ಕ್ಯಾಮೆರಾ ತಳ್ಳಿದ ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ: ಪ್ಯಾಪರಾಜಿಗಳ ನಡವಳಿಕೆಗೆ ನೆಟ್ಟಿಗರ ಆಕ್ರೋಶ

ಸೆಲೆಬ್ರಿಟಿಗಳಿಗೆ ಪಾಪರಾಜಿಗಳಿಂದ ಆಗಾಗ ಕಿರಿಕಿರಿ ಆಗುತ್ತಲೇ ಇರುತ್ತದೆ. ಈಗ ‘ಟಾಕ್ಸಿಕ್’ ನಟಿ ಸುತಾರಿಯಾ ಅವರಿಗೆ ಕೂಡ ತೊಂದರೆ ಉಂಟಾಗಿದೆ. ಅತಿ ಹತ್ತಿರಕ್ಕೆ ಬಂದ ಪಾಪರಾಜಿಗಳ ಮೇಲೆ ತಾರಾ ಅವರು ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಕ್ಯಾಮೆರಾ ತಳ್ಳಿದ ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ: ಪ್ಯಾಪರಾಜಿಗಳ ನಡವಳಿಕೆಗೆ ನೆಟ್ಟಿಗರ ಆಕ್ರೋಶ
Tara Sutaria

Updated on: Sep 09, 2026 | 6:54 PM

‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ತಾರಾ ಸುತಾರಿಯಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈನ ಮಳಿಗೆಯೊಂದಕ್ಕೆ ತೆರಳುತ್ತಿದ್ದಾಗ ತೀರಾ ಹತ್ತಿರ ಬಂದ ಛಾಯಾಗ್ರಾಹಕರೊಬ್ಬರ ಕ್ಯಾಮೆರಾವನ್ನು ನಟಿ ಪಕ್ಕಕ್ಕೆ ತಳ್ಳಿರುವ ದೃಶ್ಯ ವಿಡಿಯೋದಲ್ಲಿದೆ.

ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು. ಈ ನಡುವೆ ಫೋಟೋಗ್ರಾಫರ್ ಒಬ್ಬರು ಕ್ಯಾಮೆರಾವನ್ನು ತೀರಾ ಹತ್ತಿರಕ್ಕೆ ತಂದಾಗ, ಸಹನೆ ಕಳೆದುಕೊಂಡ ತಾರಾ ಕ್ಯಾಮೆರಾವನ್ನು ಬದಿಗೆ ತಳ್ಳಿ ಮುಂದೆ ಸಾಗಿದರು.

ಇಷ್ಟೇ ಅಲ್ಲದೆ, ಕೆಲವು ಛಾಯಾಗ್ರಾಹಕರು ನಟಿಯ ಹೆಸರನ್ನು ಗೇಲಿ ಮಾಡುವ ರೀತಿಯಲ್ಲಿ ಕೂಗುತ್ತಾ, ಅಸಭ್ಯವಾಗಿ ನಡೆದುಕೊಂಡಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಒಂದೆಡೆ ‘ಟಾಕ್ಸಿಕ್’ ಸಿನಿಮಾ ಗೆದ್ದಿಲ್ಲ. ಇನ್ನೊಂದೆಡೆ ತಾರಾ ಸುತಾರಿಯಾ ಅವರಿಗೆ ಈ ರೀತಿ ಪಾಪರಾಜಿಗಳು ಕಿರಿಕ್ ಕೂಡ ಆಗಿದೆ.

Tara Sutaria shoves pap back after he gets too close…
by
u/OkPublic2232 in
BollyBlindsNGossip

ವೈರಲ್ ವಿಡಿಯೋ ನೋಡಿದ ನೆಟ್ಟಿಗರು ನಟಿಯ ಖಾಸಗಿತನಕ್ಕೆ ಧಕ್ಕೆ ತಂದ ಛಾಯಾಗ್ರಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಛಾಯಾಗ್ರಾಹಕರಿಗೆ ವೈಯಕ್ತಿಕ ಜಾಗದ ಅರಿವೇ ಇಲ್ಲ. ತಾರಾ ಅವರು ಇನ್ನು ಜೋರಾಗಿ ತಳ್ಳಬೇಕಿತ್ತು’ ಎಂದು ರೆಡ್ಡಿಟ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ನಟಿಯ ಪರವಾಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಇಂಗ್ಲಿಷ್ ವರ್ಷನ್‌ಗೆ ಶಾಕ್; ಮೊದಲ ದಿನ ಮಾರಾಟವಾಗಿದ್ದು ಕೇವಲ 450 ಟಿಕೆಟ್

ಬಾಲ ಕಲಾವಿದೆಯಾಗಿ ಕಿರುತೆರೆಯಲ್ಲಿ ವೃತ್ತಿಜೀವನ ಆರಂಭಿಸಿದ ತಾರಾ, 2019ರಲ್ಲಿ ‘ಸ್ಟೂಡೆಂಟ್ ಆಫ್ ದ ಇಯರ್ 2’ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ನಂತರ ‘ಮರ್ಜಾವಾ’, ‘ತಡಪ್’, ‘ಏಕ್ ವಿಲನ್ ರಿಟರ್ನ್ಸ್’ ಹಾಗೂ ‘ಅಪೂರ್ವ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ಮೂಲಕ ಅವರು ಪ್ಯಾನ್ ಇಂಡಿಯಾ ಮಟ್ಟದ ಖ್ಯಾತಿ ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us