ತಾಯಿಯಾದ ಬಳಿಕ ಮಕ್ಕಳ ಆರೋಗ್ಯಕ್ಕಾಗಿ ಹೊಸ ಹೆಜ್ಜೆ ಇಟ್ಟ ರಾಮ್​ ಚರಣ್​ ಪತ್ನಿ ಉಪಾಸನಾ ಕೊನಿಡೆಲಾ

|

Updated on: Aug 08, 2023 | 3:55 PM

Upasana Konidela launched Apollo Children's: ‘ಯಾರ ಸಹಾಯವೂ ಇಲ್ಲದೇ ಒಬ್ಬಂಟಿಯಾಗಿ ಮಕ್ಕಳ ಆರೈಕೆ ಮಾಡುತ್ತಿರುವ ತಾಯಂದಿರ ಬಗ್ಗೆ ನಾನು ಆಲೋಚಿಸುತ್ತೇನೆ. ಅವರ ಕಷ್ಟ ಏನು ಎಂಬುದು ನನಗೆ ಅರ್ಥವಾಗುತ್ತದೆ. ಅಂಥವರಿಗೆ ನೆರವಾಗಬೇಕು ಅಂತ ನನಗೆ ಅನಿಸಿತು’ ಎಂದು ಉಪಾಸನಾ ಕೊನಿಡೆಲಾ ಹೇಳಿದ್ದಾರೆ.

ತಾಯಿಯಾದ ಬಳಿಕ ಮಕ್ಕಳ ಆರೋಗ್ಯಕ್ಕಾಗಿ ಹೊಸ ಹೆಜ್ಜೆ ಇಟ್ಟ ರಾಮ್​ ಚರಣ್​ ಪತ್ನಿ ಉಪಾಸನಾ ಕೊನಿಡೆಲಾ
ಉಪಾಸನಾ ಕೊನಿಡೆಲಾ
Follow us on

ಟಾಲಿವುಡ್​ನಲ್ಲಿ ರಾಮ್​ ಚರಣ್​ (Ram Charan) ಅವರು ನಟನಾಗಿ ಮತ್ತು ನಿರ್ಮಾಪಕನಾಗಿ ಬ್ಯುಸಿ ಆಗಿದ್ದಾರೆ. ಅವರ ಪತ್ನಿ ಉಪಾಸನಾ ಕೊನಿಡೆಲಾ (Upasana Konidela) ಅವರು ಬಿಸ್ನೆಸ್​ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆ ಆಗಿರುವ ಉಪಾಸನಾ ಅವರು ಕೆಲವೇ ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಬಳಿಕ ಅವರಿಗೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬಂದಂತಿದೆ. ಜೂಬಿಲಿ ಹಿಲ್ಸ್​ನ ಅಪೊಲೋ ಆಸ್ಪತ್ರೆಯಲ್ಲಿ (Apollo Hospital) ಮಕ್ಕಳ ಸಲುವಾಗಿ ಪ್ರತ್ಯೇಕ ಘಟಕ ಆರಂಭಿಸಲಾಗಿದೆ. ಇದಕ್ಕೆ ಮಂಗಳವಾರ (ಆಗಸ್ಟ್​ 8) ಚಾಲನೆ ನೀಡಲಾಗಿದೆ. ಉಪಾಸನಾ ಕೊನಿಡೆಲಾ ಅವರು ಇದನ್ನು ಲಾಂಚ್​ ಮಾಡಿದ್ದಾರೆ.

ಮಕ್ಕಳಿಗೆ ಸಂಬಂಧಿಸಿದ ಕ್ಲಿಷ್ಟಕರ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅನುಕೂಲ ಆಗುವ ರೀತಿಯಲ್ಲಿ Apollo Children’s ಆರಂಭಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಜೊತೆಯಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ Apollo Children’s ಘಟಕ ಶುರುವಾಗಿದೆ. ಈ ಸಲುವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪಾಸನಾ ಕೊನಿಡೆಲಾ ಅವರು ಉಪಸ್ಥಿತರಿದ್ದರು.

ಅಪೋಲೋ ಆಸ್ಪತ್ರೆಯ ಮುಖ್ಯಸ್ಥರಾದ ಪ್ರತಾಪ್​ ರೆಡ್ಡಿ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ಅಪೊಲೋದಲ್ಲಿರುವ ನುರಿತ ಮಕ್ಕಳ ವೈದ್ಯರ ಸಹಯೋಗದೊಂದಿಗೆ ನಾವು ಮಕ್ಕಳ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಇದನ್ನು ಆರಂಭಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ. ಈ ಸೇವೆಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: Ram Charan: ಹೆಣ್ಣು ಮಗುವಿಗೆ ತಾಯಿಯಾದ ಉಪಾಸನಾ; ರಾಮ್ ಚರಣ್ ಕುಟುಂಬದಲ್ಲಿ ಸಂತಸ

Apollo Children’s ಕುರಿತು ಉಪಾಸನಾ ಕೊನಿಡೆಲಾ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಯಾರ ಸಹಾಯವೂ ಇಲ್ಲದೇ ಒಬ್ಬಂಟಿಯಾಗಿ ಮಕ್ಕಳ ಆರೈಕೆ ಮಾಡುತ್ತಿರುವ ತಾಯಂದಿರ ಬಗ್ಗೆ ನಾನು ಆಲೋಚಿಸುತ್ತೇನೆ. ಅವರ ಕಷ್ಟ ಏನು ಎಂಬುದು ನನಗೆ ಅರ್ಥವಾಗುತ್ತದೆ. ಅಂಥವರಿಗೆ ನೆರವಾಗಬೇಕು ಅಂತ ನನಗೆ ಅನಿಸಿತು. ಆ ಕಾರಣದಿಂದಲೇ ನನಗೆ Apollo Children’s ಐಡಿಯಾ ಸರಿ ಎನಿಸಿತು. ಇದರಿಂದ ಹೈದರಾಬಾದ್​ನಲ್ಲಿ ಇರುವ ಜನರಿಗೆ ಅನುಕೂಲ ಆದರೆ ದೇಶದ ಬೇರೆ ಬೇರೆ ನಗರಗಳಲ್ಲೂ ಪ್ರಾರಂಭಿಸುತ್ತೇವೆ’ ಎಂದು ಉಪಾಸನಾ ಕೊನಿಡೆಲಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ​Tamannaah Bhatia: ತಮನ್ನಾ ಬಳಿ ಇದೆ 2 ಕೋಟಿ ರೂ. ಬೆಲೆಯ ವಜ್ರದ ಉಂಗುರ; ರಾಮ್​ ಚರಣ್ ಪತ್ನಿ ಉಪಾಸನಾ ನೀಡಿದ ಉಡುಗೊರೆ

ಉಪಾಸನಾ ಕೊನಿಡೆಲಾ ಮತ್ತು ರಾಮ್​ ಚರಣ್​ ಅವರು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹುವರ್ಷಗಳ ಬಳಿಕ ಅವರು ಮಗು ಪಡೆಯುವ ನಿರ್ಧಾರಕ್ಕೆ ಬಂದರು. ಜೂನ್​ 20ರಂದು ಈ ದಂಪತಿಯು ಹೆಣ್ಣು ಮಗುವನ್ನು ಪಡೆದರು. ಮಗುವಿಗೆ ಕ್ಲಿನ್​ ಕಾರಾ ಕೊನಿಡೆಲಾ ಎಂದು ಹೆಸರು ಇಟ್ಟಿದ್ದಾರೆ. ತೆಲುಗಿನ ಅನೇಕ ಸೆಲೆಬ್ರಿಟಿಗಳು ಈ ಮಗುವಿಗೆ ಐಷಾರಾಮಿ ಉಡುಗೊರೆಗಳನ್ನು ನೀಡಿದ್ದರ ಬಗ್ಗೆ ವರದಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.