ಒಟ್ಟೊಟ್ಟಿಗೆ ಇನ್​​ಸ್ಟಾಗ್ರಾಮ್​ಗೆ ಮರಳಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ

ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಡೇಟಿಂಗ್ ನಡೆಸುತ್ತಿರುವ ವಿಚಾರವನ್ನು ಈ ಜೋಡಿ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಕಾಕತಾಳೀಯ ಎಂಬಂತೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಂದೇ ದಿನ ಇನ್​ಸ್ಟಾಗ್ರಾಮ್​ಗೆ ಮರಳಿದ್ದಾರೆ.

ಒಟ್ಟೊಟ್ಟಿಗೆ ಇನ್​​ಸ್ಟಾಗ್ರಾಮ್​ಗೆ ಮರಳಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ
ರಶ್ಮಿಕಾ-ವಿಜಯ್
Updated By: ರಾಜೇಶ್ ದುಗ್ಗುಮನೆ

Updated on: Nov 21, 2022 | 4:00 PM

ವಿಜಯ್ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಆದರೆ, ಈ ವರೆಗೆ ಈ ವಿಚಾರ ಅಧಿಕೃತವಾಗಿಲ್ಲ. ಈ ಜೋಡಿ ನಡೆದುಕೊಳ್ಳುವ ರೀತಿ ಹಲವರಿಗೆ ಅನುಮಾನ ಮೂಡಿಸಿದೆ. ಇತ್ತೀಚೆಗೆ ಇಬ್ಬರೂ ಒಟ್ಟಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಮಾಲ್ಡೀವ್ಸ್​ಗೆ ಹೋಗಿ ಸಮಯ ಕಳೆದು ಬಂದಿದ್ದರು ಎನ್ನಲಾಗಿದೆ. ಈಗ ಈ ಜೋಡಿ ಒಟ್ಟಾಗಿ ಇನ್​ಸ್ಟಾಗ್ರಾಮ್​ಗೆ ಕಂಬ್ಯಾಕ್ ಮಾಡಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಮೊದಲು ಒಟ್ಟಾಗಿ ನಟಿಸಿದ್ದು ‘ಗೀತ ಗೋವಿಂದಂ’ ಸಿನಿಮಾದಲ್ಲಿ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ನಂತರ ‘ಡಿಯರ್ ಕಾಮ್ರೇಡ್​’ ಚಿತ್ರದಲ್ಲಿ ಮತ್ತೆ ಇವರು ಒಟ್ಟಾಗಿ ನಟಿಸಿದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಡೇಟಿಂಗ್ ನಡೆಸುತ್ತಿರುವ ವಿಚಾರವನ್ನು ಈ ಜೋಡಿ ಅಲ್ಲಗಳೆಯುತ್ತಲೇ ಬಂದಿದ್ದಾರೆ.

ಕಾಕತಾಳೀಯ ಎಂಬಂತೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಂದೇ ದಿನ ಇನ್​ಸ್ಟಾಗ್ರಾಮ್​ಗೆ ಮರಳಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರಶ್ಮಿಕಾ ಕಳೆದ ಒಂದು ವಾರದಿಂದ ಯಾವುದೇ ಪೋಸ್ಟ್ ಹಾಕಿರಲಿಲ್ಲ. ವಿಜಯ್ ದೇವರಕೊಂಡ ಅವರು ಯಾವುದೇ ಫೋಟೋ ಅಪ್​ಲೋಡ್ ಮಾಡದೆ 15 ದಿನಗಳ ಮೇಲಾಗಿತ್ತು. ಈಗ ಈ ಜೋಡಿ ಒಂದೇ ದಿನ ಫೋಟೋ ಪೋಸ್ಟ್ ಮಾಡಿದೆ.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ. ಅವರು ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನು, ವಿಜಯ್ ದೇವರಕೊಂಡ ಅವರು ಕಪ್ಪು ಬಣ್ಣದ ಜಾಕೆಟ್ ಹಾಕಿ ಪೋಸ್ ನೀಡಿದ್ದಾರೆ.

ಇದನ್ನೂ ಓದಿ: Varisu: ಪ್ರಪಂಚದಲ್ಲೇ 2ನೇ ಸ್ಥಾನ ಪಡೆದ ರಶ್ಮಿಕಾ ಮಂದಣ್ಣ ಹೊಸ ಸಾಂಗ್​ ‘ರಂಜಿದಮೆ..’

ಬಾಲಿವುಡ್​ಗೆ ಕಾಲಿಡುವ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಸಾಮ್ಯತೆ ಇದೆ. ಈ ವರ್ಷ ವಿಜಯ್ ದೇವರಕೊಂಡ ಅವರು ‘ಲೈಗರ್’ ಮೂಲಕ ಬಾಲಿವುಡ್​ಗೆ ಕಾಲಿಟ್ಟರೆ, ರಶ್ಮಿಕಾ ಅವರು ‘ಗುಡ್​ಬೈ’ ಚಿತ್ರದ ಮೂಲಕ ಹಿಂದಿ ಚಿತ್ರರಂಗದಲ್ಲಿ ಪಯಣ ಆರಂಭಿಸಿದರು. ಬಾಲಿವುಡ್​ನಲ್ಲಿ ಈ ಜೋಡಿಗೆ ಮೊದಲ ಸಿನಿಮಾದಲ್ಲೇ ಸೋಲುಂಟಾಗಿದೆ.