ಸಾಧಾರಣ ಓಪನಿಂಗ್ ಪಡೆದ ‘ಫ್ಯಾಮಿಲಿ ಸ್ಟಾರ್’; ಮುಂದೆ ಮತ್ತಷ್ಟು ಸಂಕಷ್ಟ?

|

Updated on: Apr 06, 2024 | 9:59 AM

ವಿಜಯ್ ದೇವರಕೊಂಡ ಅವರ ಮ್ಯಾನರಿಸಂ ಪ್ರತೀ ಸಿನಿಮಾದಲ್ಲೂ ಒಂದೇ ರೀತಿ ಇದೆ ಎನ್ನುವ ಭಾವನೆ ಅಭಿಮಾನಿಗಳಿಗೆ ಕಾಡುತ್ತಿದೆ. ಅವರ ಡೈಲಾಗ್ ಡೆಲಿವರಿ ಕೂಡ ಒಂದೇ ರೀತಿ ಇದೆ. ಈ ಕಾರಣಕ್ಕೆ ಕೆಲವರಿಗೆ ಅವರ ಸಿನಿಮಾ ಇಷ್ಟ ಆಗುತ್ತಿಲ್ಲ.

ಸಾಧಾರಣ ಓಪನಿಂಗ್ ಪಡೆದ ‘ಫ್ಯಾಮಿಲಿ ಸ್ಟಾರ್’; ಮುಂದೆ ಮತ್ತಷ್ಟು ಸಂಕಷ್ಟ?
ವಿಜಯ್ ದೇವರಕೊಂಡ-ಮೃಣಾಲ್
Follow us on

ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಸಂಪೂರ್ಣವಾಗಿ ತಲುಪಲು ಚಿತ್ರದ ಬಳಿ ಸಾಧ್ಯವಾಗಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಈ ಸಿನಿಮಾ ಮೊದಲ ದಿನ ಕೇವಲ 5.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಹೆಚ್ಚಿದರೆ ಮಾತ್ರ ನಿರ್ಮಾಪಕರು ಲಾಭ ಕಾಣಲಿದ್ದಾರೆ.

ವಿಜಯ್ ದೇವರಕೊಂಡ ಅವರಿಗೆ ಟಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಇದೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ರಿಲೀಸ್ ಆದ ‘ಗೀತ ಗೋವಿಂದಂ’ ಕೂಡ ಯಶಸ್ಸು ಕಂಡಿತ್ತು. ಇದಾದ ಬಳಿಕ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಕಳೆದ ವರ್ಷ ರಿಲೀಸ್ ಆದ ಸಿನಿಮಾ ‘ಖುಷಿ’ ಗೆದ್ದಿದೆಯಾದರೂ ದೊಡ್ಡ ಹಿಟ್ ಎಂದೇನು ಅನಿಸಿಕೊಂಡಿಲ್ಲ. ಈಗ ‘ಫ್ಯಾಮಿಲಿ ಸ್ಟಾರ್’ ಕೂಡ ಸಾಮಾನ್ಯ ಹಿಟ್ ಎನಿಸಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ವಿಜಯ್ ದೇವರಕೊಂಡ ಅವರ ಮ್ಯಾನರಿಸಂ ಪ್ರತೀ ಸಿನಿಮಾದಲ್ಲೂ ಒಂದೇ ರೀತಿ ಇದೆ ಎನ್ನುವ ಭಾವನೆ ಅಭಿಮಾನಿಗಳಿಗೆ ಕಾಡುತ್ತಿದೆ. ಅವರ ಡೈಲಾಗ್ ಡೆಲಿವರಿ ಕೂಡ ಒಂದೇ ರೀತಿ ಇದೆ. ಈ ಕಾರಣಕ್ಕೆ ಕೆಲವರಿಗೆ ಅವರ ಸಿನಿಮಾ ಇಷ್ಟ ಆಗುತ್ತಿಲ್ಲ. ಬುಕ್ ಮೈ ಶೋನಲ್ಲಿ ‘ಫ್ಯಾಮಿಲಿ ಸ್ಟಾರ್’ ಸಿನಿಮಾ 7.3 ರೇಟಿಂಗ್ ಪಡೆದಿದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಬದಲಾವಣೆ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ದೊಡ್ಡ ಹಿಟ್ ಕೊಟ್ಟರೂ ದೇವರಕೊಂಡಗೆ ಸಿಕ್ಕಿದ್ದು ಮಾತ್ರ ಅತೀ ಕಡಿಮೆ ಸಂಭಾವನೆ; ಒಪ್ಪಿಕೊಂಡ ನಟ

‘ಫ್ಯಾಮಿಲಿ ಸ್ಟಾರ್’ ನೋಡಿ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸಿದ್ದರು. ಸಿನಿಮಾ ಚೆನ್ನಾಗಿಲ್ಲ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದರು. ‘ಕಥೆ ತುಂಬಾನೇ ಹಳೆಯದು ಎಲ್ಲಾ ಸನ್ನಿವೇಶಗಳು ಸಿಕ್ಕಾಪಟ್ಟೆ ಬೋರಿಂಗ್. ಕೆಲವೇ ಕೆಲವು ಹಾಸ್ಯ ಸನ್ನಿವೇಶ ಚೆನ್ನಾಗಿವೆ. ಭಾವನಾತ್ಮಕವಾಗಿ ಸಿನಿಮಾ ಕಿಂಚಿತ್ತೂ ಕನೆಕ್ಟ್​ ಆಗುವುದಿಲ್ಲ’ ಎಂದು ಪ್ರೇಕ್ಷಕರೊಬ್ಬರು ಖಾರವಾಗಿ ‘ಫ್ಯಾಮಿಲಿ ಸ್ಟಾರ್​’ ಚಿತ್ರದ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ