Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಮತ್ತೊಂದು ಹಿನ್ನಡೆ; ‘ಮಿಷನ್​ ಮಜ್ನು’ ಚಿತ್ರಕ್ಕಿಲ್ಲ ಥಿಯೇಟರ್​ ಭಾಗ್ಯ

Sidharth Malhotra | Mission Majnu: ‘ಗುಡ್​ಬೈ’, ‘ಥ್ಯಾಂಕ್​ ಗಾಡ್​’ ಚಿತ್ರಗಳು ಥಿಯೇಟರ್​ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿವೆ. ಪರಿಣಾಮವಾಗಿ ‘ಮಿಷನ್​ ಮಜ್ನು’ ನಿರ್ಮಾಪಕರು ನೇರವಾಗಿ ಒಟಿಟಿ ಆಯ್ಕೆ ಬಗ್ಗೆ ಯೋಚಿಸಿದಂತಿದೆ.

Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಮತ್ತೊಂದು ಹಿನ್ನಡೆ; ‘ಮಿಷನ್​ ಮಜ್ನು’ ಚಿತ್ರಕ್ಕಿಲ್ಲ ಥಿಯೇಟರ್​ ಭಾಗ್ಯ
ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on:Nov 17, 2022 | 7:39 AM

ದಕ್ಷಿಣ ಭಾರತದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ಅವರು ಬಾಲಿವುಡ್​ ಸಿನಿಮಾಗಳಿಗೂ ಸಹಿ ಮಾಡಿದರು. ಆದರೆ ಹಿಂದಿ ಚಿತ್ರರಂಗದಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಗುತ್ತಿಲ್ಲ. ಅವರ ಮೊದಲ ಬಾಲಿವುಡ್​ ಚಿತ್ರ ‘ಗುಡ್​ಬೈ’ ಕಮಾಲ್​ ಮಾಡಲಿಲ್ಲ. ಅಮಿತಾಭ್​ ಬಚ್ಚನ್​ ಅವರಂತಹ ಸ್ಟಾರ್​ ನಟನ ಜೊತೆ ತೆರೆ ಹಂಚಿಕೊಂಡಿದ್ದರೂ ಕೂಡ ರಶ್ಮಿಕಾ ಆ ಸಿನಿಮಾದಿಂದ ಗೆಲುವು ಕಾಣಲಿಲ್ಲ. ಈಗ ಅವರ ಮುಂದಿನ ಬಾಲಿವುಡ್​ ಚಿತ್ರ ‘ಮಿಷನ್​ ಮಜ್ನು’ (Mission Majnu) ಯಾವಾಗ ರಿಲೀಸ್ ಆಗಲಿದೆ​ ಎಂದು ಅಭಿಮಾನಿಗಳು ಕಾದಿದ್ದಾರೆ. ಆದರೆ ಈ ಸಿನಿಮಾ ಥಿಯೇಟರ್​​ನಲ್ಲಿ ರಿಲೀಸ್​ ಆಗುವುದಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ‘ಪಿಂಕ್​ವಿಲ್ಲಾ’ ವರದಿ ಪ್ರಕಾರ, ‘ಮಿಷನ್​ ಮಜ್ನು’ ಸಿನಿಮಾ ನೇರವಾಗಿ ಒಟಿಟಿ (OTT) ಅಂಗಳಕ್ಕೆ ಕಾಲಿಡಲಿದೆ ಎನ್ನಲಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಮಿಷನ್​ ಮಜ್ನು’ ಚಿತ್ರವೇ ರಶ್ಮಿಕಾ ಮಂದಣ್ಣ ಅವರ ಮೊದಲ ಹಿಂದಿ ಸಿನಿಮಾ ಆಗಬೇಕಿತ್ತು. 2022ರ ಜೂನ್ ತಿಂಗಳಲ್ಲೇ ಇದನ್ನು ರಿಲೀಸ್​ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಈ ಚಿತ್ರದ ಕೆಲಸಗಳು ತಡವಾದವು. ಅದು ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಈಗ ಚಿತ್ರಮಂದಿರದಲ್ಲಿ ‘ಮಿಷನ್​ ಮಜ್ನು’ ಬಿಡುಗಡೆ ಆಗುವುದಿಲ್ಲ ಎಂಬ ಸುದ್ದಿ ಕೇಳಿಬಂದಿದೆ.

‘ಮಿಷನ್​ ಮಜ್ನು’ ಸಿನಿಮಾದಲ್ಲಿ ಖ್ಯಾತ ನಟ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಇಬ್ಬರೂ ಕಲಾವಿದರಿಗೆ ಇತ್ತೀಚೆಗೆ ಗೆಲುವು ಕೈ ಹಿಡಿದಿಲ್ಲ. ರಶ್ಮಿಕಾ ನಟನೆಯ ‘ಗುಡ್​ಬೈ’ ಚಿತ್ರ ಸೋತ ರೀತಿಯಲ್ಲೇ ಸಿದ್ಧಾ​ರ್ಥ್ ಮಲ್ಹೋತ್ರಾ ಅವರ ‘ಥ್ಯಾಂಕ್​ ಗಾಡ್​’ ಸಿನಿಮಾ ಕೂಡ ಥಿಯೇಟರ್​ನಲ್ಲಿ ರಿಲೀಸ್​ ಆಗಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಇದನ್ನೆಲ್ಲ ಗಮನಿಸಿದ ‘ಮಿಷನ್​ ಮಜ್ನು’ ನಿರ್ಮಾಪಕರು ನೇರವಾಗಿ ಒಟಿಟಿಯಲ್ಲಿ ಚಿತ್ರವನ್ನು ರಿಲೀಸ್​ ಮಾಡುವ ನಿರ್ಧಾರಕ್ಕೆ ಬಂದಂತಿದೆ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

‘ಪಿಂಕ್​ವಿಲ್ಲಾ’ ವರದಿ ಮಾಡಿರುವ ಪ್ರಕಾರ, 2023ರ ಜನವರಿ 18ರಂದು ‘ಮಿಷನ್​ ಮಜ್ನು’ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆಗಲಿದೆ. ಈ ಕುರಿತು ನಿರ್ಮಾಪಕರಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ಹಲವು ತಿಂಗಳ ಹಿಂದೆಯೇ ಈ ಚಿತ್ರದ ಶೂಟಿಂಗ್​ ಮುಗಿದಿತ್ತು. ಈಗ ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾಗೆ ಶಾಂತನು ಬಾಗ್ಚಿ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Thu, 17 November 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ