‘ನಾನು ಪ್ರೀತಿಸೋ ಐಶ್ವರ್ಯಾ ಬೇರೆ ಯಾರನ್ನೋ ಮದುವೆ ಆಗುತ್ತಾರೆ’; ವಿಕ್ರಮ್ ಹೀಗೆ ಹೇಳಿದ್ದೇಕೆ?  

|

Updated on: Sep 04, 2024 | 2:33 PM

‘ರಾವಣ್’ ಚಿತ್ರವು ರಾಮಾಯಣ’ದ ಕಲ್ಪಿತ ವರ್ಷನ್ ಎನ್ನಬಹುದು. ‘ಪೊನ್ನಿಯಿನ್ ಸೆಲ್ವನ್’ ಚಿತ್ರವು ಚೋಳರ ಕಥೆಯನ್ನು ಹೊಂದಿದೆ. ಎರಡೂ ಸಿನಿಮಾಗೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದರು. ವಿಕ್ರಮ್ ಹಾಗೂ ಐಶ್ವರ್ಯಾ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಆದರೆ, ಕೊನೆಯಲ್ಲಿ ಇವರು ಒಂದಾಗುವುದಿಲ್ಲ.

‘ನಾನು ಪ್ರೀತಿಸೋ ಐಶ್ವರ್ಯಾ ಬೇರೆ ಯಾರನ್ನೋ ಮದುವೆ ಆಗುತ್ತಾರೆ’; ವಿಕ್ರಮ್ ಹೀಗೆ ಹೇಳಿದ್ದೇಕೆ?  
ವಿಕ್ರಂ-ಐಶ್ವರ್ಯಾ
Follow us on

ನಟ ವಿಕ್ರಮ್ ಹಾಗೂ ಐಶ್ವರ್ಯಾ ರೈ ಅವರು ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಯಿತು. ಆದರೆ, ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ ಇಬ್ಬರ ಪಾತ್ರ ಒಂದಾಗುವುದೇ ಇಲ್ಲ ಎನ್ನುವ ಬೇಸರವನ್ನು ಅವರು ಹೊರಹಾಕಿದ್ದಾರೆ. ‘ರಾವಣ್’ ಹಾಗೂ ‘ಪೊನ್ನಿಯಿನ್ ಸೆಲ್ವನ್’ ಎರಡೂ ಚಿತ್ರದಲ್ಲಿ ನನಗೆ ನಾಯಕಿ ಸಿಗುವುದಿಲ್ಲ ಎಂದು ವಿಕ್ರಮ್ ಹೇಳಿಕೊಂಡಿದ್ದಾರೆ. ಯೂಟ್ಯೂಬರ್ ರಣವೀರ್ ಅಲಹಾಬಾದಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ರಾವಣ್’ ಚಿತ್ರವು ರಾಮಾಯಣ’ದ ಕಲ್ಪಿತ ವರ್ಷನ್ ಎನ್ನಬಹುದು. ‘ಪೊನ್ನಿಯಿನ್ ಸೆಲ್ವನ್’ ಚಿತ್ರವು ಚೋಳರ ಕಥೆಯನ್ನು ಹೊಂದಿದೆ. ಎರಡೂ ಸಿನಿಮಾಗೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದರು. ವಿಕ್ರಮ್ ಹಾಗೂ ಐಶ್ವರ್ಯಾ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಆದರೆ, ಕೊನೆಯಲ್ಲಿ ವಿಕ್ರಮ್​ಗೆ ಐಶ್ವರ್ಯಾ ಸಿಗುವುದೇ ಇಲ್ಲ. ‘ರಾವಣ್’ ಎಂದು ಹಿಂದಿಯಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ‘ರಾವಣನ್’ ಎಂದು ರಿಲೀಸ್ ಮಾಡಲಾಯಿತು. ಬಾಲಿವುಡ್ ಮಾತ್ರವಲ್ಲ, ದಕ್ಷಿಣದಲ್ಲೂ ಜನರು ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದರು.

‘ರಾವಣನ್ ಚಿತ್ರದಲ್ಲಿ ನಾನು ಉತ್ತಮವಾಗಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ಮಣಿರತ್ನಂ. ಈ ಸಿನಿಮಾದಲ್ಲಿ ರಾವಣ ಹಾಗೂ ಸೀತಾ ಪ್ರೀತಿ ಬಗ್ಗೆ ಇತ್ತು. ರಾವಣನ್ ಹಾಗೂ ಪೊನ್ನಿಯೆನ್ ಸೆಲ್ವನ್ ಎರಡೂ ಚಿತ್ರಗಳಲ್ಲಿ ನಾನು ಹಾಗೂ ಐಶ್ವರ್ಯಾ ನಟಿಸುತ್ತೇವೆ. ನಾನು ಅವರನ್ನು ಪ್ರೀತಿಸುತ್ತಾರೆ. ಆದರೆ, ಅವರು ಮತ್ಯಾರದ್ದೋ ಪತ್ನಿ ಆಗಿರುತ್ತಾರೆ. ಅವನು ಇವಳನ್ನು ಪ್ರೀತಿಸುತ್ತಾನೆ. ಅವಳಿಗಾಗಿಯೇ ಈತ ಸಾಯುತ್ತಾನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎನಿಸುತ್ತಿದೆ’; ಚಿಯಾನ್ ವಿಕ್ರಮ್ ಭೇಟಿ ಮಾಡಿದ ರಿಷಬ್

ವಿಕ್ರಮ್ ನಟನೆಯ ‘ಥಂಗಳಾನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು. ಈ ಚಿತ್ರವನ್ನು ಪಾ. ರಂಜಿತ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕೋಲಾರ ಗಣಿಯ ಕಥೆಯನ್ನು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.