ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ರಜನಿಕಾಂತ್; ಅದೊಂದು ಕನಸು ಎಲ್ಲವನ್ನೂ ಬದಲಿಸಿತು

ರಜನಿಕಾಂತ್ ಅವರು ಇಂದು ಸೂಪರ್​ಸ್ಟಾರ್. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಸೂಪರ್ ಸ್ಟಾರ್ ಆಗುವುದರ ಹಿಂದೆ ಒಂದು ದೊಡ್ಡ ಕಥೆ ಇದೆ. ‘ನಾನು ಬಸ್ ಕಂಡಕ್ಟರ್ ಆಗಿದ್ದೆ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕೂ ಮೊದಲು ಆಫೀಸ್ ಬಾಯ್ ಆಗಿದ್ದೆ, ಕೂಲಿ ಕೆಲಸ ಮಾಡಿದ್ದೆ’ ಎಂದಿದ್ದರು ಅವರು.

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ರಜನಿಕಾಂತ್; ಅದೊಂದು ಕನಸು ಎಲ್ಲವನ್ನೂ ಬದಲಿಸಿತು
ರಜನಿ
Follow us
ರಾಜೇಶ್ ದುಗ್ಗುಮನೆ
|

Updated on: May 09, 2024 | 7:05 AM

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಅನೇಕರಿಗೆ ಮಾದರಿ. ಕಂಡಕ್ಟರ್ ಆಗಿದ್ದ ಅವರು ಹೀರೋ ಆದರು. ಸೂಪರ್​ ಸ್ಟಾರ್ ರಜನಿಕಾಂತ್ ಎಂದೇ ಅವರು ಫೇಮಸ್. ಅವರಿಗೆ ಚಿಕ್ಕ ವಯಸ್ಸಿನಿಂದ ಶ್ರೀಮಂತನಾಗಬೇಕು ಎನ್ನುವ ಕನಸು ಇತ್ತು. ಆ ಕನಸು ಈಡೇರಿದೆ. ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಅವರಿಗೆ ಒಮ್ಮೆ ಆತ್ಮಹತ್ಯೆ ಆಲೋಚನೆ ಬಂದಿತ್ತು. ಒಂದು ಫೋಟೋ ಹಾಗೂ ಕನಸು ಅವರನ್ನು ಬದಲಿಸಿತು.

‘ನಿಮ್ಮಲ್ಲಿ ಮಾತನಾಡುವ ಕಲೆ ಇರಬೇಕು. ಅದು ಇದ್ದರೆ ನಿಮ್ಮನ್ನು ಜನರು ರಾಜಕಾರಣಿಗಳನ್ನಾಗಿ ಮಾಡುತ್ತಾರೆ. ಮತ್ತೆ ಯಾವುದೇ ಅರ್ಹತೆ, ಟ್ಯಾಲೆಂಟ್ ಅಥವಾ ಹಿನ್ನೆಲೆ ಬೇಡ. ಹೀಗಾಗಿ ನಾನು ಮಾತನಾಡುವುದನ್ನು ಕಲಿತಿಲ್ಲ. ಆದರೆ ಗೊತ್ತಿಲ್ಲದ ವಿಷಯವನ್ನು ಹೇಳುತ್ತಾ ಹೋದರೆ ಕೇಳುಗರಿಗೆ ಬೇಸರವಾಗಬಹುದೆಂದು ನಾನು ಸ್ವಲ್ಪ ಮಾತನಾಡುವುದನ್ನು ಕಲಿಯಲು ನಿರ್ಧರಿಸಿದೆ’ ಎಂದು ರಜನಿಕಾಂತ್ ಅವರು ಈ ಮೊದಲು ಹೇಳಿಕೊಂಡಿದ್ದರು.

‘ನಾನು ಬಸ್ ಕಂಡಕ್ಟರ್ ಆಗಿದ್ದೆ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕೂ ಮೊದಲು ಆಫೀಸ್ ಬಾಯ್ ಆಗಿದ್ದೆ, ಕೂಲಿ ಕೆಲಸ ಮಾಡಿದ್ದೆ. ಆ ಬಳಿಕ ಕಂಡಕ್ಟರ್ ಆಗಲು ನಿರ್ಧರಿಸಿದೆ. ಬಡ ಕುಟುಂಬದಲ್ಲಿ ಹುಟ್ಟಿದ್ದರಿಂದ ಇದೆಲ್ಲವನ್ನೂ ಮಾಡಬೇಕಾಗಿ ಬಂತು. ನನಗೆ ಶ್ರೀಮಂತನಾಗಬೇಕು ಎಂದಿತ್ತು. ನಾನು ಯುವಕನಾಗಿದ್ದಾಗ ಯಾವುದಕ್ಕೂ ಭಯಪಟ್ಟಿಲ್ಲ. ಆದರೆ, ಒಮ್ಮೆ ಭಯಬಿದ್ದು ನಾನು ಆತ್ಮಹತ್ಯೆ ಮಾಡಿಕೊಳ್ಳಲೂ ಯೋಚಿಸಿದ್ದೆ. ಅಂದು ನಾನು ಜನರು ದೇವರಿಗೆ ಪೂಜೆ ಮಾಡುತ್ತಿರುವ ಫೋಟೋ ನೋಡಿದೆ. ಆಗ ನನ್ನ ನಿರ್ಧಾರ ಬದಲಿಸಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಜನಿಕಾಂತ್​ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ

‘ಆ ರಾತ್ರಿ ನನಗೆ ಒಂದು ಕನಸು ಬಿದ್ದಿತ್ತು. ಸಂತನೋರ್ವ ಬಿಳಿ ಗಡ್ಡದೊಂದಿಗೆ ನದಿಯ ಮತ್ತೊಂದು ಬದಿಗೆ ಕುಳಿತಿದ್ದರು. ಅವರು ನನ್ನನ್ನು ತಮ್ಮ ಬಳಿಗೆ ಕರೆದರು. ನಾನು ಈಜಲಿಲ್ಲ, ಆದರೆ ಅವರ ಬಳಿಗೆ ಓಡಿದೆ. ಮರುದಿನ, ಆ ದೇವಮಾನವ ಯಾರು ಎಂದು ನಾನು ಕೇಳಿದಾಗ ಅದು ಶ್ರೀ ರಾಘವೇಂದ್ರ ಸ್ವಾಮಿ ಎಂದು ನನಗೆ ಎಲ್ಲರೂ ಹೇಳಿದರು. ನಾನು ಮಠದ ಬಳಿ ಹೋಗಿ ಶ್ರೀಮಂತನಾಗಬೇಕು ಎಂದು ಬೇಡಿಕೊಂಡೆ. ಪ್ರತಿ ಗುರುವಾರ ಉಪವಾಸವನ್ನು ಪ್ರಾರಂಭಿಸಿದೆ. ನಂತರ ನಾನು ಕಂಡಕ್ಟರ್ ಆದೆ, ನಂತರ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿಕೊಂಡೆ. ನಂತರ ಬಾಲಚಂದರ್ ಸರ್ ನನ್ನನ್ನು ಗುರುತಿಸಿದರು. ನಾನು ಸ್ಟಾರ್ ಆದೆ’ ಎಂದಿದ್ದರು ರಜನಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.