ಅಬ್ಬಬ್ಬಾ.. ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಪಡೆದ ಸಂಭಾವನೆ ಇಷ್ಟೊಂದಾ?

‘ಟಾಕ್ಸಿಕ್’ ಸಿನಿಮಾ ಯಶ್ ನಾಯಕತ್ವದಲ್ಲಿ ಭಾರಿ ನಿರೀಕ್ಷೆ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಸೇರಿದಂತೆ ಐದು ನಾಯಕಿಯರಿದ್ದಾರೆ. ಕಿಯಾರಾ ತಮ್ಮ ವೃತ್ತಿಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದಿದ್ದು, ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಕಿಯಾರಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದು, ಸಿನಿಮಾದ ಹಾಡು ಇಂದು ಬಿಡುಗಡೆಯಾಗಲಿದೆ.

ಅಬ್ಬಬ್ಬಾ.. ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಪಡೆದ ಸಂಭಾವನೆ ಇಷ್ಟೊಂದಾ?
ಕಿಯಾರಾ
Edited By:

Updated on: Mar 02, 2026 | 8:10 AM

ಟಾಕ್ಸಿಕ್ ಚಿತ್ರವು ಪ್ರಸ್ತುತ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾದ ಬಗ್ಗೆ ಈಗಾಗಲೇ ಭಾರಿ ಹೈಪ್ ಸೃಷ್ಟಿ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸುತ್ತಿದ್ದು, ಒಟ್ಟು ಐದು ನಾಯಕಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಕೂಡ ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದ ಪೋಸ್ಟರ್‌ಗಳು, ಗ್ಲಿಂಪ್ಸ್‌ಗಳು ಮತ್ತು ಟೀಸರ್‌ಗಳು ಗಮನ ಸೆಳೆದಿವೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್‌ದಾಸ್ ನಿರ್ದೇಶನ ಇದೆ. ಈ ಸಿನಿಮಾ ಭಾರಿ ಹೈಪ್ ಸೃಷ್ಟಿಸಿದೆ. ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಸೇರಿದಂತೆ ಒಟ್ಟು ಐದು ನಾಯಕಿಯರು ಇದರಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬುದು ವಿಶೇಷ.

ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಸುಮಾರು 500 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ಯಶ್ ಎದುರು ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಎಂಬ ಐದು ನಾಯಕಿಯರು ನಟಿಸಿದ್ದಾರೆ.

ಆದರೆ, ಇದರಲ್ಲಿ ಕಿಯಾರಾ ಅಡ್ವಾಣಿ ವಿಶೇಷ ಆಕರ್ಷಣೆಯಾಗಲಿದ್ದಾರೆ. ಕೆಲವು ಸಮಯದಿಂದ ಚಿತ್ರಗಳಿಂದ ದೂರವಿದ್ದ ಕಿಯಾರಾ ಈಗ ಟಾಕ್ಸಿಕ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅವರು ಬಹಳ ದಿನಗಳಿಂದ ಸರಿಯಾದ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈ ಚಿತ್ರದ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ . ಈ ಚಿತ್ರದ ಹಾಡು ಇಂದು ರಿಲೀಸ್ ಆಗಲಿದೆ. ಇತ್ತೀಚೆಗೆ ಬಿಡುಗಡೆಯಾದ ಫೋಟೋಗಳಲ್ಲಿ ಕಿಯಾರಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ. ಆದರೆ, ಈ ಚಿತ್ರಕ್ಕಾಗಿ ಕಿಯಾರಾ ತೆಗೆದುಕೊಂಡ ಸಂಭಾವನೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಮಾರ್ಚ್ 2ಕ್ಕೆ ‘ಟಾಕ್ಸಿಕ್’ ಮಾರ್ಚ್ 3ಕ್ಕೆ ‘ಧುರಂಧರ್’, ಮಾರ್ಚ್ 8ಕ್ಕೆ ಮತ್ತೆ ‘ಟಾಕ್ಸಿಕ್’

ಟಾಕ್ಸಿಕ್ ಚಿತ್ರಕ್ಕಾಗಿ ಕಿಯಾರಾ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಅವರ ವೃತ್ತಿಜೀವನದ ಅತ್ಯಧಿಕ ಸಂಭಾವನೆ ಎಂದು ವರದಿಯಾಗಿದೆ. ಗೇಮ್ ಚೇಂಜರ್ ಚಿತ್ರಕ್ಕಾಗಿ ಅವರು ಸುಮಾರು 7 ಕೋಟಿ ರೂ. ಮತ್ತು ವಾರ್ 2 ಚಿತ್ರಕ್ಕಾಗಿ 13 ಕೋಟಿ ರೂ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us