Anushka Sharma: ಕೊವಿಡ್​ ಸಂಕಷ್ಟದಲ್ಲಿ ಕೊಯ್ಲಿ-ಅನುಷ್ಕಾ ಕೈಕಟ್ಟಿ ಕೂತಿದ್ದಾರಾ? ಕಡೆಗೂ ಬಾಯ್ಬಿಟ್ಟ ನಟಿ

Virat Kohli | Anushka Sharma: ‘ನಿಮ್ಮೆಲ್ಲರಿಂದಾಗಿ ಈ ದಿನ ನನಗೆ ನಿಜಕ್ಕೂ ಸ್ಪೆಷಲ್​ ಎನಿಸಿದೆ. ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಅಂತ ನನಗೆ ಅನಿಸಿತು’ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

Anushka Sharma: ಕೊವಿಡ್​ ಸಂಕಷ್ಟದಲ್ಲಿ ಕೊಯ್ಲಿ-ಅನುಷ್ಕಾ ಕೈಕಟ್ಟಿ ಕೂತಿದ್ದಾರಾ? ಕಡೆಗೂ ಬಾಯ್ಬಿಟ್ಟ ನಟಿ
ವಿರಾಟ್​ ಕೊಯ್ಲಿ - ಅನುಷ್ಕಾ ಶರ್ಮಾ

Updated on: May 03, 2021 | 11:23 AM

ಇಡೀ ದೇಶವೇ ಕೊವಿಡ್​ ಕಾಟದಿಂದ ಕಷ್ಟ ಅನುಭವಿಸುತ್ತಿದೆ. ಒಂದೆಡೆ ಅನಾರೋಗ್ಯ ಸಮಸ್ಯೆಯಾದರೆ, ಮತ್ತೊಂದೆಡೆ ಕೆಲಸ ಇಲ್ಲದೆ ಜನರು ಕಂಗೆಟ್ಟಿದ್ದಾರೆ. ಕೊರೊನಾ ಕರ್ಫ್ಯೂ ಕಾರಣದಿಂದ ಬಹುತೇಕ ವ್ಯಾಪಾರ ವ್ಯವಹಾರಗಳು ಕುಸಿದಿವೆ. ಇನ್ನು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಒದ್ದಾಡುತ್ತಿರುವವರಿಗೆ ಲೆಕ್ಕವೇ ಇಲ್ಲ. ಈ ಸಂದರ್ಭದಲ್ಲಿ ಕೆಲವು ಸೆಲೆಬ್ರಿಟಿಗಳು ಕೈಕಟ್ಟಿ ಕುಳಿತಿದ್ದಾರೆ. ಯಾರಿಗೆ ಏನಾದರೂ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮನೆಯಲ್ಲಿ ಹಾಯಾಗಿ ಇದ್ದಾರೆ. ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್​ ಕೊಯ್ಲಿ ಏನು ಮಾಡ್ತಿದ್ದಾರೆ? ಆ ಬಗ್ಗೆ ಅನುಷ್ಕಾ ಮಾತನಾಡಿದ್ದಾರೆ.

ಮೇ 1ರಂದು ಅನುಷ್ಕಾ ಶರ್ಮಾ ಬರ್ತ್​ಡೇ. ಆದರೆ ಅವರು ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಿಕೊಂಡಿಲ್ಲ. ತಮಗೆ ಸೋಶಿಯಲ್​ ಮೀಡಿಯಾ ಮೂಲಕ ವಿಶ್​ ಮಾಡಿರುವ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ. ಆ ಸಲುವಾಗಿ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿರುವ ಅವರು ಕೆಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

‘ನಿಮ್ಮೆಲ್ಲರಿಂದಾಗಿ ಈ ದಿನ ನನಗೆ ನಿಜಕ್ಕೂ ಸ್ಪೆಷಲ್​ ಎನಿಸಿದೆ. ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎಂದು ನನಗೆ ಅನಿಸಿತು. ನೀವು ಮಾಡಿದ ಎಲ್ಲ ಮೆಸೇಜ್​ ನೋಡಿದ್ದೇನೆ. ಅದೇ ರೀತಿ ನಿಮಗಾಗಿ ನನ್ನ ಕಡೆಯಿಂದ ಒಂದು ಮುಖ್ಯವಾದ ಮೆಸೇಜ್​ ಇದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಜೊತೆಯಾಗಿದ್ದು ದೇಶಕ್ಕೆ ಬೆಂಬಲ ನೀಡಬೇಕು’ ಎಂದು ಅನುಷ್ಕಾ ಹೇಳಿದ್ದಾರೆ.

‘ನಾನು ಮತ್ತು ವಿರಾಟ್​ ಕೂಡ ತಮ್ಮ ಪಾಲಿನ ಕೆಲಸ ಮಾಡುತ್ತಿದ್ದೇವೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ. ನೀವು ಕೂಡ ಈ ಅಭಿಯಾನದಲ್ಲಿ ಭಾಗಿ ಆಗಬಹುದು. ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂಬುದು ನೆನಪಿರಲಿ. ಎಲ್ಲರೂ ಸುರಕ್ಷಿತವಾಗಿರಿ. ನಿಮ್ಮ ಕಾಳಜಿ ವಹಿಸಿ’ ಎಂದು ಅವರು ಹೇಳಿದ್ದಾರೆ. ಕೊರೊನಾದಿಂದಾಗಿರುವ ಕಷ್ಟ ಕಾಲದಲ್ಲಿ ವಿರಾಟ್​-ಅನುಷ್ಕಾ ಮಾಡಿರುವ ಆ ಅಭಿಯಾನದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ:

 ವೈರಲ್ ವಿಡಿಯೋ: ಕಿಂಗ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕಾ! ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದ ನೆಟ್ಟಿಗರು

Virat Kohli, Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಳಿ ಇರುವ 4 ಅತಿ ದುಬಾರಿ ವಸ್ತುಗಳಿವು!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us