
ಪೂಜಾ ಹೆಗ್ಡೆ (Pooja Hegde) ಹಾಗೂ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ‘ಅರವಿಂದ ಸಮೇತ ವೀರ ರಾಘವ’ ಚಿತ್ರದಲ್ಲಿ ಇವರಿಬ್ಬರೂ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದರು. ‘ಅಲ ವೈಕುಂಟಪುರಮುಲೋ’ ಚಿತ್ರದಲ್ಲಿ ಇಬ್ಬರೂ ಮತ್ತೆ ಒಂದಾದರು. ‘ಗುಂಟೂರು ಖಾರಂ’ ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದ ಇದ್ದರು. ಆದರೆ, ಈ ಚಿತ್ರದಿಂದ ಪೂಜಾ ಹೆಗ್ಡೆ ಹೊರ ನಡೆದಿದ್ದಾರೆ. ಇವರಿಗೆ ಮತ್ತೊಂದು ಚಾನ್ಸ್ ನೀಡೋಕೆ ತ್ರಿವಿಕ್ರಂ ಶ್ರೀನಿವಾಸ್ ಮುಂದಾಗಿದ್ದಾರೆ. ಹಾಗಂತ ಅವರ ನಿರ್ದೇಶನದ ಸಿನಿಮಾದಲ್ಲಿ ಅಲ್ಲ, ಅವರ ನಿರ್ಮಾಣದ ಹೊಸ ಚಿತ್ರಕ್ಕೆ ಪೂಜಾ ನಾಯಕಿ ಆಗಲಿದ್ದಾರೆ ಎನ್ನಲಾಗಿದೆ.
‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಆದರೆ, ಹಲವು ಕಾರಣದಿಂದ ಸಿನಿಮಾ ಕೆಲಸ ವಿಳಂಬ ಆದವು. ಈ ಮಧ್ಯೆ ಸಿನಿಮಾದ ಸ್ಕ್ರಿಪ್ಟ್ನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಕೆಲ ಬದಲಾವಣೆ ಮಾಡಿಕೊಂಡರು ಎನ್ನಲಾಗಿದೆ. ಈ ಕಾರಣದಿಂದ ಪೂಜಾ ಹೆಗ್ಡೆಗೆ ಡೇಟ್ ಹೊಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಈ ಚಿತ್ರದಿಂದ ಹೊರ ನಡೆದರು.
ನಾಯಕಿಯರು ಈ ರೀತಿ ಅರ್ಧದಲ್ಲಿ ಸಿನಿಮಾದಿಂದ ಹೊರ ನಡೆದರೆ ನಿರ್ದೇಶಕರಿಗೆ ಕೋಪ ಬರುತ್ತದೆ. ಅವರು ಎಂದಿಗೂ ಆ ಹೀರೋಯಿನ್ ಜೊತೆ ಮತ್ತೆ ಸಿನಿಮಾ ಮಾಡ ಬಯಸುವುದಿಲ್ಲ. ಆದರೆ, ತ್ರಿವಿಕ್ರಂ ಶ್ರೀನಿವಾಸ್ ಆ ರೀತಿ ಅಲ್ಲ. ಪೂಜಾ ಹೆಗ್ಡೆ ಮೇಲೆ ಮೊದಲಿದ್ದಷ್ಟೇ ಗೌರವ ಈಗಲೂ ಇದೆ. ಈ ಕಾರಣಕ್ಕೆ ಅವರು ಮತ್ತೊಂದು ಆಫರ್ ನೀಡಿದ್ದಾರೆ.
ಇದನ್ನೂ ಓದಿ: Pooja Hegde: ಸರಿಯಾದ ಅವಕಾಶ ಇಲ್ಲದೇ ಐಟಂ ಡ್ಯಾನ್ಸ್ ಮಾಡಲು ಮುಂದಾದ್ರಾ ನಟಿ ಪೂಜಾ ಹೆಗ್ಡೆ?
ಸಂಪತ್ ನಂದಿ ನಿರ್ದೇಶನದ ಚಿತ್ರದಲ್ಲಿ ಸಾಯಿ ಧರಂ ತೇಜ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆಗೆ ಆಫರ್ ನೀಡಲಾಗಿದೆ. ತ್ರಿವಿಕ್ರಂ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಕೂಡ ಸೋತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ