ಫ್ರೆಬವರಿ 24ರಂದು ವಲಿಮೈ ಬಿಡುಗಡೆ ! ಪೊಲೀಸ್ ಪಾತ್ರದಲ್ಲಿ ಅಜಿತ್ ಕುಮಾರ್

ಬೋನಿ ಕಪೂರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಜಿತ್  ಕುಮಾರ್ ನಟಿಸಿರುವ ವಲಿಮೈ ಸಿನಿಮಾ ಜನವರಿ 13ರಂದು ಬಿಡುಗಡೆಯನ್ನು ಕಾಣಬೇಕಿತ್ತು. ಆದರೆ ಕೊರೊನಾ ಸಂಕಷ್ಟದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಮಸ್ಯೆಯನ್ನು ಕಂಡಿತ್ತು. ವಲಿಮೈ ಸಿನಿಮಾದಲ್ಲಿ ಹುಮಾ ಖುರೇಷಿ ಮತ್ತು ಕಾರ್ತಿಯೇಯಾ ಗುಮ್ಮಾಕೊಂಡ  ನಟಿಸಿದ್ದಾರೆ.

ಫ್ರೆಬವರಿ 24ರಂದು ವಲಿಮೈ ಬಿಡುಗಡೆ ! ಪೊಲೀಸ್ ಪಾತ್ರದಲ್ಲಿ ಅಜಿತ್ ಕುಮಾರ್
ಸಾಂಧರ್ಬಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2022 | 6:25 PM

ಕೊರೊನಾದಿಂದ ಅನೇಕ ಸಿನಿಮಾಗಳು ಸ್ಥಗಿತಗೊಂಡಿದ್ದವು ಈಗ ಮತ್ತೆ  ಸಿನಿಮಾ ತಂಡಗಳು ಈಗ ನಿಧಾನವಾಗಿ ಚೇತರಿಕೆಯನ್ನು ಕಾಣುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಇನ್ನೂ ಅನೇಕ ಸಿನಿಮಾ ಇಂಡ್ಟ್ರಸಿಸ್ ಗಳು ನಷ್ಟವನ್ನು ಅನುಭವಿಸಿತ್ತು. ಇದೀಗ ಒಂದೊಂದಾಗಿ ಮೇಲಾಕ್ಕೇಳುತ್ತಿದೆ. ಅದೆಷ್ಟೂ ಸಿನಿಮಾ ನಾಯಕರನ್ನು ಹಾಗೂ ಸಹನಟರಗಳು ಕೊರೊನಾದಿಂದ ಭಾರಿ ಸಂಕಷ್ವವನ್ನು ಅನುಭವಿಸಿದ್ದಾರೆ.  ಆದರೆ ಈಗ ಮತ್ತೆ ಚೇತರಿಕೆಯನ್ನು ಸಿನಿಮಾ ತಂಡಗಳು ಹಾಗೂ ಅದರಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರಿಗೆ ಮತ್ತೆ ಕೆಲಸ ಪಡೆಯುವಂತೆ ಮಾಡುತ್ತಿದೆ.  ಅನೇಕ ರಾಜ್ಯಗಳಲ್ಲಿ ಈ ಸಮಸ್ಯೆ ಕಾಡಿದು ನಿಜ,  ಇತಂಹ ರಾಜ್ಯಗಳ ಪೈಕಿಯಲ್ಲಿ ತಮಿಳುನಾಡು ಒಂದು.  ತಮಿಳುನಾಡಿನಲ್ಲಿ ಕೊರೊನಾ ಹೆಚ್ಚಾಗಿದ್ದು,  ಲಾಕ್ ಡೌನ್, ನೈಟ್ ಕರ್ಫ್ಯೂನಂತಹ  ಕ್ರಮಗಳನ್ನು ಕೈಗೊಂಡಿತ್ತು. ಸಿನಿಮಾಗಳಿಗೂ ಅವಕಾಶವನ್ನು ನೀಡಿರಲಿಲ್ಲ. ಇದೀಗ ತಮಿಳುನಾಡಿನಲ್ಲಿ ಕೊರೊನಾ ನಿಯಂತ್ರಣಗೊಂಡಿದ್ದು, ಮತ್ತೆ ಚಿತ್ರಮಂದಿರಗಳು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಸಾಲು  ನಿಂತಿದೆ.  ಇದೀಗ ಕೊರೊನಾ ನಂತರ ತಮಿಳು ಖ್ಯಾತ ನಟ ಅಜಿತ್ ಕುಮಾರ್ ಅವರ ಹೊಸ ಸಿನಿಮಾ ಹಾಗೂ ಅಭಿಮಾನಿಗಳು ಬಹುನಿರೀಕ್ಷಿತ ಥ್ರೀಲರ್ ಸಿನಿಮಾ ವಲಿಮೈ  ಫ್ರೆಬವರಿ 24 ತೆರೆ ಕಾಣಲಿದೆ. ಈ ಸಿನಿಮಾ ಕೊರೊನಾದಿಂದ ಮುಂದೂಡಲಾಗಿತ್ತು.

ಬೋನಿ ಕಪೂರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಜಿತ್  ಕುಮಾರ್ ನಟಿಸಿರುವ ವಲಿಮೈ ಸಿನಿಮಾ ಜನವರಿ 13ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಸಂಕಷ್ಟದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಮಸ್ಯೆಯಾಗಿತ್ತು. ವಲಿಮೈ ಸಿನಿಮಾದಲ್ಲಿ ಹುಮಾ ಖುರೇಷಿ ಮತ್ತು ಕಾರ್ತಿಯೇಯಾ ಗುಮ್ಮಾಕೊಂಡ  ನಟಿಸಿದ್ದಾರೆ. ಇದೀಗ ಈ ಸಿನಿಮಾ ಫೆ. 24ರಂದು ಎಲ್ಲ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದೆ. ಜೊತೆಗೆ ಕನ್ನಡ, ತೆಲುಗು, ಹಿಂದಿಯಲ್ಲೂ ತೆರೆ ಕಾಣಲಿದೆ. ಸಿನಿಮಾ ಬಿಡುಗಡೆಯ ಬಗ್ಗೆ ನಿಶಬ್ದಗಿಂತ ಕಾರ್ಯಗಳು ಜೋರಾಗಿ ಮಾತನಾಡುತ್ತೇವೆ, ಕಾಯುವಿಕೆ ಚೆನ್ನಾಗಿದೆ ಮತ್ತು ಆ ಕಾಯುವಿಕೆಯಿಂದ ಸಿನಿಮಾ  ನಿಜವಾಗಿ ಚೆನ್ನಾಗಿ ಮೂಡಿ ಬಂದಿದೆ ಎಂದು ಟ್ವಿಟರ್ ಮೂಲಕ ನಿರ್ಮಾಪಕ ಬೋನಿ ಕಪೂರ್ ಬರೆದುಕೊಂಡಿದ್ದಾರೆ.

ವಲಿಮೈ ಚಿತ್ರವನ್ನು ಹೆಚ್ ವಿನೋತ್  ಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಬೇವ್ಯೂ ಪ್ರಾಜೆಕ್ಟ್ ಎಲ್ ಎಲ್ ಪಿ ಅಡಿಯಲ್ಲಿ  ಜೀ ಸ್ಟುಡಿಯೋಸ್ ಮತ್ತು ಕಪೂರ್ ನಿರ್ಮಿಸಿದ್ದಾರೆ. ಅಜಿತ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಅರ್ಜುನ್ ಎಂಬ ಹೆಸರಿನ ಮೂಲಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ, ಕ್ರೈಂ ನಲ್ಲಿ ತೋಡಗಿಕೊಂಡಿರುವ ವ್ಯಕ್ತಿಗಳ ಗುಂಪುಗಳನ್ನು ಭೇದಿಸುವ ಪಾತ್ರವನ್ನು ಹೊಂದಿದ್ದಾರೆ.  ಒಟ್ಟಿನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ  ಬರಲಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.


 

Published On - 2:24 pm, Fri, 4 February 22