ಸೆಲೆಬ್ರಿಟಿಗಳ ಮೇಲೆ ಅನೇಕರಿಗೆ ಕ್ರಶ್ ಇರುತ್ತದೆ. ರಶ್ಮಿಕಾ ಮಂದಣ್ಣ (Rashmika Mandanna) ಅವರು ನ್ಯಾಷನಲ್ ಕ್ರಶ್ ಎನ್ನುವ ಪಟ್ಟ ಪಡೆದಿದ್ದಾರೆ. ಸಮಂತಾ ರುತ್ ಪ್ರಭು ಅವರನ್ನು ಕಂಡರೆ ಅನೇಕರಿಗೆ ಇಷ್ಟ. ವಿಜಯ್ ದೇವರಕೊಂಡ ಅವರನ್ನು ನೋಡಿದರೆ ಇಷ್ಟ ಎಂದು ಹೇಳುವ ಅನೇಕ ಯುವತಿಯರಿದ್ದಾರೆ. ಈ ಸೆಲೆಬ್ರಿಟಿಗಳೂ ತಮ್ಮದೇ ಆದ ಕ್ರಶ್ಗಳಿದ್ದಾರೆ. ಆ ಬಗ್ಗೆ ಕೆಲವರು ಓಪನ್ ಆಗಿ ಹೇಳಿಕೊಂಡಿದ್ದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ತಮಿಳು ನಟ ದಳಪತಿ ವಿಜಯ್ ಮೇಲೆ ಕ್ರಶ್ ಇದೆ ಎಂದು ಅವರು ಹೇಳಿಕೊಂಡಿದ್ದರು. ಹಾಗಂತ ಈ ಕ್ರಶ್ ಇಂದು ನಿನ್ನೆಯದಲ್ಲ. ಬಾಲ್ಯದಿಂದಲೂ ಈ ಕ್ರಶ್ ಇತ್ತು. ‘ವಾರಿಸು’ ಸಿನಿಮಾಗೆ ಆಯ್ಕೆ ಆಗುವುದಕ್ಕೂ ಮೊದಲು ಈ ವಿಚಾರವನ್ನು ರಶ್ಮಿಕಾ ಹೇಳಿದ್ದರು. ‘ವಾರಿಸು’ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸೋ ಅವಕಾಶ ಅವರಿಗೆ ಸಿಕ್ಕಿತ್ತು. ಈ ಚಿತ್ರ ಯಶಸ್ಸು ಕಂಡಿದೆ.
ವಿಜಯ್ ದೇವರಕೊಂಡ ಅವರಿಗೆ ಸಮಂತಾ ಮೇಲೆ ಕ್ರಶ್ ಇದೆ. ‘ಕಾಫಿ ವಿತ್ ಕರಣ್’ ಶೋಗೆ ಆಗಮಿಸಿದ್ದ ವಿಜಯ್ ಅವರು ಸಮಂತಾ ಅವರನ್ನು ಡಾರ್ಲಿಂಗ್ ಎಂದು ಕರೆದಿದ್ದರು. ಈ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು. ಇಬ್ಬರೂ ‘ಖುಷಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ.
ದೀಪಿಕಾ ಪಡುಕೋಣೆ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರು ಲಿಯಾನಾರ್ಡೋ ಡಿಕಾಪ್ರಿಯೋ ಮೇಲೆ ಕ್ರಶ್ ಹೊಂದಿದ್ದಾರೆ. ಅವರ ಪೋಸ್ಟರ್ ಮನೆಯ ರೂಂನಲ್ಲಿದೆ ಎಂದು ದೀಪಿಕಾ ಈ ಮೊದಲು ರಿವೀಲ್ ಮಾಡಿದ್ದರು. ಸದ್ಯ ಅವರು ‘ಫೈಟರ್’ ಸಿನಿಮಾ ರಿಲೀಸ್ಗಾಗಿ ಕಾದಿದ್ದಾರೆ. ಜನವರಿ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ರಣಬೀರ್ ಕಪೂರ್ ಅವರಿಗೆ ಮಾಧುರಿ ದೀಕ್ಷಿತ್ ಮೇಲೆ ಕ್ರಶ್ ಇತ್ತು. ಮಾಧುರಿ ಮದುವೆ ಆದಾಗ ರಣಬೀರ್ ಕಪೂರ್ಗೆ ಸಾಕಷ್ಟು ಬೇಸರ ಆಗಿತ್ತು. ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಮಾಧುರಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಇವರು ‘ಗಾಗ್ರಾ..’ ಹಾಡಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.
ನಟಿ ನೀತು ಕಪೂರ್ ಅವರು ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಶಶಿ ಕಪೂರ್ ಮೇಲೆ ಕ್ರಶ್ ಇತ್ತು ಎನ್ನುವ ವಿಚಾರವನ್ನು ರಿವೀಲ್ ಮಾಡಿದ್ದರು.
ನಟ ಟೈಗರ್ ಶ್ರಾಫ್ ಅವರು ಹಲವು ಮಾಸ್ ಸಿನಿಮಾಗಳನ್ನು ನೀಡಿದ್ದಾರೆ. ಫಿಟ್ನೆಸ್ಗೆ ಅವರು ಹೆಚ್ಚು ಆದ್ಯತೆ ನೀಡುತ್ತಾರೆ. ‘ಕಾಫಿ ವಿತ್ ಕರಣ್ ಸೀಸನ್ 7’ ಶೋನಲ್ಲಿ ಭಾಗವಹಿಸಿದ್ದ ಟೈಗರ್ ಶ್ರಾಫ್ ಅವರು ದೀಪಿಕಾ ಪಡುಕೋಣೆ ಮೇಲೆ ಕ್ರಶ್ ಇದೆ ಎಂದು ಹೇಳಿಕೊಂಡಿದ್ದರು.
ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ. ಏಂಜಲೀನಾ ಜೋಲಿ ಮೇಲೆ ಕ್ರಶ್ ಇದೆ ಎಂದು ಅವರು ಹೇಳಿಕೊಂಡಿದ್ದರು. ಈ ವಿಚಾರವನ್ನು ಅವರು ಎರಡು ಬಾರಿ ಹೇಳಿಕೊಂಡಿದ್ದರು.
ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಕರೀನಾ ಕಪೂರ್ ಮೇಲೆ ಕ್ರಶ್ ಇದೆಯಂತೆ. ಈ ಮೊದಲು ಸಂದರ್ಶನ ಒಂದರಲ್ಲಿ ಅವರು ಈ ವಿಚಾರ ರಿವೀಲ್ ಮಾಡಿದ್ದರು.
ಇದನ್ನೂ ಓದಿ: ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್ ಜೋಡಿ?
ಸಾರಾ ಅಲಿ ಖಾನ್ ಅವರಿಗೆ ಕಾರ್ತಿಕ್ ಆರ್ಯನ್ ಮೇಲೆ ಕ್ರಶ್ ಇತ್ತು. ಇಬ್ಬರೂ ಡೇಟ್ ಮಾಡುತ್ತಿದ್ದರು. ಆದರೆ, ಈ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ.
ರಣಬೀರ್ ಕಪೂರ್ ಮೇಲೆ ಆಲಿಯಾ ಭಟ್ ಅವರಿಗೆ ಕ್ರಶ್ ಇತ್ತಂತೆ. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸೋ ಅವಕಾಶ ಸಿಕ್ಕಾಗ ಅವರು ಖುಷಿಪಟ್ಟಿದ್ದರು.
ನಟಿ ಪರಿಣೀತಿ ಚೋಪ್ರಾ ಅವರು ಇತ್ತೀಚೆಗೆ ಆಪ್ ನಾಯಕ ರಾಘವ್ ಚಡ್ಡಾ ಅವರನ್ನು ವರಿಸಿದ್ದಾರೆ. ಪರಿಣೀತಿಗೆ ಸೈಫ್ ಅಲಿ ಖಾನ್ ಮೇಲೆ ಕ್ರಶ್ ಇದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ