AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲೇ ಪ್ರೇಮದ ಊರಲಿ ನೋಡ್ತೀನಿ; ತಪಸ್ವಿನಿಗೆ ಹೇಳಿದ ವಿಜಯ್

ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ‘ಪ್ರೇಮದ ಊರಲಿ’ ಸಿನಿಮಾ ಕುರಿತು ಮಾತನಾಡಿದ್ದಾರೆ. ತಪಸ್ವಿನಿ ಜೊತೆ ಮಾತನಾಡಿದ ವಿಜಯ್, ತಾನು ಈ ಚಿತ್ರವನ್ನು ಕನ್ನಡದಲ್ಲೇ ಸಬ್‌ಟೈಟಲ್ ಜೊತೆ ನೋಡುತ್ತೇನೆ ಎಂದು ಹೇಳಿದ್ದು, ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ.

ಕನ್ನಡದಲ್ಲೇ ಪ್ರೇಮದ ಊರಲಿ ನೋಡ್ತೀನಿ; ತಪಸ್ವಿನಿಗೆ ಹೇಳಿದ ವಿಜಯ್
ವಿಜಯ್, ರಶ್ಮಿಕಾ, ತಪಸ್ವಿನಿ
ರಾಜೇಶ್ ದುಗ್ಗುಮನೆ
|

Updated on: Oct 15, 2026 | 2:44 PM

Share

‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಬಗ್ಗೆ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಕೂಡ ಮಾತನಾಡಿದ್ದಾರೆ. ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿಜಯ್, ಕನ್ನಡದಲ್ಲೇ ಈ ಚಿತ್ರವನ್ನು ನೋಡುತ್ತೇನೆ ಎಂದು ತಪಸ್ವಿನಿಗೆ ಭರವಸೆ ನೀಡಿದ್ದಾರೆ.

ವಿಜಯ್ ಹಾಗೂ ರಶ್ಮಿಕಾ ನಟನೆಯ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರುತ್ತಿದೆ. ‘ಗೀತ ಗೋವಿಂದ’ ಹಾಗೂ ‘ಡಿಯರ್ ಕಾಮ್ರೇಡ್’ ಬಳಿಕ ಈ ಜೋಡಿ ಒಂದಾಗಿದೆ. ಈ ಸಿನಿಮಾ ರಿಲೀಸ್ ವೇಳೆಗೆ ಅವರು ಪತಿ-ಪತ್ನಿ ಆಗಿದ್ದಾರೆ. ಈ ಚಿತ್ರದ ಪ್ರಚಾರದ ಭಾಗವಾಗಿ ಅನುಶ್ರೀಗೆ ಸಂದರ್ಶನ ಕೊಟ್ಟಿದ್ದಾರೆ. ಆಗ ಅನುಶ್ರೀ ಅವರು ತಪಸ್ವಿನಿ ಬಗ್ಗೆ ಹೇಳಿದ್ದಾರೆ. ತಪಸ್ವಿನಿ ಹಾಗೂ ರಶ್ಮಿಕಾ ಇಬ್ಬರೂ ಕೊಡಗಿನವರು.

ತಪಸ್ವಿನಿಗೆ ಅನುಶ್ರೀ ಕರೆ ಮಾಡಿದರು. ಅವರು ಕೊಡಗಿನವರು ಎಂದು ಅನುಶ್ರೀ ರಿವೀಲ್ ಮಾಡಿರಲಿಲ್ಲ. ರಶ್ಮಿಕಾ ಜೊತೆ ಮಾತನಾಡುವಾಗ ಕೊಡವ ಭಾಷೆಯಲ್ಲಿ ತಪಸ್ವಿನಿ ಮಾತನಾಡಿದರು. ಆಗ ರಶ್ಮಿಕಾಗೆ ತಪಸ್ವಿನಿ ಅವರು ಕೊಡಗಿನವರು ಅನ್ನೋದು ತಿಳಿಯಿತು. ಆ ಬಳಿಕ ಇಬ್ಬರೂ ಕೊಡವ ಭಾಷೆಯಲ್ಲಿ ಮಾತನಾಡಿದರು.

‘ಮೈಸೂರಿಗೆ ಬಂದಾಗ ಅಥವಾ ಕೊಡಗಿಗೆ ಬಂದಾಗ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ’ ಎಂದು ರಶ್ಮಿಕಾ ಅವರು ತಪಸ್ವಿನಿಗೆ ಭರವಸೆ ನೀಡಿದರು. ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ವಿಜಯ್​ಗೆ ಕುತೂಹಲ ಹೆಚ್ಚಾಯಿತು. ‘ಈ ಚಿತ್ರವನ್ನು ನಾನು ನೋಡುತ್ತೇನೆ’ ಎಂದರು. ಆಗ ತಪಸ್ವಿನಿ, ‘ಈ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗಿದೆ, ಹೈದರಾಬಾದ್​ನಲ್ಲಿದೆ’ ಎಂದರು. ‘ಇಲ್ಲ ನಾನು ಕನ್ನಡದಲ್ಲೇ ನೋಡುತ್ತೇನೆ, ಸಬ್​ಟೈಟಲ್ ಜೊತೆ ನೋಡುತ್ತೇನೆ. ನನಗೆ ನಿಮ್ಮ ರಿಯಲ್ ವಾಯ್ಸ್ ಕೇಳಬೇಕು’ ಎಂದು ವಿಜಯ್ ಹೇಳಿದರು.

ಇದನ್ನೂ ಓದಿ:  100 ಕೋಟಿ ರೂಪಾಯಿ ಕಲೆಕ್ಷನ್​​ನತ್ತ ಹೆಜ್ಜೆ ಇಟ್ಟ ‘ಪ್ರೇಮದ ಊರಲಿ’ ಸಿನಿಮಾ

‘ಪ್ರೇಮದ ಊರಲಿ’ ಚಿತ್ರದ ಬಗ್ಗೆ ಒಂದು ಟ್ವೀಟ್ ಮಾಡೋಣ ಎಂದು ವಿಜಯ್ ಕೋರಿದರು. ಆಗ ರಶ್ಮಿಕಾ ಅವರು ಇನ್​​ಸ್ಟಾಗ್ರಾಮ್​​ನಲ್ಲಿ ಸ್ಟೇಟಸ್ ಹಾಕಿದರು. ಇತ್ತೀಚೆಗೆ ರಶ್ಮಿಕಾ ಅವರು ಹಾಕಿದ್ದ ಈ ಸ್ಟೇಟಸ್ ಬಹಳವೇ ಸಂಚಲನ ಸೃಷ್ಟಿ ಮಾಡಿತ್ತು. ಆ ಬಳಿಕ ತಪಸ್ವಿನಿ ಕೂಡ ಖುಷಿಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More