ಎರಡು ಬಾರಿ ಮದುವೆ ಆಗಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ: ಕಾರಣ?

Vijay Deverakonda and Rashmika Mandanna marriage: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಕಾರ್ಯಕ್ರಮ ಚಾಲ್ತಿಯಲ್ಲಿದ್ದು ಇಂದು(ಫೆಬ್ರವರಿ 25) ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಅವರು ಒಂದಲ್ಲ ಎರಡು ಬಾರಿ ಮದುವೆ ಆಗಲಿದ್ದಾರೆ!

ಎರಡು ಬಾರಿ ಮದುವೆ ಆಗಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ: ಕಾರಣ?
Vijay Rashmika

Updated on: Feb 25, 2026 | 10:05 AM

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹ ಕಾರ್ಯಕ್ರಮಗಳು ಬಲು ಅದ್ಧೂರಿಯಾಗಿ ನಡೆಯುತ್ತಿವೆ. ರಾಜಸ್ಥಾನದ ಉದಯಪುರದ ಬಳಿಯ ಐಶಾರಾಮಿ ರೆಸಾರ್ಟ್​​ನಲ್ಲಿ ಈ ಜೋಡಿ ವಿವಾಹ ಆಗುತ್ತಿದ್ದು, ಈ ಮದುವೆಯು ಬಲು ಅದ್ಧೂರಿಯಾಗಿಯೂ ಜೊತೆಗೆ ಅತ್ಯಂತ ಖಾಸಗಿಯಾಗಿಯೂ ಇರಲಿದೆ. ಈಗಾಗಲೇ ಮದುವೆ ಕಾರ್ಯಗಳು ಪ್ರಾರಂಭವಾಗಿ ವಾರವಾಗುತ್ತಾ ಬಂದಿದೆ. ಇಂದು ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಅವರು ಒಂದಲ್ಲ ಎರಡು ಬಾರಿ ಮದುವೆ ಆಗಲಿದ್ದಾರೆ!

ಹಿಂದೂ ಸಂಪ್ರದಾಯದಲ್ಲಿ ಒಂದು ಬಾರಿ ಮಾಂಗಲ್ಯಧಾರಣೆ ಮಾಡುವ ಪದ್ಧತಿ ಇದೆ. ಆದರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಎರಡೆರಡು ಬಾರಿ ಮದುವೆ ಆಗಲಿದ್ದಾರೆ. ಸಾಮಾನ್ಯವಾಗಿ ಎರಡು ಬೇರೆ ಧರ್ಮದವರು ಮದುವೆ ಆದಾಗ ಹೀಗೆ ಎರಡೆರಡು ಬಾರಿ ಮದುವೆ ಮಾಡುವ ಸಂಪ್ರದಾಯ ಚಿತ್ರರಂಗದಲ್ಲಿದೆ. ಆದರೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹಿಂದೂ ಧರ್ಮದವರೇ ಆಗಿದ್ದರೂ ಸಹ ಈ ಜೋಡಿ ಎರಡೆರಡು ಬಾರಿ ಮದುವೆ ಆಗುತ್ತಿದೆ. ಆದರೆ ಹೀಗೆ ಎರಡು ಬಾರಿ ಮದುವೆ ಆಗುತ್ತಿರುವುದು ಒಳ್ಳೆಯ ಕಾರಣಕ್ಕೆ.

ನಾಳೆ (ಫೆಬ್ರವರಿ 26) ಬೆಳಿಗ್ಗೆ ಮೊದಲಿಗೆ ವಿಜಯ್ ದೇವರಕೊಂಡ ಅವರ ಕುಟುಂಬ ಮತ್ತು ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ಬೆಳಿಗ್ಗೆ ಮದುವೆ ಕಾರ್ಯ ನಡೆಯಲಿದೆ. ಅದಾದ ಬಳಿಕ ಸಂಜೆ ವೇಳೆಗೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇಬ್ಬರೂ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸಲೆಂದು ಈ ನಿರ್ಧಾರವನ್ನು ಮಾಡಲಾಗಿದೆ.

ಇದನ್ನೂ ಓದಿ:ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ

ಈ ಮಾದರಿಯಿಂದ, ಎರಡೂ ಕಡೆಯ ಕುಟುಂಬದವರಿಗೆ ಪರಸ್ಪರರ ಕುಟುಂಬಗಳ ಸಂಪ್ರದಾಯಗಳ ಅರಿವು, ಪರಿಚಯ ಆದಂತಾಗುತ್ತದೆ. ಮತ್ತು ಎರಡೂ ಕುಟುಂಬದವರು ಪರಸ್ಪರರ ಸಂಪ್ರದಾಯ, ಆಚರಣೆಗಳನ್ನು ಗೌರವಿಸಿದಂತೆ ಆಗುತ್ತದೆ. ಹಾಗಾಗಿಯೇ ಎರಡು ಬಾರಿ ಮದುವೆ ಆಗುತ್ತಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮಗಳು ಇಂದು ನಡೆಯಲಿವೆ. ಈಗಾಗಲೇ ಅವರ ಕೆಲವಾರು ಗೆಳೆಯರು ಉದಯಪುರ ತಲುಪಿದ್ದು ಮದುವೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಸಹ ಭಾಗಿ ಆಗಿದ್ದಾರೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ಮುಗಿಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್​​ನ ತಾಜ್ ಕೃಷ್ಣ ಹೋಟೆಲ್​​ನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಆಯೋಜಿಸಲಾಗಿದೆ. ರಿಸೆಪ್ಷನ್​​ನಲ್ಲಿ ಚಿತ್ರರಂಗದ ಹಲವಾರು ಮಂದಿ ಗಣ್ಯರು ಮತ್ತು ರಾಜಕಾರಣಿಗಳು ಭಾಗವಹಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us