
ವಿಜಯ್ ದೇವರಕೊಂಡ (Vijay Devarakonda) ಅವರು ಇಂದು ಟಾಲಿವುಡ್ನ ಸ್ಟಾರ್ ಹೀರೋ ಆಗಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಹಂತ ಹಂತವಾಗಿ ಬೆಳೆದು ಈವರೆಗೆ ಬಂದಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅವರು ಸ್ಟಾರ್ ಹೀರೋ ಎನಿಸಿಕೊಂಡಿದ್ದಾರೆ. ಅವರಿಗೆ ಇಂದು (ಮೇ 9) ಜನ್ಮದಿನ. ಎಲ್ಲರೂ ವಿಜಯ್ಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ. ಅವರ ಒಟ್ಟಾರೆ ಆಸ್ತಿ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
2016ರಲ್ಲಿ ರಿಲೀಸ್ ಆದ ‘ಪೆಳ್ಳಿ ಚೂಪುಲು’ ವಿಜಯ್ ಖ್ಯಾತಿಯನ್ನು ಹೆಚ್ಚಿಸಿತು. 2017ರಲ್ಲಿ ಬಿಡುಗಡೆ ಆದ ‘ಅರ್ಜುನ್ ರೆಡ್ಡಿ’ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡೆದರು. ಇದು ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿತು. 2018ರ ‘ಗೀತ ಗೋವಿಂದಂ’ ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಿತು. 2018ರಿಂದ ಈಚೆಗೆ ಅವರು ದೊಡ್ಡ ಗೆಲುವು ಕಂಡಿಲ್ಲ. ಹಾಗಂತ ಅವರ ಆಸ್ತಿ ಕಡಿಮೆ ಆಗಿಲ್ಲ.
ವಿಜಯ್ ದೇವರಕೊಂಡ ಅವರ ಆಸ್ತಿ 66 ಕೋಟಿ ರೂಪಾಯಿ ಇದೆ. ಸಿನಿಮಾ ಹಾಗೂ ಬ್ರ್ಯಾಂಡ್ ಪ್ರಚಾರದಿಂದ ಇವರು ದೊಡ್ಡ ಮೊತ್ತದ ಹಣ ಸಂಪಾದಿಸುತ್ತಿದ್ದಾರೆ. ಇದರ ಜೊತೆಗೆ ಅವರು ತಮ್ಮದೇ ಆದ ಥಿಯೇಟರ್ ಹೊಂದಿದ್ದಾರೆ. ವರ್ಷಕ್ಕೆ ಅವರು 13 ಕೋಟಿ ರೂಪಾಯಿ ಸಂಪಾದಿಸುತ್ತಾರೆ.
ಪ್ರತಿ ಚಿತ್ರಕ್ಕೆ ಅವರು ಕೋಟ್ಯಂತರ ರೂಪಾಯಿ ಪಡೆಯುತ್ತಾರೆ. ‘ಲೈಗರ್’ ಚಿತ್ರಕ್ಕಾಗಿ 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಅವರು. ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ 1 ಕೋಟಿ ರೂಪಾಯಿ ಪಡೆಯುತ್ತಾರೆ. ವಿಜಯ್ ದೇವರಕೊಂಡ ಅವರು ಹೈದರಾಬಾದ್ನ ದುಬಾರಿ ಏರಿಯಾ ಜುಬ್ಲಿ ಹಿಲ್ಸ್ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಯ ಬೆಲೆ 15 ಕೋಟಿ ರೂಪಾಯಿ. ಹಲವು ರಿಯಲ್ಎಸ್ಟೇಟ್ಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.
ವಿಜಯ್ ದೇವರಕೊಂಡ ಅವರಿಗೆ ಕಾರ್ ಕ್ರೇಜ್ ಇದೆ. ಅವರ ಬಳಿ ಫೋರ್ಡ್ ಮಸ್ಟಂಗ್ ಕಾರು ಇದೆ. ಇದರ ಬೆಲೆ 74 ಲಕ್ಷ ರೂಪಾಯಿ. ಬಿಎಂಡಬ್ಲ್ಯೂ 5 ಸೀರಿಸ್ (61 ಲಕ್ಷ ರೂಪಾಯಿ), ಮರ್ಸಿಡಿಸ್ ಬೆಂಜ್ ಜಿಎಲ್ಎಸ್ 350 (88 ಲಕ್ಷ ರೂಪಾಯಿ), ವೋಲ್ವೊ ಎಕ್ಸ್ಸಿ90 (1.31 ಕೋಟಿ ರೂಪಾಯಿ), ಆಡಿ ಕ್ಯೂ 7 (80 ಲಕ್ಷ ರೂಪಾಯಿ) ಇದೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ಹೊಸ ಚಿತ್ರದಿಂದ ಹೊರ ನಡೆದ ಶ್ರೀಲೀಲಾ; ‘ಪ್ರೇಮಲು’ ನಾಯಕಿಯ ಎಂಟ್ರಿ?
ವಿಜಯ್ ದೇವರಕೊಂಡ ಅವರ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಲು ಸಾಧ್ಯವಾಗಿಲ್ಲ. ಅವರು ಸದ್ಯ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.