‘ಕುಬೇರ’ ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹಿಟ್ ಅಥವಾ ಪ್ಲಾಪ್?

Kubera movie: ಧನುಶ್, ರಶ್ಮಿಕಾ ಮತ್ತು ನಟ ನಾಗಾರ್ಜುನ ನಟಿಸಿ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿರುವ ‘ಕುಬೇರ’ ಸಿನಿಮಾ ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಶೋ ಹಲವೆಡೆ ಈಗಾಗಲೇ ಮುಗಿದಿದೆ. ಸಿನಿಮಾ ನೋಡಿದ ಹಲವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಜನಕ್ಕೆ ಇಷ್ಟವಾಯ್ತೆ?

‘ಕುಬೇರ’ ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹಿಟ್ ಅಥವಾ ಪ್ಲಾಪ್?
Kubera

Updated on: Jun 20, 2025 | 11:58 AM

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾ ಅನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೇಲರ್, ಟೀಸರ್​ಗಳು ಸಖತ್ ಗಮನ ಸೆಳೆದಿದ್ದವು. ಇದೊಂದು ಸಾಮಾಜಿಕ ಕಥಾವಸ್ತುವನ್ನು ಇಟ್ಟುಕೊಂಡು ಮಾಡಿದ್ದ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾ ಬಿಡುಗಡೆಗೆ ಮುಂಚೆಯೇ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತನ್ನೇರ್ ಜಗದೀಶ್ ಎಂಬುವರು ‘ಕುಬೇರ’ ಸಿನಿಮಾ ವೀಕ್ಷಿಸಿ 5 ಸ್ಟಾರ್​ಗಳನ್ನು ಸಿನಿಮಾಕ್ಕೆ ನೀಡಿದ್ದಾರೆ. ಧನುಶ್ ಮತ್ತೊಮ್ಮೆ ಅತ್ಯುತ್ತಮ ನಟನಾ ಪ್ರದರ್ಶನ ನೀಡಿದ್ದಾರೆ. ಶೇಖರ್ ಕಮ್ಮುಲ ತಮ್ಮ ಕಂಫರ್ಟ್ ಜೋನ್​​ನಿಂದ ಹೊರಗೆ ಬಂದು ಬಹಳ ಬೋಲ್ಡ್ ಆದ ಮತ್ತು ತೀಕ್ಷ್ಣವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಜನರ ಮುಂದೆ ತಂದಿಟ್ಟಿದ್ದಾರೆ. ಶೇಖರ್ ಕಮ್ಮುಲ ಅವರ ಕತೆ ಹೇಳುವ ರೀತಿ ಅದ್ಭುತ ಎಂದಿದ್ದಾರೆ.

ಸಾಯಿ ಕಿರಣ್ ಪಪ್ಪುಲ ಅವರು ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಧನುಶ್ ಅತ್ಯುತ್ತಮವಾಗಿ ನಟಿಸಿದ್ದಾರೆ. ನಾಗಾರ್ಜುನ ಪಾತ್ರ ಇನ್ನಷ್ಟು ಚೆನ್ನಾಗಿರಬಹುದಿತ್ತು. ರಶ್ಮಿಕಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಮತ್ತು ರೀ ರೆಕಾರ್ಡಿಂಗ್ ಚೆನ್ನಾಗಿದೆ. ಶೇಖರ್ ಕಮ್ಮುಲ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಸಿನಿಮಾ ಅನ್ನು ಇನ್ನಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುವ ಅವಕಾಶ ಅವರಿಗಿತ್ತು. ಏನೇ ಆಗಲಿ ಸಿನಿಮಾದ ಕಾನ್ಸೆಪ್ಟ್ ಚೆನ್ನಾಗಿದೆ. ನೋಡಬೇಕಾದ ಸಿನಿಮಾ’ ಎಂದಿದ್ದಾರೆ.

ಮೂವಿಸ್ ಫಾರ್ ಯೂ ಟ್ವಿಟ್ಟರ್ ಹ್ಯಾಂಡಲ್​ ನಲ್ಲಿ ಮಾಡಿರುವ ಟ್ವೀಟ್​ನಲ್ಲಿ ಧನುಶ್ ನಟನೆಯನ್ನು ಮೆಚ್ಚಿ ಕೊಂಡಾಡಲಾಗಿದೆ. ನಟನೆಯ ವಿಷಯದಲ್ಲಿ ಧನುಶ್ ಅತ್ಯುತ್ತಮ. ಪ್ರತಿ ದೃಶ್ಯ, ಪ್ರತಿ ಎಮೋಷನ್, ಪ್ರತಿ ಎಕ್ಸ್​ಪ್ರೆಷನ್​​ನಲ್ಲಿಯೂ ಅವರು ಪಾತ್ರವನ್ನು ಜೀವಿಸಿದ್ದಾರೆ. ಧನುಶ್, ಭಾತೀಯ ಚಿತ್ರರಂಗಕ್ಕೆ ಸಿಕ್ಕಿರುವ ವರ ಎಂದು ಬಣ್ಣಿಸಿದ್ದಾರೆ. ‘ಕುಬೇರ’ ಸಿನಿಮಾ ಖಂಡಿತ ನೋಡಬೇಕಾದ ಸಿನಿಮಾ ಎಂದು ತೀರ್ಪು ನೀಡಿದ್ದಾರೆ.

ಡಿಂಗು 420 ಎಂಬ ಟ್ವಿಟ್ಟರ್ ಹ್ಯಾಂಡಲ್​ ನಿಂದ ಮಾಡಲಾಗಿರುವ ಟ್ವೀಟ್​ನಲ್ಲಿ ಸಿನಿಮಾ ತುಸು ಉದ್ದವಾಯ್ತಾದರೂ ಎಲ್ಲೂ ಸಹ ಬೋರ್ ಎನಿಸುವುದಿಲ್ಲ. ಧನುಶ್ ಅವರ ಅಮಾಯಕತೆ, ನಾಗಾರ್ಜುನ ಅವರ ಪಾತ್ರದ ಬುದ್ಧಿವಂತಿಕೆ ಇಡೀ ಸಿನಿಮಾನಲ್ಲಿ ಚೆನ್ನಾಗಿ ಮೂಡಿಬಂದಿದೆ. ಶೇಖರ್ ಕಮ್ಮುಲ ಕತೆ ಹೇಳಿರುವ ರೀತಿ ಅದ್ಭುತವಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ