AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಲ್ಫೀ ನೆಪದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಎಲ್ಲರೆದುರೇ ಮುತ್ತಿಟ್ಟ ಅಭಿಮಾನಿ! ಮರುದಿನವೇ ಬಂತು ಕೊರೊನಾ

ಅಭಿಮಾನಿ ಮುತ್ತಿಟ್ಟ ಘಟನೆ ಬಗ್ಗೆ ಕೇಳುತ್ತಿದ್ದಂತೆ ಅರ್ಶಿ ಏನು ಆಗೇ ಇಲ್ಲ ಎಂಬಂತೆ ನಡೆದುಕೊಂಡರು. ಅವರಿಂದ ಹೊರಡೋಣ ನಡೆಯಿರಿ ಎನ್ನುವ ಉತ್ತರ ಬಂತು.

ಸೆಲ್ಫೀ ನೆಪದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಎಲ್ಲರೆದುರೇ ಮುತ್ತಿಟ್ಟ ಅಭಿಮಾನಿ! ಮರುದಿನವೇ ಬಂತು ಕೊರೊನಾ
ಸಾರ್ವಜನಿಕವಾಗಿ ಮುತ್ತಿಟ್ಟ ಅಭಿಮಾನಿ
ರಾಜೇಶ್ ದುಗ್ಗುಮನೆ
|

Updated on: Apr 23, 2021 | 8:21 PM

Share

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಕೆಲವೊಮ್ಮೆ ಆಭಾಸ ಎನಿಸುವ ಘಟನೆಗಳು ನಡೆಯುತ್ತವೆ. ಕೆಲ ಸೆಲೆಬ್ರಿಟಿಗಳು ಅಭಿಮಾನಿಗಳ ವರ್ತನೆಯಿಂದ ಸಿಟ್ಟಾಗಿದ್ದು ಕೂಡ ಇದೆ. ಈಗ ಬಿಗ್​ ಬಾಸ್​ 14ನೇ ಸೀಸನ್​ನ ಸ್ಪರ್ಧಿ ಎಲ್ಲರ ಎದುರೇ ಮುಜುಗರಕ್ಕೆ ಒಳಗಾಗಿದ್ದಾರೆ. ಅಭಿಮಾನಿ ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ಅವರಿಗೆ ಮುತ್ತಿಟ್ಟಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹಿಂದಿ ಬಿಗ್​ ಬಾಸ್​ ಸೀಸನ್​ 14ರ ಸ್ಪರ್ಧಿಯಾಗಿ ಅರ್ಶಿ ಖಾನ್​ ಮನೆ ಒಳಗೆ ಹೋಗಿದ್ದರು. ಈ ಮೂಲಕ ಅವರ ಖ್ಯಾತಿ ದ್ವಿಗುಣವಾಗಿತ್ತು. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳ ಜತೆ ಕೆಲವಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಕೂಡ. ಆಗ ಅವರಿಗೆ ಅಭಿಮಾನಿಯೋರ್ವ ಎದುರಾಗಿದ್ದ.

ಅಭಿಮಾನಿಗಳು ಸಿಕ್ಕಾಗ ಅರ್ಶಿ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದರು. ಅಭಿಮಾನಿ ಸೆಲ್ಫಿ ತೆಗೆದುಕೊಳ್ಳೋಕೆ ಬಂದಾಗ ಪೋಸ್​ ನೀಡಿದ್ದಾರೆ. ಅರ್ಶಿ ಸೆಲ್ಫಿಗೆ ಪೋಸ್​ ನೀಡಿ ಈಚೆ ತಿರುಗುತ್ತಿದ್ದಂತೆ ಅಭಿಮಾನಿ ಅವರ ಕೈ ತೆಗೆದುಕೊಂಡು ಮುತ್ತಿಟ್ಟಿದ್ದಾನೆ. ಈ ಘಟನೆಯಿಂದ ಅವರು ಶಾಕ್​ಗೆ ಒಳಗಾದಂತೆ ಕಂಡು ಬಂತು. ಆದರೆ, ಇದನ್ನು ಅರ್ಶಿ ಎಲ್ಲಿಯೂ ತೋರಿಸಿಕೊಳ್ಳಲಿಲ್ಲ.

View this post on Instagram

A post shared by Voompla (@voompla)

ಅಭಿಮಾನಿ ಮುತ್ತಿಟ್ಟ ಘಟನೆ ಬಗ್ಗೆ ಕೇಳುತ್ತಿದ್ದಂತೆ ಅರ್ಶಿ ಏನು ಆಗೇ ಇಲ್ಲ ಎಂಬಂತೆ ನಡೆದುಕೊಂಡರು. ಅವರಿಂದ ಹೊರಡೋಣ ನಡೆಯಿರಿ ಎನ್ನುವ ಉತ್ತರ ಬಂತು. ಈ ಘಟನೆ ನಡೆದ ಮರುದಿನವೇ ಅರ್ಶಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಈ ಬಗ್ಗೆ ಪೋಸ್ಟ್ ಮಾಡಿದ್ದ ಅರ್ಶಿ ಖಾನ್​, ನನಗೆ ಕೊವಿಡ್​ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೊನಾ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಅವರು ಕೋರಿದ್ದಾರೆ.

ಅರ್ಶಿ ಬಿಗ್​ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಅಷ್ಟೇ ಅಲ್ಲ, ಹಲವು ವಿವಾದಗಳನ್ನು ಕೂಡ ಎಬ್ಬಿಸಿದ್ದರು. ಆದರೆ, ಅವರಿಂದ ಬಿಗ್​ ಬಾಸ್​ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: Kichcha Sudeep: ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಸುದೀಪ್​; ಈ ವಾರವೂ ಬಿಗ್​ ಬಾಸ್​ಗೆ ಕಿಚ್ಚ ಗೈರು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!