ಕೇವಲ 3 ವಾರಗಳಲ್ಲಿ ಕಥೆ ಬರೆಯೋ ವಿಜಯೇಂದ್ರ ಪ್ರಸಾದ್ ‘SSMB 29’ ಸ್ಟೋರಿಗೆ ತೆಗೆದುಕೊಂಡಿದ್ದು ಎಷ್ಟು ವರ್ಷ?

|

Updated on: Oct 10, 2024 | 11:53 AM

‘SSMB 29’ ಅಡ್ವೆಂಚರ್ ಡ್ರಾಮಾ ಎಂದು ರಾಜಮೌಳಿ ಈ ಮೊದಲೇ ಮಾಹಿತಿ ನೀಡಿದ್ದಾರೆ. ಸದ್ಯ ಸಿನಿಮಾಗೆ ಬೇಕಿರೋ ಅಗತ್ಯ ಸಿದ್ಧತೆಗಳನ್ನು ರಾಜಮೌಳಿ ಮಾಡಿಕೊಳ್ಳುತ್ತಿದ್ದಾರೆ. ಈಗ ಚಿತ್ರಕ್ಕೆ ಕಥೆ ಬರೆದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಕೇವಲ 3 ವಾರಗಳಲ್ಲಿ ಕಥೆ ಬರೆಯೋ ವಿಜಯೇಂದ್ರ ಪ್ರಸಾದ್ ‘SSMB 29’ ಸ್ಟೋರಿಗೆ ತೆಗೆದುಕೊಂಡಿದ್ದು ಎಷ್ಟು ವರ್ಷ?
ವಿಜಯೇಂದ್ರ ಪ್ರಸಾದ್ ‘SSMB 29’ ಸ್ಟೋರಿಗೆ ತೆಗೆದುಕೊಂಡಿದ್ದು ಎಷ್ಟು ವರ್ಷ
Follow us on

ಎಸ್​ಎಸ್​ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ‘SSMB 29’ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿದೆ. ‘SSMB 29’ ಅನ್ನೋದು ​ ತಾತ್ಕಾಲಿಕ ಟೈಟಲ್ ಆಗಿದ್ದು, ಸಿನಿಮಾಗೆ ಯಾವ ಶೀರ್ಷಿಕೆ ಇಡಲಾಗುತ್ತದೆ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಸಿನಿಮಾದ ಕಥೆಯ ಬಗ್ಗೆ ದೊಡ್ಡ ಹಿಂಟ್ ನೀಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇದು ಅಡ್ವೆಂಚರ್ ಡ್ರಾಮಾ ಎಂದು ರಾಜಮೌಳಿ ಈ ಮೊದಲೇ ಮಾಹಿತಿ ನೀಡಿದ್ದಾರೆ. ಸದ್ಯ ಸಿನಿಮಾಗೆ ಬೇಕಿರೋ ಅಗತ್ಯ ಸಿದ್ಧತೆಗಳನ್ನು ರಾಜಮೌಳಿ ಮಾಡಿಕೊಳ್ಳುತ್ತಿದ್ದಾರೆ. ಈಗ ಚಿತ್ರಕ್ಕೆ ಕಥೆ ಬರೆದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಸಾಮಾನ್ಯವಾಗಿ ವಿಜಯೇಂದ್ರ ಪ್ರಸಾದ್ ಅವರು ಒಂದು ಕಥೆಯನ್ನು ತೆಗೆದುಕೊಂಡರೆ 3-4 ವಾರಗಳಲ್ಲಿ ಅಂತಿಮಗೊಳಿಸುತ್ತಾರೆ. ಅಂದರೆ, ಒಂದು ಕಥೆ ಸಿದ್ಧಪಡಿಸಲು ತೆಗೆದುಕೊಳ್ಳೋದು ಕೇವಲ ಒಂದು ತಿಂಗಳು. ಆದರೆ, ಈ ಚಿತ್ರದ ಕಥೆ ಸಿದ್ಧಪಡಿಸಲು ವಿಜಯೇಂದ್ರ ಪ್ರಸಾದ್ ತೆಗೆದುಕೊಂಡಿದ್ದು ಬರೋಬ್ಬರಿ ಎರಡು ವರ್ಷಗಳು!

ಕಥೆಯನ್ನು ಡೆವಲಪ್ ಮಾಡಲು ಇಷ್ಟು ದೀರ್ಘ ಸಮಯ ತೆಗೆದುಕೊಂಡಿದೆ ಎಂದರೆ ಸಿನಿಮಾ ಯಾವ ರೀತಿಯಲ್ಲಿ ಇರಬಹುದು ಎಂಬುದನ್ನು ನೀವು ಊಹಿಸಬಹುದು. ಈ ಮೊದಲು ವಿಜಯೇಂದ್ರ ಪ್ರಸಾದ್ ಅವರು ‘ಬಾಹುಬಲಿ’, ‘ಈಗ’, ‘ಆರ್​ಆರ್​ಆರ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಕಥೆ ಬರೆದಿದ್ದಾರೆ. ಈ ಕಾರಣಕ್ಕೆ ಅವರಿಗೆ ಸಿನಿಮಾದ ಕಥೆಯ ಬಗ್ಗೆ ನಿರೀಕ್ಷೆ ಮೂಡಿದೆ.

‘SSMB 29’ ಚಿತ್ರದ ಶೂಟಿಂಗ್ 2025ರ ಜನವರಿಯಲ್ಲಿ ಆರಂಭ ಆಗುವ ಸಾಧ್ಯತೆ ಇದೆ. 2026ರಲ್ಲಿ ಸಿನಿಮಾನ ನಿರೀಕ್ಷಿಸಬಹುದು. ಇದು ಹೊಸ ಲೋಕವನ್ನೇ ಸೃಷ್ಟಿ ಮಾಡಲಿದೆ ಎನ್ನಲಾಗಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ ಸುಮಾರು 4 ವರ್ಷಗಳನ್ನು ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ‘ರಾಜಮೌಳಿ ಬೇಡ, ಈ ನಿರ್ದೇಶಕ ಬೇಕು’; ರಣಬೀರ್ ಕಪೂರ್ ಅಚ್ಚರಿಯ ಆಯ್ಕೆ 

ರಾಜಮೌಳಿ ಅವರು ಈವರೆಗೆ ಪಾತ್ರಗಳನ್ನು ರಿವೀಲ್ ಮಾಡಿಲ್ಲ. ಈ ಚಿತ್ರದಲ್ಲಿ ಮಹೇಶ್ ಬಾಬು ನಟಿಸುತ್ತಾರೆ ಎಂಬುದಷ್ಟೇ ರಿವೀಲ್ ಆಗಿದೆ. ಅಮೇಜಾನ್ ಫಾರೆಸ್ಟ್​​ನಲ್ಲಿ ಚಿತ್ರದ ಕಥೆ ಸಾಗಲಿದೆಯಂತೆ. ಈ ಚಿತ್ರಕ್ಕಾಗಿ  ಮಹೇಶ್ ಬಾಬು ಉದ್ದ ಕೂದಲನ್ನು ಬಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.