ಕೊನೆಗೂ ಫಲಿಸಿತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ; ಸೋನು ಸೂದ್​ಗೆ ಕೊರೊನಾ ನೆಗೆಟಿವ್

ಈ ವಿಚಾರವನ್ನು ಸೋನು ಸೂದ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ನೆಗೆಟಿವ್​ ಬಂದಿದೆ ಎಂದು ಸನ್ನೆ ಮೂಲಕ ತೋರಿಸಿದ್ದಾರೆ.

ಕೊನೆಗೂ ಫಲಿಸಿತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ; ಸೋನು ಸೂದ್​ಗೆ ಕೊರೊನಾ ನೆಗೆಟಿವ್
ಸೋನು ಸೂದ್​
Rajesh Duggumane

|

Apr 23, 2021 | 6:43 PM

ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್​ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್​ ಸೋಂಕು ತಗುಲಿರುವುದು ಧೃಡವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ಸೋನು ಸೂದ್​ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಈಗ ಈ ಪ್ರಾರ್ಥನೆಗೆ ಫಲ ಸಿಕ್ಕಿದೆ. ಸೋನು ಸೂದ್​ಗೆ ಕೊರೊನಾ ನೆಗೆಟಿವ್​ ಬಂದಿದೆ.

‘ಕೊವಿಡ್​ ಪಾಸಿಟಿವ್​ ಆಗಿದೆ. ಆದರೆ ಮನಸ್ಸು ಮತ್ತು ಉತ್ಸಾಹ ಸೂಪರ್​ ಪಾಸಿಟಿವ್​ ಆಗಿದೆ. ಎಲ್ಲರಿಗೂ ಹಾಯ್​. ಇಂದು ಬೆಳಗ್ಗೆ ನನಗೆ ಕೊವಿಡ್​-19 ಪಾಸಿಟಿವ್​ ಆಗಿದೆ ಎಂಬುದನ್ನು ತಿಳಿಸುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಕ್ವಾರಂಟೈನ್​ ಆಗಿದ್ದೇನೆ. ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ. ಆದರೆ ಚಿಂತೆ ಮಾಡುವುದು ಬೇಡ. ನಿಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಲು ನನಗೆ ಇದರಿಂದ ಹೆಚ್ಚಿನ ಸಮಯ ಸಿಗಲಿದೆ. ನಿಮಗಾಗಿ ನಾನು ಸದಾ ಇರುತ್ತೇನೆ ಎಂಬುದನ್ನು ನೆನಪಿಡಿ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಸೋನು ಸೂದ್​ ಏಪ್ರಿಲ್​ 17ರಂದು ತಿಳಿಸಿದ್ದರು. ಇದಾದ ಒಂದು ವಾರದ ಬಳಿಕ ಅವರಿಗೆ ಕೊರೊನಾ ಟೆಸ್ಟ್​ ನೆಗೆಟಿವ್​ ಬಂದಿದೆ.

ಈ ವಿಚಾರವನ್ನು ಸೋನು ಸೂದ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ನೆಗೆಟಿವ್​ ಬಂದಿದೆ ಎಂದು ಸನ್ನೆ ಮೂಲಕ ತೋರಿಸಿದ್ದಾರೆ. ಈ ವಿಚಾರ ತಿಳಿದು ಸೋನು ಅಭಿಮಾನಿಗಳು ಖುಷಿಯಾಗಿದ್ದಾರೆ.

ವಿದೇಶದಲ್ಲಿ ಸಿಲುಕಿಕೊಂಡಿದ್ದವರನ್ನು ಭಾರತಕ್ಕೆ ಕರೆತರಲು ಸೋನು ಸೂದ್​ ಶ್ರಮಿಸಿದ್ದರು. ಕಾರ್ಮಿಕರನ್ನು ವಿಮಾನದ ಮೂಲಕ ಅವರವರ ಊರುಗಳಿಗೆ ತಲುಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸೋನು ಸೂದ್​ ಗಮನ ಸೆಳೆದಿದ್ದರು. ಈ ಎಲ್ಲ ಘಟನೆಗಳ ಬಳಿಕ ಎಷ್ಟೋ ಬಡವರ ಮನೆಯಲ್ಲಿ ಸೋನು ಸೂದ್​​ ಫೋಟೋ ಇಟ್ಟು ಪೂಜೆ ಮಾಡಿದ ಬಗ್ಗೆ ವರದಿ ಆಗಿತ್ತು.

ಇದನ್ನೂ ಓದಿ: ನಾನಲ್ಲ, ಕೊರೊನಾ ಬಳಲುತ್ತಿದೆ; ಅಚ್ಚರಿಯ ಟ್ವೀಟ್​ ಮಾಡಿದ ಸೋನು ಸೂದ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada