Shah Rukh Khan: ಶಾರುಖ್ ಖಾನ್ ಜನಪ್ರಿಯತೆ ಬಗ್ಗೆ ಮಾತನಾಡಿದ ಅಮೆರಿಕ ರಾಯಭಾರಿ

| Updated By: ರಾಜೇಶ್ ದುಗ್ಗುಮನೆ

Updated on: Apr 02, 2024 | 11:55 AM

ಎರಿಕ್ ಅವರಿಗೆ ಆರಂಭದಲ್ಲಿ ಶಾರುಖ್ ಖಾನ್ ಮತ್ತು ಅವರ ಜನಪ್ರಿಯತೆ ಬಗ್ಗೆ ಅಷ್ಟು ತಿಳಿದಿರಲಿಲ್ಲ. ಆದರೆ ಅವರು ತಮ್ಮ ಕಚೇರಿಯಲ್ಲಿ ಶಾರುಖ್ ಅವರನ್ನು ಭೇಟಿಯಾದ ಬಗ್ಗೆ ಹೇಳಿದಾಗ ಅಲ್ಲಿನ ಸಿಬ್ಬಂದಿ ಪ್ರತಿಕ್ರಿಯಿಸಿದ್ದನ್ನು ನೋಡಿ ಅವರಿಗೆ ಜನಪ್ರಿಯತೆ ಬಗ್ಗೆ ಒಂದು ಐಡಿಯಾ ಸಿಕ್ಕಿತು.

Shah Rukh Khan: ಶಾರುಖ್ ಖಾನ್ ಜನಪ್ರಿಯತೆ ಬಗ್ಗೆ ಮಾತನಾಡಿದ ಅಮೆರಿಕ ರಾಯಭಾರಿ
ಶಾರುಖ್-ಎರಿಕ್
Follow us on

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಖ್ಯಾತಿ ಸಾಕಷ್ಟಿದೆ. ಅವರ ಒಂದು ಫೋಟೋ ಪಡೆಯಲು ಅಭಿಮಾನಿಗಳು ಸಾಕಷ್ಟು ಕಾತುರರಾಗಿರುತ್ತಾರೆ. ಅವರ ಜೊತೆ ಫೋಟೋ ಪಡೆದವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಶಾರುಖ್ ಖಾನ್ ಬಾಲಿವುಡ್‌ನ ಕಿಂಗ್ ಮಾತ್ರವಲ್ಲ, ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರ ಜನಪ್ರಿಯತೆ ಪ್ರಪಂಚದಾದ್ಯಂತ ಇದೆ. ಕಳೆದ ವರ್ಷ ಅವರು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮೊದಲ ಬಾರಿಗೆ ಭಾರತಕ್ಕೆ ಬಂದರು. ಈ ವೇಳೆ ಅವರು ಶಾರುಖ್ ಖಾನ್ ಅವರನ್ನು ಭೇಟಿಯಾದರು. ಈಗ ಆ ಭೇಟಿಯ ನೆನಪುಗಳನ್ನು ಮೆಲುಕು ಹಾಕಿರುವ ಅವರು, ಶಾರುಖ್ ಅವರನ್ನು ಭೇಟಿಯಾದ ಬಳಿಕ ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಹೇಳಿದ್ದಾರೆ.

ಎರಿಕ್ ಅವರಿಗೆ ಆರಂಭದಲ್ಲಿ ಶಾರುಖ್ ಖಾನ್ ಮತ್ತು ಅವರ ಜನಪ್ರಿಯತೆ ಬಗ್ಗೆ ಅಷ್ಟು ತಿಳಿದಿರಲಿಲ್ಲ. ಆದರೆ ಅವರು ತಮ್ಮ ಕಚೇರಿಯಲ್ಲಿ ಶಾರುಖ್ ಅವರನ್ನು ಭೇಟಿಯಾದ ಬಗ್ಗೆ ಹೇಳಿದಾಗ ಅಲ್ಲಿನ ಸಿಬ್ಬಂದಿ ಪ್ರತಿಕ್ರಿಯಿಸಿದ್ದನ್ನು ನೋಡಿ ಅವರಿಗೆ ಜನಪ್ರಿಯತೆ ಬಗ್ಗೆ ಒಂದು ಐಡಿಯಾ ಸಿಕ್ಕಿತು. ಅದರ ಬಗ್ಗೆ ಅವರು ಹೇಳಿದ್ದರು.

‘ನಾನು ಭಾರತಕ್ಕೆ ಬಂದಾಗ ಆರಂಭದ ವಾರಗಳಲ್ಲೇ ಶಾರುಖ್ ಖಾನ್ ಅವರನ್ನು ಭೇಟಿಯಾದೆ. ಆ ಸಮಯದಲ್ಲಿ ನಾನು ಅವರೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡಿದೆ. ಶಾರುಖ್ ಖಾನ್ ಐಪಿಎಲ್​ನಲ್ಲಿ ಕೆಕೆಆರ್‌ ತಂಡದ ಮಾಲೀಕರಾಗಿದ್ದಾರೆ. ನಾನು ನನ್ನ ಕಚೇರಿಯನ್ನು ತಲುಪಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ನೀವು ಯಾರನ್ನು ಭೇಟಿಯಾಗಿದ್ದೀರಿ ಎಂದು ನಿಮಗೆ ತಿಳಿದಿದೆಯೇ ಎಂದು ಕೇಳಿದರು. ನಾನು ಹೌದು, ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದೆ ಎಂದು ಹೇಳಿದೆ. ನಾನು ಭೇಟಿಯಾದ ವ್ಯಕ್ತಿಗೆ ಇಷ್ಟು ಜನಪ್ರಿಯತೆ ಇದೆ ಎಂಬುದು ನನಗೆ ಗೊತ್ತಿರಲಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.

ಎರಿಕ್ 2023ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಅವರು ಶಾರುಖ್ ಖಾನ್ ಅವರನ್ನು ಮನ್ನತ್‌ನಲ್ಲಿ ಭೇಟಿ ಮಾಡಿದ್ದರು. ಆ ಸಮಯದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಮನ್ನತ್‌ನಲ್ಲಿ ಶಾರುಖ್ ಖಾನ್ ಅವರ ಜೊತೆ ಹಲವು ವಿಚಾರ ಚರ್ಚೆ ಮಾಡಿದ್ದರು. ‘ನಾನು ಹಿಂದಿ ಸಿನಿಮಾ ಬಗ್ಗೆ, ಬಾಲಿವುಡ್ ಮತ್ತು ಹಾಲಿವುಡ್ ಮೇಲೆ ಸಾಂಸ್ಕೃತಿಕ ಪ್ರಭಾವದ ಬಗ್ಗೆಯೂ ಮಾತನಾಡಿದ್ದೇವೆ’ ಎಂದು ಅವರು ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಶಾರುಖ್ ಖಾನ್ ಕಿರಿಯ ಮಗ ಅಬ್ರಾಂನ ಶಾಲಾ ಶುಲ್ಕ ಎಷ್ಟು? ಅಚ್ಚರಿ ಗ್ಯಾರಂಟಿ

ಶಾರುಖ್ ಖಾನ್ ಅವರ ಜನಪ್ರಿಯತೆ ಅಮೆರಿಕದಲ್ಲಿ ಬಹಳ ವಿಶೇಷವಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ಶಾರುಖ್ ಖಾನ್ ಅಭಿನಯದ ‘ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದ ಡೈಲಾಗ್ ಗಳನ್ನು ತಮ್ಮ ಭಾಷಣದಲ್ಲಿ ಬಳಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ