April 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us